

ಸ್ಟಿಂಗ್ ಪರಿಣಿತರನ್ನ ಸಿಎಂ ಭೇಟಿ ಮಾಡಿದ್ರು ಎಂಬ ಹೆಚ್ ಡಿಕೆ ಆರೋಪ ವಿಚಾರ
ದುಡ್ಡಿನ ಆಮಿಷದಲ್ಲಿ ಬೇರೆ ಬೇರೆದ್ರಲ್ಲಿ ಟ್ಯ್ರಾಪ್ ಮಾಡಬಹುದು ಎಚ್ಚರಿಕೆಯಿಂದಿರಿ ಎಂದಿದ್ದರು
ಸ್ಟಿಂಗ್ ಮಾಡುವ ಬಗ್ಗೆ ನಮಗೆ ಗೊತ್ತಿಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ
'ಸಿಎಂ ಡಿಕೆ ಶಿವಕುಮಾರ್ ಅವರು ಫೈವ್ಸ್ಟಾರ್ ಹೋಟೆಲ್ನಲ್ಲಿ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ಮಾಡುವ ವ್ಯಕ್ತಿ ಜೊತೆ ಗಂಟೆ ಗಟ್ಟಲೇ ಮಾತನಾಡಿದರು' ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೊಟ್ಟ ಹೇಳಿಕೆಯು ಕರ್ನಾಟಕದ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್ಡಿ ಕುಮಾರಸ್ವಾಮಿ ಅವರು, 'ಹೋಟೆಲ್ನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಯಾರೊಂದಿಗೆ ಮಾತನಾಡಿದರು. ಅವರನ್ನು ಇಟ್ಟುಕೊಂಡು ಯಾರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ್ರು' ಎನ್ನುವ ಆರೋಪ ಮಾಡಿದ್ದರು. ಈ ಬಗ್ಗೆ ವಿಧಾನಸೌಧದ ಬಳಿ ಮಾತನಾಡಿದಸಚಿವ ಸತೀಶ್ ಜಾರಕಿಹೊಳಿ 'ದುಡ್ಡಿನ ಆಮಿಷದಲ್ಲಿ ಬೇರೆ ಬೇರೆದ್ರಲ್ಲಿ ಟ್ಯ್ರಾಪ್ ಮಾಡಬಹುದು. ಯಾರೇ ಬಂದ್ರು ಹುಷಾರಾಗಿ ಇರಿ, ಮಾಡಬೇಡಿ ಅಂತ ಹೇಳಿದ್ದಾರೆ. ಸ್ಟಿಂಗ್ ಮಾಡಿದ್ದಾರೆ ಅಂತ ಎಲ್ಲೂ ಹೇಳಿಲ್ಲ' ಎಂದರು.
'ಸ್ಟಿಂಗ್ ಪರಿಣಿತರನ್ನ ಸಿಎಂ ಭೇಟಿ ಮಾಡಿದ್ರು ಎಂಬ ಹೆಚ್ ಡಿಕೆ ಆರೋಪ ವಿಚಾರ ನಮಗೆ ಗೊತ್ತಿಲ್ಲ. ಆ ರೀತಿ ಯಾವುದು ಇಲ್ಲ. ನಾವು ಏನು ಹೇಳಿದ್ದೆವೂ ಅಷ್ಟಕ್ಕೆ ಸಿಮೀತವಾಗಿದೆ. ಮುಂದುವರಿದ ಭಾಗ ನಮ್ ಹತ್ರ ಇಲ್ಲ. ಪಾರ್ಟ್ 1 ಹೇಳಿದ್ದೇನೆ. ಪಾರ್ಟ್ 2 ನಮಗೆ ಗೊತ್ತಿಲ್ಲ. ಗೊತ್ತಾದ ಮೇಲೆ ಅದನ್ನು ಹೇಳುತ್ತೇವೆ. ಪಾರ್ಟ್ 2 ಇದೆ ಅಂತ ಸಿಎಂ ನಮ್ಮ ಬಳಿ ಹೇಳಿಲ್ಲ' ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ಕೊಟ್ಟರು.
ಮುಂದುವರೆದು, 'ದುಡ್ಡಿನ ಆಮಿಷದಲ್ಲಿ ಬೇರೆ ಬೇರೆದ್ರಲ್ಲಿ ಟ್ಯ್ರಾಪ್ ಮಾಡಬಹುದು. ಯಾರೇ ಬಂದ್ರು ಹುಷಾರಾಗಿ ಇರಿ, ಮಾಡಬೇಡಿ ಅಂತ ಹೇಳಿದ್ದಾರೆ. ಸ್ಟಿಂಗ್ ಮಾಡಿದ್ದಾರೆ ಅಂತ ಎಲ್ಲೂ ಹೇಳಿಲ್ಲ. ಎಚ್ಚರಿಕೆಯಿಂದ ಇರಬೇಕು ಅಂತೇಳಿದ್ದಾರೆ ಅಷ್ಟೇ ಎಂದು ಸಮರ್ಥಿಸಿಕೊಂಡರು ಸಚಿವರು.
ಇನ್ನೂ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ತನಿಖೆ ಬಗ್ಗೆ ಮಾತನಾಡಿದ ಅವರು, ತನಿಖೆ ಮಾಡೋದಕ್ಕೆ ಸ್ಟಿಂಗ್ ಆಪರೇಷನ್ಗೆ ಒಳಗಾದವರು ಮುಂದೆ ಬರಬೇಕಲ್ಲವಾ..?. ಸಿಎಂಗೆ ರಿಕ್ವೆಸ್ಟ್ ಮಾಡಿದ್ರೆ ತನಿಖೆ ಮಾಡ್ತಾರೆ. ಮುಂದಿನ ವಿಚಾರ ಅವರಿಗೆ ಬಿಟ್ಟಿದ್ದು ಎಂದರು.
ಯಾರ ಮೇಲೆ ಸ್ಟಿಂಗ್ ಆಗಿದೆ ಅನ್ನೋದನ್ನ ಬಹಿರಂಗ ಪಡಿಸಬೇಕು ಅಂತ ವಿಪಕ್ಷದವರ ಒತ್ತಾಯ ವಿಚಾರದ ಬಗ್ಗೆ ಮಾತನಾಡಿದ ಅವರು, ಬಹಿರಂಗ ಯಾರು ಪಡಿಸಬೇಕು.?. ಯಾವ ಸಚಿವರ ಹೆಸರನ್ನೂ ಹೇಳಿಲ್ಲ. ಈ ತರ ಆಗಬಹುದು ಅಂತ ಹೇಳಿದ್ದಾರೆ ಅಷ್ಟೇ ಎಂದರು.
ಇನ್ನೂ ಅಹಿಂದ ನಾಯಕರ ಒಗ್ಗಟ್ಟಿನ ಬಗ್ಗೆ ಮಾತನಾಡಿದ ಅವರು, ಒಗ್ಗೂಡೋದು ಅಲ್ಲ, ನಾವು ಒಗ್ಗಟ್ಟಾಗಿಯೇ ಇದ್ದೇವೆ. ಅಹಿಂದ ವಿಚಾರ ಬಂದಾಗ ನಾವು ಒಗ್ಗಟ್ಟಾಗಿಯೇ ಇರ್ತೀವಿ. ಬೇರೆ ವಿಚಾರ ಬಂದಾಗ ಖಂಡಿತವಾಗಿ ಸಮಸ್ಯೆ ಇದ್ದೇ ಇರುತ್ತೆ ಎಂದು ಅವರು ಹೇಳಿದರು.
ಅಹಿಂದ ನಾಯಕರ ಡಿನ್ನರ್ ಮೀಟಿಂಗ್ ಸದ್ಯ ಮಾಡೋದಿಲ್ಲ. SIR ಮುಗಿಯುವವರೆಗೆ ಯಾವುದು ಇಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನೋಡೋಣ ಕೇಂದ್ರ ಸರ್ಕಾರ ಏನ್ ನಿರ್ಧಾರ ತೆಗೆದುಕೊಳ್ತಾರೆ. ಆದ್ರ ಮೇಲೆ ನಿಂತಿದೆ. ನಾನು ಮಧ್ಯಾಹ್ನ ದೆಹಲಿಗೆ ಹೋಗುತ್ತಿದ್ದೇನೆ. ಬೇರೆ ಬೇರೆ ದಿನಗಳಲ್ಲಿ ಹೋಗಿ ನಾವು ಪ್ರತಿಭಟನೆಯಲ್ಲಿ ಭಾಗಿಯಾಗ್ತಿವಿ ಎಂದು ಹೇಳಿದರು, (ಏಜೆನ್ಸೀಸ್).