ದಸರಾದಲ್ಲಿ ಗಮನ ಸೆಳೆದ 'ಮಹಿಳಾ ಸುರಕ್ಷತೆ' ಅಭಿಯಾನ: ಅತ್ಯಾಚಾರಿಗಳಿಗೆ ಮರಣದಂಡನೆಗೆ ಆಗ್ರಹ! | Women safety campaign

ದಸರಾ ಹಬ್ಬದ ಸಡಗರದ ನಡುವೆಯೇ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ಮಹಿಳಾ ಸುರಕ್ಷತೆ ಮತ್ತು ಅತ್ಯಾಚಾರ ತಡೆಯುವ ಕುರಿತು ವಿಶೇಷ ಜಾಗೃತಿ ಮೂಡಿಸಲಾಯಿತು. ಈ ಅಪರೂಪದ ಅಭಿಯಾನದ ಪೂರ್ಣ ಮಾಹಿತಿ ಇಲ್ಲಿದೆ.
Dasara Women safety campaign
ಕೊಡಗು ದಸರಾ ಮೆರವಣಿಗೆಯಲ್ಲಿ ಮಹಿಳಾ ಸುರಕ್ಷತೆಯ ಸಾರುವ ವಿಶೇಷ ಅಭಿಯಾನ
Published on: 

Kodagu Dasara: ಕೊಡಗಿನಲ್ಲಿ ಸಂಭ್ರಮದಿಂದ ನಡೆದ ದಸರಾ ದಶ ಮಂಟಪೋತ್ಸವದ ಮೆರವಣಿಗೆಯಲ್ಲಿ ಮಹಿಳಾ ಸುರಕ್ಷತೆಯ ಜಾಗೃತಿ ಅಭಿಯಾನವೊಂದು ನಡೆದಿತ್ತು. ಸಾರ್ವಜನಿಕರು ಹಾಗೂ ಪ್ರವಾಸಿಗರ ಗಮನ ಸೆಳೆದ ಈ ಅಭಿಯಾನದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೋಣಿಕೊಪ್ಪಲಿನಲ್ಲಿ ದಸರಾ ಹಬ್ಬದ ವೈಭವದ ಮೆರವಣಿಗೆಯ ನಡುವೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕೊನೆಗಾಣಿಸಲು ಈ ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು. ಮಹಿಳೆಯರ ಸುರಕ್ಷತೆ ಪ್ರಮುಖ ಆದ್ಯತೆಯಾಗಬೇಕು ಮತ್ತು ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸುವ ಸಂದೇಶಗಳೊಂದಿಗೆ ಸಾಂಕೇತಿಕ ಮೆರವಣಿಗೆ ನಡೆಸಲಾಯಿತು.

ಮಹಿಳಾ ಸುರಕ್ಷತೆಯ ಸಂದೇಶ

ಅಭಿಯಾನದ ವೇಳೆ ‘ಅತ್ಯಾಚಾರ ತಡೆಯಿರಿ, ಮಹಿಳೆಯರನ್ನು ಗೌರವಿಸಿ’ (Stop Rape, Respect Women) ಎಂಬ ಫಲಕಗಳನ್ನು ಪ್ರದರ್ಶಿಸಲಾಯಿತು. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವುದರ ಜತೆಗೆ, ಅತ್ಯಾಚಾರಿಗಳಿಗೆ ಕಠಿಣ ಮರಣದಂಡನೆ ವಿಧಿಸಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ: Dorothy movie review: ದುರಂತದ ಅಂತ್ಯಕ್ಕೆ ಬಿತ್ತು ಬ್ರೇಕ್: ಟ್ರಾನ್ಸ್‌ಜೆಂಡರ್ ಕಥೆಗೆ ಸುಖಾಂತ್ಯ, ಸಿನಿಪ್ರೇಮಿಗಳ ಮನಗೆದ್ದ 'ಡೊರೊತಿ'!

ವಿಶೇಷ ಅಭಿಯಾನಕ್ಕೆ ಜನಮೆಚ್ಚುಗೆ

ಹಬ್ಬದ ಸಂಭ್ರಮ ಮತ್ತು ವೈಭವದ ನಡುವೆಯೂ ಮಹಿಳಾ ಸುರಕ್ಷತೆಯ ಕಳಕಳಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ಮೂಡಿಸಿದ ಈ ವಿಶೇಷ ಅಭಿಯಾನಕ್ಕೆ ಜನರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net