

ಲಂಡನ್: ತನ್ನ ಪಾಕೆಟ್ ಮನಿ ಹೆಚ್ಚಿಸಿಕೊಳ್ಳಲು ಮಗನೊಬ್ಬ ತನ್ನ ತಾಯಿಗೆ ಓನ್ಲಿ ಫ್ಯಾನ್ಸ್ ಅಕೌಂಟ್ (ಚಂದಾದಾರ ಆಧಾರಿತ ಅಶ್ಲೀಲ ವಿಡಿಯೋ ಖರೀದಿಸುವ ಜಾಲತಾಣ ವೇದಿಕೆಯಾಗಿದ್ದು, ಇದನ್ನು 2016ರಲ್ಲಿ ಲಾಂಚ್ ಮಾಡಲಾಯಿತು) ಸೃಷ್ಟಿಸಿ ಕೊಟ್ಟಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಲಂಡನ್ನಲ್ಲಿ ವಾಸವಿರುವ ಲಿಯೊನಾರ್ಡೋ ಹಾಥ್ವೇ (19) ತನ್ನ ತಾಯಿ ಲುಸೆನೆ ಡುರ್ತೆಗೆ ಬೆಂಬಲವಾಗಿ ನಿಂತಿದ್ದು, ಆಕೆಯ ಗ್ಲಾಮರ್ ಮಾಡೆಲಿಂಗ್ ಕೆರಿಯರ್ಗೆ ಪ್ರೋತ್ಸಾಹ ಮಾಡುತ್ತಿದ್ದಾನೆ ಎಂದು ಡೈಲಿ ಸ್ಟಾರ್ ಮಾಧ್ಯಮ ವರದಿ ಮಾಡಿದೆ.
ಲುಸೆನೆ ಇದಕ್ಕೂ ಮುಂಚೆ ಪ್ಲೇಬಾಯ್ ಪೊರ್ಚುಗಲ್ ಮತ್ತು ಆಸ್ಟ್ರೇಲಿಯಾದ ಎಫ್ಎಚ್ಎಂ ಪುರುಷರ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, 2019ರಲ್ಲಿ ನಡೆದ ಮಿಸ್ ಬುಮ್ಬುಮ್ ವರ್ಲ್ಡ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ತಾಯಿ ಮತ್ತು ಮಗನ ನಡುವೆ ಉತ್ತಮವಾದ ಸಂಬಂಧವಿದೆ. ನನ್ನ ಎಲ್ಲ ಕೆಲಸಗಳಿಗೆ ಬೆಂಬಲ ನೀಡುವಂತೆ ನಾನು ಸಹ ಯಾವಾಗಲೂ ತಾಯಿಯ ಆಯ್ಕೆಯನ್ನು ಬೆಂಬಲಿಸುತ್ತೇನೆ ಎಂದು ಲಿಯೋನಾರ್ಡೋ ಹೇಳಿದ್ದಾರೆ. ಓನ್ಲಿ ಫ್ಯಾನ್ ಅಕೌಂಟ್ ತೆರೆದಿದ್ದರಿಂದ ವೃತ್ತಿ ಜೀವನಕ್ಕೆ ಮತ್ತಷ್ಟು ಸಹಕಾರಿ ಆಯಿತು. ಅಲ್ಲದೆ, ನನ್ನ ಪ್ಯಾಕೆಟ್ ಮನಿಯು ಸಹ ಹೆಚ್ಚಿಗೆ ದೊರೆಯುತ್ತಿದೆ ಎಂದು ಲಿಯೊನಾರ್ಡೋ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)