ನನ್ನ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಿ

Screenshot_2024_1127_220357
Published on

ರಾಯಚೂರು: ವಕ್ಫ್ ಭೂಕಬಳಿಕೆ ವಿರುದ್ಧ ಮಾಡುತ್ತಿರುವ ಹೋರಾಟಕ್ಕೆ ಕೇಂದ್ರ ನಾಯಕರ ಸಂಪೂರ್ಣ ಬೆಂಬಲ ಜತೆಗೆ ಜಂಟಿ ಸಲಹಾ ಸಮಿತಿಯ ಅಧ್ಯಕ್ಷರೇ ವಕ್ಫ್ ಹಗರಣದ ವರದಿಗಳನ್ನು ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ.ಗಳ ಹಗರಣವಾಗಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಚಾರವಾಗಿ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿತ್ತು ಆದರೆ ಅದಕ್ಕೆ ಅನುಮತಿ ಸಿಕ್ಕಿರಲಿಲ್ಲ ಇದೀಗ ಕೇಂದ್ರ ನಾಯಕರೇ ಹೋರಾಟದಲ್ಲಿ ಭಾಗವಹಿಸಿದ್ದಾರೆ ಇದಕ್ಕೆ ಮತ್ತೊಂದು ವಿಶೇಷ ಅನುಮತಿ ಬೇಕಿಲ್ಲ. ನಮ್ಮ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಿ ಅದನ್ನು ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್ ನಾಯಕರಲ್ಲಿ ನಾನೆಂದು ಹೋಗಿಲ್ಲ. ರಾಜ್ಯದ ಇತರೆ ಬಿಜೆಪಿ ನಾಯಕರು ಹೋಗಿರಬಹುದು ಅಂತವರು ನಾಲಾಯಕ್‌ಗಳು ಹಾಗೂ ನಾಚಿಕೆಗೇಡಿಗಳಾಗಿರುತ್ತಾರೆ ಎಂದು ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net