ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ

14BTP02
ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
Published on

ಬೆಟ್ಟದಪುರ: ಸಮೀಪದ ಬೆಕ್ಕರೆ ಗ್ರಾಮದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಅಮಾವಾಸ್ಯೆ ಪ್ರಯುಕ್ತ ಗುರುವಾರ ವಿಶೇಷ ಪೂಜೆ ನಡೆಯಿತು.

ಗ್ರಾಮದ ನಾಗೇಂದ್ರಚಾರ್ ಕುಟುಂಬ ವಿಶೇಷ ಪೂಜೆ ಆಯೋಜಿಸಿತ್ತು. ಅರ್ಚಕರಾದ ಚಂದ್ರಶೇಖರ್ ಹಾಗೂ ನಂದೀಶ್ ನೇತೃತ್ವದಲ್ಲಿ ದೇವಾಲಯವನ್ನು ತಳಿರು-ತೋರಣದಿಂದ ಸಿಂಗರಿಸಲಾಗಿತ್ತು. ದೇವರಿಗೆ ಹಲವು ಬಗೆಯ ಅಭಿಷೇಕ, ಕುಂಕುಮಾರ್ಚನೆ ಮಾಡಲಾಯಿತು. ದೇವಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ ಬಳಿಕ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

ವಿಶ್ವಕರ್ಮ ಸಮಾಜದ ಮುಖಂಡರಾದ ಹಿರಣ್ಣಯ್ಯ, ಗಣೇಶ್, ತಿರುನಿಲಕಂಠ, ಮಹೇಶ್, ದೇವಾಲಯ ಸಮಿತಿ ಅಧ್ಯಕ್ಷ ಸೋಮಶೇಖರ್, ಪದಾಧಿಕಾರಿಗಳಾದ ಭಾಸ್ಕರ್ ಆಚಾರ್, ಚಂದ್ರಶೇಖರ್, ಮುಖಂಡರಾದ ಬಿ.ಎಸ್.ನಂಜುಂಡಸ್ವಾಮಿ, ಮನೋಹರ್, ನಾಗಭೂಷಣಾರಾಧ್ಯ, ಗೋಪಾಲ್, ಲೋಕೇಶ್, ವಿಶ್ವಕರ್ಮ ಸಮಾಜ ತಾಲೂಕು ಅಧ್ಯಕ್ಷ ಮಹೇಶ್ ಆಚಾರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net