ರಾಜ್ಯೋತ್ಸವ ಆಚರಣೆ ಹೆಮ್ಮೆಯ ವಿಚಾರ

01BTP01 (1)
ಬೆಟ್ಟದಪುರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಂಜುಂಡಸ್ವಾಮಿ, ಶಂಕರ್, ಗಣೇಶ್, ರಮೇಶ್, ಸಂತೋಷ್, ರವಿ ಇದ್ದರು.
Published on

ಬೆಟ್ಟದಪುರ: ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಬುಧವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಸಂಘದ ಗೌರವಾಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ರಾಜ್ಯೋತ್ಸವ ಆಚರಣೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಕಾರ್ಯಕ್ರಮದ ಬಳಿಕ ಆಟೋ ಸಂಘದ ಚಾಲಕರು ಕನ್ನಡ ಬಾವುಟಗಳಿಂದ ಅಲಂಕೃತಗೊಂಡಿದ್ದ ಆಟೋಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ನಂತರ ನಡೆದ ಡಿಟಿಎಂಎನ್ ಶಾಲಾ ವಿದ್ಯಾರ್ಥಿಗಳ ನೃತ್ಯ ನೋಡುಗರ ಮನಸೂರೆಗೊಂಡಿತು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡ ಪಟೇಲ್ ನಟೇಶ್ ಹಾಗೂ ಎಎಸ್‌ಐ ಕುಮಾರ್, ಶಿಕ್ಷಕರಾದ ನಟರಾಜು ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಶಂಕರ್, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ರಮೇಶ್, ಖಜಾಂಚಿ ಸಂತೋಷ್, ಸದಸ್ಯರಾದ ರವಿ, ದೀಪು, ರಾಜು, ವೆಂಕಟೇಶ್, ತಮ್ಮಯ್ಯ, ಪ್ರಸನ್ನ, ವೇಣು, ಮೋಹನ್, ಬೆಟ್ಟದತುಂಗದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೀತಿ ಲಕ್ಷ್ಮೀಅರಸ್, ಮುಖಂಡ ದೇವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net