ದಳಪತಿ ಪಕ್ಷಕ್ಕೆ ಶುಭ ಕೋರಿದ ಪವರ್​ ಸ್ಟಾರ್​; ಪವನ್​ ಮಾದರಿಯಲ್ಲೇ ಸಾಗಿ ಎಂದ್ರು ನೆಟ್ಟಿಗರು! thalapathy party

thalapathy party (1)
Published on

ಹೈದರಾಬಾದ್: ತಮಿಳುನಾಡಿನ 2026ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣೀಟ್ಟಿರುವ ನಟ ದಳಪತಿ ವಿಜಯ್​ 'ತಮಿಳಿಗ ವೆಟ್ರಿ ಕಳಗಂ'(thalapathy party) ಪಕ್ಷದ ಸಮಾವೇಶ ಮಾಡುವ ಮೂಲಕ ದೇಶದ ರಾಜಕೀಯದಲ್ಲಿ ಹಲವರ ಹುಬ್ಬೆರುವಂತೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಹೊಸ ಇತಿಹಾಸ ಸೃಷ್ಠಿಸುವ ಮೂಲಕ ದಳಪತಿ ಪಾಲಿಟಿಕ್ಸ್​ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಕಾಲಿವುಡ್ ಚಿತ್ರರಂಗದ ಹಲವು ಗಣ್ಯರು ಹಾಗೂ ಸೆಲೆಬ್ರಿಟಿಗಳು ಸೇರಿದಂತೆ ದೇಶದ ವಿವಿಧ ನಾಯಕರು ವೆಟ್ರಿ ಕಳಗಂ ಪಕ್ಷಕ್ಕೆ ಶುಭಕೋರಿದ್ದಾರೆ.

andraprdesh ಉಪಮುಖ್ಯಮಂತ್ರಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು saha ವಿಜಯ್ ಅವರಿಗೆ ಶುಭ ಹಾರೈಸಿದ್ದಾರೆ. "ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟ ವಿಜಯ್ ಅವರಿಗೆ ಅಭಿನಂದನೆಗಳು" ಎಂಬ ಪೋಸ್ಟ್ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಇಬ್ಬರು ನಟರ ಅಭಿಮಾನಿಗಳು ಸದ್ಯ ಫುಲ್​ ಖುಷಿಯಾಗಿದ್ದಾರೆ. ಈ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಪವನ್​ ಕಲ್ಯಾಣ್​ ಮಾದರಿಯಲ್ಲೇ ಮುಂದುವರೆಯಿರಿ, ಅವರಂತೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಆಗಿ ಎಂದು ಶುಭಾಶಯ ತಿಳಿಸಿದ್ದಾರೆ.

ವಿಜಯ್​ ಮೊದಲ ಸಮಾವೇಶ 5 ಲಕ್ಷಕೂ ಅಧಿಕ ಜನ ಭಾಗಿ

ಚೆನ್ನೈನಿಂದ 100 ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ದಳಪತಿ ವಿಜಯ್​ 'ತಮಿಳಿಗ ವೆಟ್ರಿ ಕಳಗಂ' ಪಕ್ಷದ ಸಮಾವೇಶದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದಾರೆ. ರ‍್ಯಾಲಿ ನಡೆದ ಜಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ತಡರಾತ್ರಿವರೆಗೂ ಟ್ರಾಫಿಕ್ ಹಾಗೆಯೇ ಇತ್ತು ಎಂದು ವರದಿಗಳು ಉಲ್ಲೇಖಿಸವೆ. ಇನ್ನೂ ನಟನ ಕೊನೆಯ ಸಿನಮಾ ‘ದಳಪತಿ 69’ ಕೆಲಸಗಳು ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಕನ್ನಡದ ‘ಕೆವಿಎನ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವುದು ವಿಶೇಷ. ಸದ್ಯ ಸಿನಿಮಾ ಹೇಗೆ ಮೂಡಿಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯತೊಡಗಿದ್ದಾರೆ.(ಏಜೆನೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net