

ಅಮರಾವತಿ: ಪ್ರಸಿದ್ಧ ನೃತ್ಯ ಸಂಯೋಜಕ ಮತ್ತು ಚಲನಚಿತ್ರ ನಟ ಪ್ರಭುದೇವ(Prabhu Deva) ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ಶ್ರೀವರಿಗೆ ದರ್ಶನ ಪಡೆದರು. ದೇವರಿಗೆ ಪ್ರಾರ್ಥನೆ ಸಲ್ಲಿಸಿ ಅರ್ಚಕರಿಂದ ಆಶೀರ್ವಾದ ಪಡೆದರು. ವಿಷ್ಣುವಿನ ಅವತಾರವಾದ ವೆಂಕಟೇಶ್ವರನಿಗೆ ಸಮರ್ಪಿತವಾದ ಈ ದೇವಾಲಯವು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.
ದೇವಾಲಯದಿಂದ ಹೊರಬರುತ್ತಿದ್ದಂತೆ ಪ್ರಭುದೇವ ಅವರೊಂಗಿಗೆ ಫೋಟೋಗಾಗಿ ಅಭಿಮಾನಿಗಳು ಮುಗಿಬಿದ್ದರು. ಯಾವುದೇ ಬೇಸರವನ್ನು ತೋರಿಸದೆ ನಗುತ್ತಲೇ ಅಭಿಮಾನಿಗಳೊಂದಿಗೆ ಪ್ರಭುದೇವ್ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಪ್ರಭುದೇವ ಅವರ ಸರಳತೆಯನ್ನು ಹೊಗಳುತ್ತಿದ್ದಾರೆ.
ಪ್ರಭುದೇವ ಭಾರತದ ಅತ್ಯಂತ ಪ್ರಸಿದ್ಧ ನೃತ್ಯ ನಿರ್ದೇಶಕರು, ನಿರ್ದೇಶಕರು ಮತ್ತು ನಟರಲ್ಲಿ ಒಬ್ಬರು. ಭಾರತದ ಮೈಕೆಲ್ ಜಾಕ್ಸನ್ ಎಂದು ಕರೆಯಲ್ಪಡುವ ಅವರು ಹಲವಾರು ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ನೃತ್ಯದ ಹೊರತಾಗಿ ಪ್ರಭುದೇವ ಅನೇಕ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ, ಅವರು ಪೋಕಿರಿ, ವಿಲ್ಲು, ಎಂಗೆಯುಮ್ ಕಾದಲ್ ಮತ್ತು ವೇದಿ ಚಿತ್ರಗಳನ್ನು ನಿರ್ದೇಶಿಸಿದರು. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಟಿಸಿದ ವಾಂಟೆಡ್ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಆ ಚಿತ್ರವು ಭಾರಿ ಯಶಸ್ಸನ್ನು ಕಂಡಿತು. ನಂತರ ಅವರು ರೌಡಿ ರಾಥೋಡ್, ಸಿಂಗ್ ಈಸ್ ಬ್ಲಿಂಗ್‌ನಂತಹ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದರು.(ಏಜೆನ್ಸೀಸ್)