

ಬಾಗಲಕೋಟೆ: ಜಮಖಂಡಿ ನಗರದ ರಾಮೇಶ್ವರ ದೇವಸ್ಥಾನ ಮುಂಭಾಗ ಶನಿವಾರ ಬೆಳ್ಳಂಬೆಳಗ್ಗೆ ಶಾಕ್ ಕಾದಿತ್ತು! ಇಲ್ಲಿನ ರಾಮತೀರ್ಥ ಹೊಂಡದಲ್ಲಿ ಸಾವಿರಾರು ಮೀನುಗಳ ಮಾರಣಹೋಮ ಕಂಡ ಜನರು ಕೆಲಕಾಲ ಆತಂಕಗೊಂಡಿದ್ದರು.
ಹೊಂಡದ ನೀರಿನಲ್ಲಿ ಸತ್ತಿರುವ ಸಾವಿರಾರು ಮೀನುಗಳು ತೇಲುತ್ತಿದ್ದ ದೃಶ್ಯ ಅರೆ ಕ್ಷಣ ಎಂತಹವರಿಗೂ ಗಾಬರಿ ತರಿಸುವಂತಿತ್ತು. ಮೀನುಗಳ ಮಾರಣಹೋಮಕ್ಕೆ ಕಾರಣ ತಿಳಿದು ಬಂದಿಲ್ಲ. ನಗರಸಭೆ ಕಾರ್ಮಿಕರು ಸತ್ತ ಮೀನುಗಳನ್ನು ಹೊರತೆಗೆದು ಹೊಂಡ ಸ್ವಚ್ಛಗೊಳಿಸಿದ್ದಾರೆ.