ಸೈಫ್ ಅಲಿ ಖಾನ್-ಶಾಹಿದ್ ಕಪೂರ್ ಫ್ರೆಂಡ್ಲಿ ಮೀಟ್‌ಅಪ್; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು? | Saif Ali Khan

Saif Ali Khan
ಕರೀನಾ ಮಾಜಿ ಪ್ರಿಯಕರ ಶಾಹಿದ್‌ಗೆ ಸೈಫ್ ಅಲಿ ಖಾನ್ ಅಪ್ಪುಗೆ
Published on: 

Saif Ali Khan: ಬಾಲಿವುಡ್‌ನಲ್ಲಿ ಹಳೆಯ ಸಂಬಂಧಗಳು, ಹೊಸ ಸ್ನೇಹಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ನಟರಾದ ಸೈಫ್ ಅಲಿ ಖಾನ್ ಮತ್ತು ಶಾಹಿದ್ ಕಪೂರ್ ಭೇಟಿಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇಬ್ಬರೂ ಆತ್ಮೀಯವಾಗಿ ಮಾತನಾಡಿಕೊಂಡಿರುವುದನ್ನು ನೋಡಿದ ನೆಟ್ಟಿಗರು, ಈ ಭೇಟಿಯ ಬಗ್ಗೆ ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಸೈಫ್ ಅಲಿ ಖಾನ್ ಬಿಳಿ ಶರ್ಟ್ ಮತ್ತು ಜೀನ್ಸ್ ಧರಿಸಿ ಹಳದಿ ಬಣ್ಣದ ಎಂಜಿ ಸೈಬರ್‌ಸ್ಟರ್ ಕಾರಿನಲ್ಲಿ ಬಂದಿದ್ದಾರೆ. ಮತ್ತೊಂದೆಡೆ ಶಾಹಿದ್ ಕಪೂರ್ ನೀಲಿ ಬಣ್ಣದ ಸ್ಲೀವ್‌ಲೆಸ್ ಟೀ ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಮಾತನಾಡಿಕೊಂಡು, ಬಳಿಕ ಸೈಫ್ ಶಾಹಿದ್ ಅವರನ್ನು ಅಪ್ಪಿಕೊಂಡು ಬೀಳ್ಕೊಟ್ಟಿದ್ದಾರೆ.

ಈ ಭೇಟಿ ಹೆಚ್ಚು ಗಮನ ಸೆಳೆಯಲು ಪ್ರಮುಖ ಕಾರಣ ಕರೀನಾ ಕಪೂರ್. ಒಂದು ಕಾಲದಲ್ಲಿ ಶಾಹಿದ್ ಜತೆ ಪ್ರೀತಿಯಲ್ಲಿದ್ದ ಕರೀನಾ ಈಗ ಸೈಫ್ ಅಲಿ ಖಾನ್ ಅವರ ಪತ್ನಿ. ಹೀಗಾಗಿ ಈ ಇಬ್ಬರು ನಟರು ಆತ್ಮೀಯವಾಗಿ ಮಾತನಾಡಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಇದಕ್ಕೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದು, ಪ್ರಬುದ್ಧತೆ ತೋರಿಸುತ್ತಿದ್ದಾರೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಪಾಪರಾಜಿಗಳ ಗಮನ ಸೆಳೆಯೋಕೆಂದೇ ಈ ಭೇಟಿಯನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ

ಇದನ್ನೂ ಓದಿ: ಅಪ್ಪನ ಕಡೆಯವರು ಬಂದರೆ ಅಮ್ಮನಿಗೆ ಅಲರ್ಜಿ, ತವರು ಮನೆಯವರೆಂದರೆ ಫುಲ್ ಎನರ್ಜಿ! ಯಾಕೆ? | Father's relatives

ಅಂದಹಾಗೆ, ಸೈಫ್ ಮತ್ತು ಶಾಹಿದ್ ಈ ಹಿಂದೆ ವಿಶಾಲ್ ಭಾರದ್ವಾಜ್ ನಿರ್ದೇಶನದ 2017ರ 'ರಂಗೂನ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಕಂಗನಾ ರಣಾವತ್ ಕೂಡ ಪ್ರಮುಖ ಪಾತ್ರದಲ್ಲಿದ್ದರು. ಸಿನಿಮಾ ಬಿಡುಗಡೆಯ ಮುನ್ನ ಶಾಹಿದ್, ಸೈಫ್ ವೃತ್ತಿಪರ ನಟ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೈಫ್ ಕೂಡ ಇಬ್ಬರ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲಿದೆ ಎಂದು ಹೇಳಿದ್ದರು.