

ಚಿಕ್ಕಮಗಳೂರು: ಹಿರಿಯನಾಗರಿಕರ ಸೇವೆ ಸರ್ವಶ್ರೇಷ್ಠ. ಮುಪ್ಪಿನ ಕಾಲದಲ್ಲಿ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಎಲ್ಲರ ಹೊಣೆಗಾರಿಕೆ ಎಂದು ಇನ್ನರ್‌ವ್ಹೀಲ್ ಕ್ಲಬ್ 318ರ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ಹೇಳಿದರು.
ನಗರದ ಕದ್ರಿಮಿದ್ರಿಯ ಜೀವನಸಂಧ್ಯಾ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ
ಇನ್ನರ್‌ವ್ಹೀಲ್ ಕ್ಲಬ್‌ನಿಂದ ಏರ್, ವಾಟರ್ ಬೆಡ್‌ಗಳು ಹಾಗೂ ಮಂಚವನ್ನು ಕೊಡುಗೆ ನೀಡಿ ಮಾತನಾಡಿದ ಅವರು, ರೋಟರಿ ಮತ್ತು ಇನ್ನರ್‌ವ್ಹೀಲ್ ಸದಸ್ಯರು ವೃದ್ಧಾಶ್ರಮವನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಚಿಕ್ಕಮಗಳೂರು ಇನ್ನರ್‌ವ್ಹೀಲ್ ಕ್ಲಬ್ ಒಳಗೊಂಡಂತೆ ಒಟ್ಟು 51 ಕ್ಲಬ್‌ಗಳು 318 ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು 1,833 ಸದಸ್ಯರನ್ನು ಹೊಂದಿವೆ. ಈ ವರ್ಷ ಒಟ್ಟಾರೆ 75 ಲಕ್ಷ ರೂ. ವಿನಿಯೋಗಿಸಿ 1,056 ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜೀವನಸಂಧ್ಯಾ ವೃದ್ಧಾಶ್ರಮ ಅಧ್ಯಕ್ಷ ಎಂ.ಆರ್.ಕಿರಣ್ ಮಾತನಾಡಿ, ವೃದ್ಧಾಪ್ಯದಲ್ಲಿರುವ ಹಿರಿಯರ ಸ್ವಚ್ಛತೆ ಕಾಪಾಡಲು ಏರ್‌ಬೆಡ್‌ಗಳು ಉಪಯುಕ್ತ ಎಂದರು. ಇನ್ನರ್‌ವ್ಹೀಲ್ ಕ್ಲಬ್ ಆಫ್ ಚಿಕ್ಕಮಗಳೂರು ಅಧ್ಯಕ್ಷೆ ಅಶ್ವಿನಿ ಕಿರಣ್ ಮಾತನಾಡಿ, ಜೀವನಸಂಧ್ಯಾ ವೃದ್ಧಾಶ್ರಮ ಅವಶ್ಯಕತೆ ಪರಿಗಣಿಸಿ ಕೊಡುಗೆ ನೀಡಲಾಗಿದೆ ಎಂದರು. ಕ್ಲಬ್ ಕಾರ್ಯದರ್ಶಿ ಶರ್ಮಿಳಾ ಶಶಿಧರ್, ಖಜಾಂಚಿ ದೀಪಾ, ಪದಾಧಿಕಾರಿಗಳಾದ ರೂಪಾ ರವಿ, ನಿಖಿತಾ ಹಿತೇಶ್, ನಿಧಿ ಶ್ರೇಯಸ್, ಕವಿತಾ ನಿಯತ್ ಮತ್ತಿತರರಿದ್ದರು.