ಕೋವಿಡ್​-19 ಹರಡುವಿಕೆ ತಡೆಯಲು ಪೋಲಿಯೋ ಕಣ್ಗಾವಲು ಸಿಬ್ಬಂದಿ ಬಳಕೆ

Corona
Published on

ನವದೆಹಲಿ: ಪೋಲಿಯೋ ವಿರುದ್ಧ ಹೋರಾಡಿ ಗೆಲ್ಲಲು ಭಾರತಕ್ಕೆ ಸಹಾಯವಾದ ಅತ್ಯುತ್ತಮ ಪರಿಪಾಠಗಳು ಹಾಗೂ ಪ್ರಮುಖ ಸಂಪನ್ಮೂಲಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್​- 19 ಎದುರಿಸಲು ಡಬ್ಲ್ಯುಎಚ್​ಒ ರಾಷ್ಟ್ರೀಯ ಪೊಲಿಯೋ ಕಣ್ಗಾವಲು ಜಾಲ ಮತ್ತು ಇತರ ಕ್ಷೇತ್ರ ಸಿಬ್ಬಂದಿಯನ್ನು ವ್ಯವಸ್ಥಿತವಾಗಿ ತೊಡಗಿಸಿಕೊಳ್ಳಲು ಮುಂದಾಗಿದೆ.

ಭಾರತ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಒಟ್ಟಾಗಿ ಜಗತ್ತಿಗೆ ನಮ್ಮ ಶಕ್ತಿ, ಸಾಮರ್ಥ್ಯವನ್ನು ತೋರಿಸಿವೆ. ನಮ್ಮ ಸಂಪೂರ್ಣ, ಸಂಯೋಜಿತ ಒಗ್ಗಟ್ಟಿನ ಕೆಲಸದಿಂದಾಗಿ ನಾವು ಈ ಪೊಲಿಯೋ ತೊಡೆದುಹಾಕಲು ಸಾಧ್ಯವಾಯಿತು. ಇಂದು ನಿಮ್ಮ ಶಕ್ತಿ, ಸಾಮರ್ಥ್ಯ ಹಾಗೂ ನಾವು ಒಟ್ಟಿಗೆ ಮಾಡಬಹುದಾದ ದೊಡ್ಡ ಕಾರ್ಯಗಳನ್ನು ನಿಮಗೆ ನೆನಪಿಸಲು ಬಯಸುತ್ತೇನೆ. ನಿಮ್ಮ ಜಂಟಿ ಪ್ರಯತ್ನದಿಂದಾಗಿ ನಾವು ಕರೊನಾ ಮಹಾಮಾರಿಯ ವಿರುದ್ಧ ಗೆಲುವು ಸಾಧಿಸಿ ಜೀವಗಳನ್ನು ಉಳಿಸಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್​ ತಿಳಿಸಿದ್ದಾರೆ.

ಸಚಿವರು ಹಾಗೂ ಡಬ್ಲ್ಯುಎಚ್​ಒದ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ಡಾ. ಪೂನಮ್​ ಖೇತ್ರಪಾಲ್​​, ಡಬ್ಲುಎಚ್​ಒ ಮತ್ತು ದೇಶಾದ್ಯಂತ ಸಾವಿರಾರು ಪ್ರದೇಶಗಳಲ್ಲಿರುವ ಇತರ ಕ್ಷೇತ್ರ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದರು.

ಕೋವಿಡ್ - 19 ಕಣ್ಗಾವಲು ಬಲಪಡಿಸುವಲ್ಲಿ ದತ್ತಾಂಶ ನಿರ್ವಹಣೆ, ಮೇಲ್ವಿಚಾರಣೆ, ಸ್ಥಳೀಯ ಪರಿಸ್ಥಿತಿ, ಸವಾಲುಗಳನ್ನು ಎದುರಿಸುವಲ್ಲಿ ಎನ್​ಪಿಎಸ್​ಪಿ ತಂಡದ ಬಲ ಎನ್​ಸಿಡಿಸಿ, ಐಡಿಎಸ್​ಪಿ, ಐಸಿಎಂಆರ್​ ಕಾರ್ಯ ಚಟುವಟಿಕೆಗಳಿಗೆ ಸಹಾಯವಾಗಲಿದೆ.

ಬಹು ಮುಖ್ಯವಾಗಿ ಡಬ್ಲ್ಯಎಚ್​ಒದ ಕ್ಷೇತ್ರ ಸಿಬ್ಬಂದಿ ಕ್ಷಯ ಹಾಗೂ ಉಷ್ಣವಲಯದ ನಿರ್ಲತ ಕಾಯಿಲೆಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವಿಕೆಯಲ್ಲಿ ಹಾಗೂ ಕಣ್ಗಾವಲು ಮತ್ತಿತ್ತರ ರೋಗ ನಿಮೂರ್ಲನೆಯಲ್ಲಿ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಖೇತ್ರಪಾಲ್​ ತಿಳಿಸಿದ್ದಾರೆ.

1994ರಲ್ಲಿ ದೆಹಲಿಯ ಆರೋಗ್ಯ ಸಚಿವರಾಗಿದ್ದಾಗ ಪೋಲಿಯೋ ನಿಮೂರ್ಲನೆಗೆ ಹಲವು ಪ್ರಮುಖ ಉಪಕ್ರಮಗಳನ್ನು ಪರಿಚಯಿಸಿದ್ದಕ್ಕಾಗಿ ಡಾ. ಹರ್ಷವರ್ಧನ್​ ಅವರನ್ನು ಖೇತ್ರಿ ಅಭಿನಂದಿಸಿದರು. ಅವರ ಉಪಕ್ರಮಗಳನ್ನು ಇತರ ದೇಶಗಳು ಅಳವಡಿಸಿಕೊಂಡವು.

ಪೋಲಿಯೋ ನಿಮೂರ್ಲನೆಯ ನಂತರದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಕಣ್ಗಾವಲು ಯೋಜನೆ ಎಂದು ಮರುನಾಮಕರಣಗೊಂಡಿರುವ ಡಬ್ಲ್ಯುಎಚ್​ಒ ರಾಷ್ಟ್ರೀಯ ಕಣ್ಗಾವಲು ಯೋಜನೆ ಎಬೋಲಾ ಸೇರಿದಂತೆ ಹಲವು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಪ್ರತಿಕ್ರಿಯೆಯನ್ನು ಬೆಂಬಲಿಸಿದೆ. ಅದರ 50 ಕಣ್ಗಾವಲು ವೈದ್ಯಕಿಯ ಅಧಿಕಾರಿಗಳನ್ನು ಆಫ್ರಿಕಾಕ್ಕೆ ನಿಯೋಜಿಸಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net