ರಸ್ತೆ ಬದಿಯ ಕಬ್ಬಿಣದದ ಬ್ಯಾರಿಕೇಡ್‌ಗೆ ಗೂಡ್ಸ್ ವಾಹನ ಡಿಕ್ಕಿ
ಗುದ್ದಿದ ರಭಸಕ್ಕೆ ಹಾರಿ ಸ್ಕೂಟರ್‌ಗೆ ಡಿಕ್ಕಿಯಾದ ಬ್ಯಾರಿಕೇಡ್
ರಸ್ತೆಗೆ ಬಿದ್ದ ಸ್ಕೂಟರ್‌ನಲ್ಲಿ ಬರುತ್ತಿದ್ದ ಇಬ್ಬರು ಮಹಿಳೆಯರು
Tirupathur Accident: ರಸ್ತೆಯ ಬದಿಯಲ್ಲಿದ್ದ ಲೋಹದ ಬ್ಯಾರಿಕೇಡ್‌ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬ್ಯಾರಿಕೇಡ್ ರಸ್ತೆಗೆ ಉರುಳಿ ಸ್ಕೂಟರ್‌ನಲ್ಲಿ ಬರುತ್ತಿದ್ದ ಇಬ್ಬರು ಮಹಿಳೆಯರು ಬಿದ್ದು ಪಾರಾಗಿರುವ ಘಟನೆ ತಿರುಪತ್ತೂರಿನ ಪಲ್ನಂಕುಪ್ಪಂನ ಕೂತ್ ರಸ್ತೆಯಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ.
ಸಿಸಿಟಿವಿ ದೃಶ್ಯಗಳನ್ನ ಮೋಡಿದಾಗ, ರಸ್ತೆಯಲ್ಲಿ ಸಾಗುತ್ತಿದ್ದ ಗೂಡ್ಸ್ ವಾಹನವು ರಸ್ತೆ ಬದಿಯಲ್ಲಿದ್ದ ಲೋಹದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬ್ಯಾರಿಕೇಡ್ ರಸ್ತೆಗೆ ಉರುಳಿ, ಅದೇ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಇಬ್ಬರು ಮಹಿಳೆಯರ ಕಡೆಗೆ ಚಲಿಸಿದೆ.
ಹಠಾತ್ತನೆ ಬ್ಯಾರಿಕೇಡ್ ಎದುರಾದ ಕಾರಣ ಮಹಿಳೆಯರಿಗೆ ಸ್ಕೂಟರ್ ನಿಯಂತ್ರಿಸಲು ಸಾಧ್ಯವಾಗದೆ, ಇಬ್ಬರೂ ಒದ್ದೆಯಾದ ರಸ್ತೆಗೆ ಬಿದ್ದಿದ್ದಾರೆ. ಸ್ಕೂಟರ್ ಕೂಡ ಉರುಳಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಧಾವಿಸಿ ಮಹಿಳೆಯರಿಗೆ ನೆರವಾಗಿದ್ದಾರೆ. ಇಬ್ಬರೂ ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಳೆಗೆ ಮುಳುಗಿದ ಕೇರಳ ರಾಜಧಾನಿ: ಬಸ್ ನಿಲ್ದಾಣ, ರೈಲು ನಿಲ್ದಾಣ ಜಲಾವೃತ | Kerala Rain
ರಸ್ತೆ ಬದಿಯ ಬ್ಯಾರಿಕೇಡ್‌ಗಳ ಸುರಕ್ಷತೆ ಹಾಗೂ ವಾಹನ ಚಾಲಕರ ಎಚ್ಚರಿಕೆಯ ಬಗ್ಗೆ ಈ ಘಟನೆ ಗಮನ ಸೆಳೆದಿದೆ. ರಸ್ತೆಗಳಲ್ಲಿ ಸಂಚರಿಸುವಾಗ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.