

ಹೊಸನಗರ: ತಾಲೂಕಿನ ಯಡೂರು ಗ್ರಾಮದಲ್ಲಿ ಸೋಮವಾರ ಬೈಕ್‌ನಿಂದ ಬಿದ್ದು ಅರ್ಚಕ ಮೃತಪಟ್ಟಿದ್ದಾರೆ. ಮೇಲುಸುಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಶೇಷಾಚಲ ಭಟ್(61) ಮೃತ. ಸೋಮವಾರ ಬೆಳಗ್ಗೆ ನವರಾತ್ರಿ ಸಿದ್ಧತೆಗಾಗಿ ಕೆಲಸಗಾರರನ್ನು ಭೇಟಿ ಮಾಡಿ ಬೈಕ್‌ನಲ್ಲಿ ದೇವಸ್ಥಾನದಿಂದ ವಾಪಸಾಗುತ್ತಿದ್ದ ವೇಳೆ ಕರಿಗಲ್ಲು ಬಳಿ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದಿದ್ದಾರೆ. ತಲೆ ಹಿಂಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿತ್ತು. ಯಡೂರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಅಸುನೀಗಿದ್ದಾರೆ.