ಭದ್ರಾ ಹಿನ್ನೀರಿನ ತಟದಲ್ಲಿ ಕಾಡಾನೆಗಳ ಹಿಂಡು

10 nrp 3 ane
ಎನ್.ಆರ್.ಪುರ ತಾಲೂಕು ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ವಿಠಲ ಗ್ರಾಮದ ಹಾಗಲಮನೆ, ಹಳೇದಾನಿ ವಾಸ, ಮುದುಕೂರು ಭಾಗದ ಭದ್ರಾ ಹಿನ್ನೀರಿನ ತಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದು.
Published on

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ವಿಠಲ ಗ್ರಾಮದ ಹಾಗಲಮನೆ, ಹಳೇದಾನಿ ವಾಸ, ಮುದುಕೂರು ಭಾಗದ ಭದ್ರಾ ಹಿನ್ನೀರಿನ ತಟದಲ್ಲಿ ಸುಮಾರು 30 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಅರಣ್ಯ ಇಲಾಖೆಯವರು ಸೋಮವಾರ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿ ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ಭಾನುವಾರ ಸಂಜೆ ವಿಠಲ ಗ್ರಾಮದ ಹಾಗಲಮನೆಯ ದೇವಸ್ಥಾನದ ಸಮೀಪದ ಭದ್ರಾ ಹಿನ್ನೀರಿನ ತಟದಲ್ಲಿ ಕಾಡಾನೆಗಳ ಹಿಂಡು ಗ್ರಾಮಸ್ಥರಿಗೆ ಕಂಡಿದ್ದು ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಕಾರ್ಯಾಚರಣೆಗೆ ಇಳಿದ ಎಲಿೆಂಟ್ ಟಾಸ್ಕ್‌ಫೋರ್ಸ್ ತಂಡ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾಡಾನೆಗಳನ್ನು ಭದ್ರಾ ಹಿನ್ನೀರಿನ ಆಚೆ ಇರುವ ಭದ್ರಾ ಅಭಯಾರಣ್ಯಕ್ಕೆ ಅಟ್ಟುವ ಪ್ರಯತ್ನ ಮುಂದುವರಿಸಿದ್ದಾರೆ. ಭದ್ರಾ ಹಿನ್ನೀರು ಕಡಿಮೆ ಇರುವುದರಿಂದ ಕಾಡಾನೆಗಳು ಆಚೆ ದಡಕ್ಕೆ ಹೋಗಬಹುದು ಎಂಬುದು ಅರಣ್ಯ ಇಲಾಖೆಯವರ ನಿರೀಕ್ಷೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net