

ಕರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ಡೌನ್ ಅವಧಿ ಚಾಲ್ತಿಯಲ್ಲಿದೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಅನೇಕರು ಚಾಚೂ ತಪ್ಪದೆ ಪಾಲಿಸ್ತಿದ್ದಾರೆ. ಆದಾಗ್ಯೂ, ಮನೆಯಲ್ಲಿ ಇರುವವರನ್ನು ಲವಲವಿಕೆಯೊಂದಿಗೆ ಇರುವುದಕ್ಕೆ ಬೇಕಾದ ಚಿಂತನೆ/ ಪ್ರೇರಣೆಯನ್ನು ಒದಗಿಸುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಇದೇ ರೀತಿ ದಿಗ್ವಿಜಯ ನ್ಯೂಸ್ ಚಾನೆಲ್ ಮೂಲಕ ನಿತ್ಯವೂ ಲಾಕ್ಡೌನ್ ನಿಯಮ ಮತ್ತು ನಿತ್ಯಜೀವನದ ಪರಿಪಾಠವನ್ನು ಸಮೀಕರಿಸಿ ಪ್ರವಚನ ನೀಡುತ್ತಿದ್ದಾರೆ ಮೈಸೂರಿನ ಶ್ರೀಸಚ್ಚಿದಾನಂದ ಗಣಪತಿ ಸ್ವಾಮೀಜಿಯವರು. ಇಂದು ಕೂಡ ನಾವು ಪಾಲಿಸಬೇಕಾದ ಧರ್ಮ ಹೇಗಿದೆ, ಅದನ್ನು ಪಾಲಿಸುವುದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಅದರ ಸಾರ ಹೀಗಿದೆ-
ಎರಡು ದಿನಗಳಿಂದ ನಾವು ಪಾಲಿಸಬೇಕಾದ ಧರ್ಮದ ಕುರಿತ ವಿವರಣೆಯನ್ನು ಕೊಟ್ಟಿದ್ದೇವೆ. ಇಂದು ಕೂಡ ಅದೇ ಧರ್ಮದ ಕುರಿತು ಇನ್ನಷ್ಟು ತಿಳಿಯೋಣ. ಸದ್ಯ ನಾವು ಮನೆಯನ್ನೇ ದೇವಾಲಯ ಅಂದುಕೊಳ್ಳಬೇಕಾದ್ದು ಧರ್ಮ. ಅದೇ ರೀತಿ ಮನಸ್ಸನ್ನೆ ಪರಮಾತ್ಮ ಎಂದೂ, ಮನೆಯಲ್ಲಿ ಇರುವುದೇ ಧರ್ಮ ಎಂದು ತಿಳಿದುಕೊಳ್ಳಬೇಕು. ಕರೊನಾ ಸೋಂಕು ಗೆಲ್ಲುವುದೇ ಪರಮಾತ್ಮನ ಅನುಗ್ರಹವೆಂದೇ ಭಾವಿಸಬೇಕು.
ಸಮಯ ಸಂದರ್ಭಾನುಸಾರ ಧರ್ಮದ ವ್ಯಾಖ್ಯೆ, ವಿವರಣೆಗಳು ಬದಲಾಗುತ್ತದೆ. ಸದ್ಯದ ಮಟ್ಟಿಗೆ ದೇಶದ, ಜನರ ಒಳಿತಿಗಾಗಿ ನಾವು ಮೊಂಡುತನ ಪ್ರದರ್ಶಿಸಬಾರದು. ಧರ್ಮದ ಹೆಸರಿನಲ್ಲಿ ಬೀದಿಗೂ ಇಳಿಯಬಾರದು. ಧರ್ಮ ಸೂಕ್ಷ್ಮಗಳು ಅನೇಕ ಇವೆ. ಈಗ ಸರ್ಕಾರ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಬೇಕು. ಬಡವರಿಗೆ ಕೈಲಾದಷ್ಟು ಸಹಾಯ ಮಾಡಿ. ಸಮಾಜದ ಒಳಿತೆಗೆ ಶ್ರಮಿಸೋಣ ಎಂದು ಸ್ವಾಮೀಜಿ ಹೇಳಿದ್ದಾರೆ. ಅವರ ಪ್ರವಚನದ ಸಂಪೂರ್ಣ ಪಾಠಕ್ಕೆ ಈ ಕೆಳಗಿನ ವಿಡಿಯೋ ಲಿಂಕ್ಗಳನ್ನು ಗಮನಿಸಬಹುದು.