ಟ್ರಾಫಿಕ್‌ನಲ್ಲಿ ಸಿಲುಕಿದ್ರೂ ಶಾಪಿಂಗ್ ಮಾಡ್ಬೋದು; ಬೆಂಗಳೂರಿನ ಆಟೋನೇ ಈಗ ‘ಮಿನಿ ಮಾಲ್’! | Auto Mini Mall

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಮಯ ವ್ಯರ್ಥವಾಗದಂತೆ ಆಟೋವನ್ನೇ ‘ಮಿನಿ ಶಾಪಿಂಗ್ ಮಾಲ್’ ಆಗಿ ಬದಲಿಸಿರುವ ಚಾಲಕನ ಕ್ರಿಯೇಟಿವ್ ಐಡಿಯಾ ವೈರಲ್ ಆಗಿದೆ.
A ‘Mini Mall’ in an Auto
ಬೆಂಗಳೂರಿನ ಆಟೋದಲ್ಲಿ ಕಿವಿಯೋಲೆ, ಬಳೆ ಮತ್ತು ಸರಗಳಿರುವ ‘ಮಿನಿ ಮಾಲ್’
Published on: 

Bengaluru Traffic: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿದ್ರೆ ಸಮಯ ಕಳೆಯೋದೇ ಕಷ್ಟ. ಆದ್ರೆ ಇದೇ ಟ್ರಾಫಿಕ್ ಸಮಯವನ್ನೇ ವ್ಯಾಪಾರಕ್ಕೆ ಬಳಸಿಕೊಂಡಿರುವ ಆಟೋ ಚಾಲಕರೊಬ್ಬರ ಐಡಿಯಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾನ್ಯ ಆಟೋವನ್ನೇ ಚಾಲಕ ‘ಮಿನಿ ಶಾಪಿಂಗ್ ಮಾಲ್’ ಆಗಿ ಬದಲಿಸಿದ್ದಾರೆ. ಪ್ರಯಾಣಿಕರು ಕುಳಿತುಕೊಳ್ಳುವ ಜಾಗದ ಎದುರು ಸಣ್ಣ ಶೆಲ್ಫ್‌ಗಳು ಹಾಗೂ ಡಿಸ್ಪ್ಲೇ ವ್ಯವಸ್ಥೆ ಮಾಡಿದ್ದು, ಅದರಲ್ಲಿ ಕಿವಿಯೋಲೆ, ಬಳೆ, ಸರ ಸೇರಿದಂತೆ ವಿವಿಧ ಬಗೆಯ ಕೃತಕ ಆಭರಣಗಳನ್ನು ಇಡಲಾಗಿದೆ.

ಆಟೋದಲ್ಲೇ ಶಾಪಿಂಗ್

ಪ್ರಯಾಣದ ವೇಳೆ ಪ್ರಯಾಣಿಕರಿಗೆ ಇಷ್ಟವಾದ ಆಭರಣ ಕಂಡ್ರೆ ಅಲ್ಲೇ ಆಯ್ಕೆ ಮಾಡಿಕೊಂಡು ಖರೀದಿಸಬಹುದು. ಖರೀದಿಸಿದ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಲು ಡಿಸ್ಪ್ಲೇ ಪಕ್ಕದಲ್ಲೇ ಸಣ್ಣ ಪೇಪರ್ ಕವರ್‌ಗಳನ್ನೂ ಇಡಲಾಗಿದೆ. ಅಷ್ಟೇ ಅಲ್ಲ, ಆಟೋ ಪ್ರಯಾಣದ ಹಣದ ಜತೆಗೆ ಖರೀದಿಸಿದ ಆಭರಣದ ಹಣವನ್ನೂ ಚಾಲಕನಿಗೇ ಪಾವತಿಸಬಹುದಾಗಿದೆ. ಅಂದರೆ ಒಂದೇ ಆಟೋದಲ್ಲಿ ಪ್ರಯಾಣವೂ ಆಯ್ತು, ಶಾಪಿಂಗ್ ಕೂಡ ಆಯ್ತು.

‘ಪೀಕ್ ಬೆಂಗಳೂರು’ ಎಂದ ನೆಟ್ಟಿಗರಿಂದ

ಈ ವಿಶಿಷ್ಟ ಆಟೋದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಕಳೆಯುವ ಸಮಯವನ್ನೇ ಶಾಪಿಂಗ್‌ಗೆ ಬಳಸಿಕೊಂಡಿರುವ ಚಾಲಕನ ಐಡಿಯಾಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಹಿಂದೂ ಹುಡುಗರತ್ತ ಮುಸ್ಲಿಂ ಹುಡುಗಿಯರ ಆಕರ್ಷಣೆ ಹೆಚ್ಚಾಗ್ತಿದೆ; ಮೌಲಾನಾ ಸಾಜಿದ್ ರಶೀದಿ ಹೇಳಿದ್ದೇನು? | Maulana Sajid Rashidi

ಹಲವರು ಇದನ್ನು ‘ಪೀಕ್ ಬೆಂಗಳೂರು ಮೂಮೆಂಟ್’ ಎಂದು ಕರೆದಿದ್ದಾರೆ. ಟ್ರಾಫಿಕ್‌ನಿಂದ ಬೇಸರವಾಗುವ ಬದಲು ಅದೇ ಸಮಯವನ್ನು ಹೊಸ ರೀತಿಯಲ್ಲಿ ಬಳಸಿಕೊಂಡಿರುವ ಈ ಆಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಮತ್ತೊಂದು ಕ್ರಿಯೇಟಿವ್ ಐಡಿಯಾ ಆಗಿ ಗಮನ ಸೆಳೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net