ಅಮೂಲ್ಯಾ ಹಿಂದಿರುವ ಪಾಕಿಸ್ತಾನಿ ಏಜೆಂಟರನ್ನ ಪತ್ತೆ ಮಾಡಬೇಕು: ಅಪ್ಪ ಅಮ್ಮನಿಗೇ ಬೇಡವಾದ ಅವಳು ನಮಗೂ ಬೇಡವೆಂದ ಸಂಸದ

muniswamy
Published on

ಕೋಲಾರ: ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಅಮೂಲ್ಯ ಬಗ್ಗೆ ಬಿಜೆಪಿ ಸಂಸದ ಮುನಿಸ್ವಾಮಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿರುವ ಸಂಸದ ಮುನಿಸ್ವಾಮಿ, "ಸಿಎಎ ವಿರೋಧಿಸಿ ಹೋರಾಡುತ್ತಿರುವವರಿಗೆ ಪಾಕಿಸ್ತಾನದ ಕುಮ್ಮಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಹೋರಾಟದಲ್ಲಿ ಪಾಕಿಸ್ತಾನದ ಪರ ಜೈಕಾರ ಹಾಕಿರೋದನ್ನ ನೋಡಿದರೆ ಇವರು ಪಾಕಿಸ್ತಾನಿ ಏಜೆಂಟರುಗಳನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎನಿಸುತ್ತದೆ." ಎಂದು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಹುಟ್ಟಿ ಬೆಳೆದು ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಕಾನೂನಿನಲ್ಲಿ ತಿದ್ದುಪಡಿ ತಂದು ಸರಿಯಾದ ಶಿಕ್ಷೆ ನೀಡಬೇಕು. ಅಮೂಲ್ಯಾಳಿಗೆ ಇನ್ನೂ ಸರಿಯಾಗಿ ತಿಳಿವಳಿಕೆ ಇಲ್ಲ. ಆಕೆಯ ಹಿಂದಿರುವ ಪಾಕ್​ ಏಜೆಂಟರನ್ನು ಪತ್ತೆ ಹಚ್ಚಬೇಕು ಎಂದು ಅವರು ನುಡಿದಿದ್ದಾರೆ.

ಆಕೆಯ ತಂದೆ ತಾಯಿಗೇ ಬೇಡವಾದ ಅವಳು ನಮಗೂ ಬೇಡ. ಸೆರೆಮನೆಯಲ್ಲಿಟ್ಟು ಸರಿಯಾದ ಶಿಕ್ಷೆ ಕೊಡಬೇಕು ಎಂದು ಸಂಸದ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net