ಕೆಎಲ್ ರಾಹುಲ್ ಐತಿಹಾಸಿಕ ಶತಕಕ್ಕೆ ಸುನೀಲ್ ಶೆಟ್ಟಿ ಮೆಚ್ಚುಗೆ.
ನ್ಯೂಜಿಲೆಂಡ್‌ನಲ್ಲಿ ಚೊಚ್ಚಲ ಟೆಸ್ಟ್ ಇನಿಂಗ್ಸ್‌ನಲ್ಲೇ ಶತಕ ಗಳಿಸಿದ 3ನೇ ಭಾರತೀಯ
ನಾಲ್ಕೂ SENA ದೇಶಗಳಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಆರಂಭಿಕ ಬ್ಯಾಟರ್.
Suniel Shetty: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಶತಕ ಸಿಡಿಸಿದ ಟೀಂ ಇಂಡಿಯಾ ಬ್ಯಾಟರ್ ಕೆಎಲ್ ರಾಹುಲ್ ಅವರಿಗೆ ಬಾಲಿವುಡ್ ನಟ ಹಾಗೂ ಮಾವ ಸುನೀಲ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. ರಾಹುಲ್ ಅವರ ಬದ್ಧತೆ ಮತ್ತು ತಂಡಕ್ಕಾಗಿ ಆಡುವ ಮನೋಭಾವವನ್ನು ಮೆಚ್ಚಿಕೊಂಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ.
"ಪರಿಸ್ಥಿತಿ ಅಥವಾ ಬ್ಯಾಟಿಂಗ್ ಕ್ರಮಾಂಕದಿಂದ ಎಂದಿಗೂ ಗುರುತಿಸಿಕೊಳ್ಳದ ಆಟಗಾರ. ಟೀಂ ಇಂಡಿಯಾ ಪರ ಆಡುವ ದೊಡ್ಡ ಉದ್ದೇಶವೇ ಅವರ ಪ್ರೇರಣೆ. ಹೀಗೆಯೇ ಮುಂದುವರಿಯಿರಿ ರಾಹುಲ್" ಎಂದು ಸುನೀಲ್ ಶೆಟ್ಟಿ ಬರೆದುಕೊಂಡಿದ್ದಾರೆ.
ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ 207 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್, ನ್ಯೂಜಿಲೆಂಡ್‌ನಲ್ಲಿ ಚೊಚ್ಚಲ ಟೆಸ್ಟ್ ಇನಿಂಗ್ಸ್‌ನಲ್ಲೇ ಶತಕ ಗಳಿಸಿದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ನಾಲ್ಕೂ ದೇಶಗಳಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎರಡು ಪುಸ್ತಕ ಒಟ್ಟಿಗೆ ಓದೋ ಅಭ್ಯಾಸ ಒಳ್ಳೆಯದಾ? ಮನೋವಿಜ್ಞಾನ ಹೇಳೋದೇನು? | Book Reading
290 ಎಸೆತಗಳಲ್ಲಿ 136 ರನ್ ಗಳಿಸಿ ಔಟಾದ ರಾಹುಲ್, ಭಾರತ ತಂಡಕ್ಕೆ ಬಲ ತುಂಬಿದರು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 486 ರನ್ ಗಳಿಸಿದ್ದು, ನ್ಯೂಜಿಲೆಂಡ್ ವಿರುದ್ಧ 118 ರನ್‌ಗಳ ಮುನ್ನಡೆ ಸಾಧಿಸಿತ್ತು.