ನೊಬೆಲ್ ಪ್ರಶಸ್ತಿ ಪ್ರಕಟ: ಇದು ಇತಿಹಾಸದಲ್ಲೇ ಇದೇ ಮೊದಲು!

Nobel F
Published on

ನವದೆಹಲಿ: ರಸಾಯನಶಾಸ್ತ್ರ ವಿಭಾಗದಲ್ಲಿ ನೀಡಲಾಗುವ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ಈ ಸಲದ ಪ್ರಶಸ್ತಿ ಪ್ರಕಟಣೆ ಇತಿಹಾಸದಲ್ಲೇ ಇದೇ ಮೊದಲು ಎನ್ನುವಂಥ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಿದೆ.

ದ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಮೂವರು ರಸಾಯನಶಾಸ್ತ್ರಜ್ಞರಿಗೆ ನೊಬೆಲ್ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಕೆರೊಲಿನ್ ಆರ್. ಬರ್ಟೊಝಿ, ಮೊರ್ಟೆನ್ ಮೆಲ್ಡಲ್​ ಮತ್ತು ಕಾರ್ಲ್ ಬರ್ರಿ ಶಾರ್ಪ್​​ಲೆಸ್​ ಅವರಿಗೆ 'ಫಾರ್​ ದ ಡೆವಲಪ್​ಮೆಂಟ್​ ಆಫ್ ಕ್ಲಿಕ್​ ಕೆಮಿಸ್ಟ್ರಿ ಆ್ಯಂಡ್​ ಬಯೋಆರ್ಥೊಗೊನಲ್​ ಕೆಮಿಸ್ಟ್ರಿ' ವಿಷಯಕ್ಕೆ ಸಂಬಂಧಿಸಿದಂತೆ ನೊಬೆಲ್ ಪ್ರಶಸ್ತಿ ಘೋಷಿಸಿದೆ.

ಈ ಸಲದ ನೊಬೆಲ್ ಪ್ರಶಸ್ತಿಯನ್ನು ಈ ಮೂವರೂ ಹಂಚಿಕೊಳ್ಳಲಿದ್ದು, ಆ ಪೈಕಿ ಒಬ್ಬರಿಗೆ ಇದು ಎರಡನೇ ನೊಬೆಲ್ ಪ್ರಶಸ್ತಿ. ಕಾರ್ಲ್ ಬರ್ರಿ ಶಾರ್ಪ್​ಲೆಸ್​ ರಸಾಯನಶಾಸ್ತ್ರ ವಿಭಾಗದಲ್ಲಿ ಎರಡನೇ ಸಲ ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದು, ಇದು ಇತಿಹಾಸದಲ್ಲೇ ಇದೇ ಮೊದಲು. ಅಮೆರಿಕನ್​ ರಸಾಯನಶಾಸ್ತ್ರಜ್ಞರಾಗಿರುವ ಇವರು 20021ರಲ್ಲೂ ನೊಬೆಲ್ ಪ್ರಶಸ್ತಿ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net