

ಮುಂಬೈ: ( Tansuhree Dutta ) ಕೆಲವು ದಿನಗಳ ಹಿಂದೆ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿರುವ ನಟಿ ತನುಶ್ರೀ ದತ್ತಾ ಈಗ ಶ್ರಾವಣ ಮಾಸದಲ್ಲಿ ಉಪವಾಸವನ್ನು ಮಾಡಿ ಮಾಂಸಾಹಾರ ಸೇವಿಸಿದ್ದಕ್ಕಾಗಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.
ಶ್ರಾವಣ ಸಮಯದಲ್ಲಿ ಉಪವಾಸ ಮಾಡಿ ಸಂಜೆ 7 ಗಂಟೆಗೆ ಉಪವಾಸ ಮುಗಿಸಿದ್ದಾಗಿ ತನುಶ್ರೀ ಪೋಸ್ಟ್ ಹಂಚಿಕೊಂಡಿದ್ದಾರೆ. ಉಪವಾಸ ಮುರಿಯುವಾಗ ಅನ್ನ, ಬೇಳೆ ಮತ್ತು ಮಟನ್ ಪದಾರ್ಥ ತಿಂದಿದ್ದರು. ಈ ರೀತಿಯ ಉಪವಾಸ ನನಗೆ ಅತ್ಯುತ್ತಮವಾದದ್ದು. ಉಪವಾಸವೂ ಸಹ ನಡೆಯುತ್ತದೆ, ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಂತರ ಉಪವಾಸವನ್ನು ಮುರಿಯುವಾಗ ಹೆಚ್ಚಿನ ಪ್ರೋಟೀನ್ ಮತ್ತು ಪೌಷ್ಟಿಕ ಆಹಾರವನ್ನು ಸಹ ಸೇವಿಸಲಾಗುತ್ತದೆ. ಇದರಿಂದಾಗಿ, ದೇಹವು ಯಾವಾಗಲೂ ಆರೋಗ್ಯಕರವಾಗಿರುತ್ತದೆ. ಬಂಗಾಳದಲ್ಲಿ, ಎಲ್ಲರೂ ಒಂದೇ ರೀತಿಯಲ್ಲಿ ಉಪವಾಸವನ್ನು ಮುರಿಯುತ್ತಾರೆ. ನಾವು ಸಂಜೆಯವರೆಗೆ ನೀರು ಮಾತ್ರ ಕುಡಿಯುವ ಮೂಲಕ ಉಪವಾಸ ಮಾಡುತ್ತೇವೆ ಮತ್ತು ಸೂರ್ಯಾಸ್ತದ ನಂತರ ನಾವು ದೇವತೆಗೆ ನೈವೇದ್ಯ ಅರ್ಪಿಸುತ್ತೇವೆ ಮತ್ತು ಮೇಕೆ ಮಾಂಸವನ್ನು ತಿನ್ನುತ್ತೇವೆ’ ಎಂದಿದ್ದಾರೆ. ಈ ಕುರಿತಾಗಿ ನೆಟ್ಟಿಗರು ನಟಿಯನ್ನಯ ಟ್ರೋಲ್ ಮಾಡುತ್ತಿದ್ದರು.
‘ಪ್ರತಿಯೊಂದು ಸಂಸ್ಕೃತಿಯೂ ವಿಭಿನ್ನವಾಗಿರುತ್ತದೆ. ಆದ್ದರಿಂದ ಯಾರನ್ನೂ ಟೀಕಿಸಬೇಡಿ. ಸಂಪೂರ್ಣ ವೀಡಿಯೊವನ್ನು ನೋಡಿ ನಂತರ ಕಾಮೆಂಟ್ ಮಾಡಿ. ಧಾರ್ಮಿಕ ಜನರು ತಮ್ಮ ದುಷ್ಟ ಆಲೋಚನೆಗಳೊಂದಿಗೆ ಮಾತ್ರ ಇಲ್ಲಿಗೆ ಬರುತ್ತಾರೆ’ ಎಂದಿದ್ದಾರೆ.
ತನುಶ್ರೀ ದತ್ತಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಅಪ್ಲೋಡ್ ಮಾಡಿ ತಮ್ಮ ಮನೆಯಲ್ಲಿಯೇ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಶ್ರಾಣವಣದಲ್ಲಿ ಮಟನ್ ತಿಂದು ಉಪವಾಸ ಬಿಡುತ್ತೇನೆಂದು ಹೇಳುವ ಮೂಲಕವಾಗಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.