VIDEO| ತನ್ನನ್ನು ಗುರುತಿಸಲು ವಿಫಲವಾದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಸಚಿವರ ಆಕ್ರೋಶ!

Bihar Minister
Published on

ಪಟನಾ: ಫೆ. 14ರಂದು ಬಿಹಾರದ ಸೈವಾನ್ ಜಿಲ್ಲೆಗೆ ಆಸ್ಪತ್ರೆಯ ಶಂಕುಸ್ಥಾಪನೆ ನೇರವೇರಿಸಲು ಆಗಮಿಸಿದ್ದ ಬಿಹಾರದ ಆರೋಗ್ಯ ಮಂತ್ರಿಯನ್ನು ಗುರುತಿಸಲು ವಿಫಲವಾದ ಪೊಲೀಸ್​ ಅಧಿಕಾರಿಯನ್ನು ಅಮಾನತು ಮಾಡುವಂತೆ ಆರೋಗ್ಯ ಸಚಿವ ಮಂಗಲ್​ ಪಾಂಡೆ ಸೂಚಿಸಿದ್ದಾರೆ.

ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ಗುರುತು ಹಿಡಿಯದ ಜನರನ್ನೇಕೆ ನಿಯೋಜಿಸುತ್ತೀರಾ? ಸಚಿವರನ್ನೇ ನಿಲ್ಲಿಸಲು ಯತ್ನಿಸುತ್ತಾನೆ. ಅವನನ್ನು ಖಂಡಿತವಾಗಿ ಅಮಾನತು ಮಾಡಬೇಕೆಂದು ಸಚಿವ ಮಂಗಲ್​ ಪಾಂಡೆ ಮಾತನಾಡುತ್ತಿರುವುದನ್ನು ವೈರಲ್​ ವಿಡಿಯೋದಲ್ಲಿ ಕೇಳಬಹುದಾಗಿದೆ.

ಪೊಲೀಸ್​ ಅಧಿಕಾರಿಯನ್ನು ಅಸಿಸ್ಟೆಂಟ್​ ಪೊಲೀಸ್​ ಇನ್ಸ್​ಪೆಕ್ಟರ್​ ಗಣೇಶ್​ ಚೌಹಾಣ್​ ಎಂದು ಗುರುತಿಸಲಾಗಿದ್ದು, ಇವರನ್ನು ವಿಐಪಿಗಳು ವೇದಿಕೆಗೆ ತೆರಳಲು ಅನುಕೂಲ ಮಾಡಿಕೊಡಲು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಈ ವೇಳೆ ಆರೋಗ್ಯ ಸಚಿವರನ್ನು ಗುರುತಿಸಲು ವಿಫಲವಾದ ಪೊಲೀಸ್​ ಅಧಿಕಾರಿ, ಸಚಿವರನ್ನು ತಡೆಯಲು ಯತ್ನಿಸಿದರು.

ಸಚಿವರ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮಾಜಿ ಉಪಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್​, ಸಚಿವರು ತನ್ನ ಅರ್ಹತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದನ್ನು ಕಂಡು ನನಗೆ ಶಾಕ್​ ಆಯಿತು ಎಂದು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net