ಸರ್ಕಾರದ ಮುಂದೆ ಒಲಿಂಪಿಕ್​​ ಪದಕ ವಿಜೇತನ ತಂದೆ ಬೇಡಿಕೆ; ₹ 5 ಕೋಟಿ ಜತೆಗೆ.. | Paris Olympic 2024

Untitled-design-2024-10-08T171131.976-1
Published on

ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್‌ 2024ರಲ್ಲಿ(Paris Olympic 2024) ಕಂಚಿನ ಪದಕ ಗೆದ್ದ ಶೂಟರ್ ಸ್ವಪ್ನಿಲ್ ಕುಸಾಲೆ ಅವರ ತಂದೆ ಮಹಾರಾಷ್ಟ್ರ ಸರ್ಕಾರ ತನ್ನ ಮಗನಿಗೆ ನೀಡಿದ 2 ಕೋಟಿ ರೂಪಾಯಿ ಬಹುಮಾನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಆಗಸ್ಟ್‌ನಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲೆ 50 ಮೀಟರ್ ರೈಫಲ್ 3 ಸ್ಥಾನಗಳ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ನನ್ನ ಮಗ ಇದಕ್ಕಿಂತ ಹೆಚ್ಚಿನ ಹಣಕ್ಕೆ ಅರ್ಹನಾಗಿದ್ದಾನೆ. ಮಗನಿಗೆ ಐದು ಕೋಟಿ ರೂಪಾಯಿ ಬಹುಮಾನ ಮತ್ತು ಪುಣೆಯ ಬಾಳೆವಾಡಿಯ ಛತ್ರಪತಿ ಶಿವಾಜಿ ಮಹಾರಾಜರ ಕ್ರೀಡಾ ಸಂಕೀರ್ಣದ ಬಳಿ ಒಂದು ಫ್ಲ್ಯಾಟ್ ಸಿಗಬೇಕು ಎಂದು ಅವರ ತಂದೆ ಸುರೇಶ್​​​​ ಕುಸಾಲೆ ಹೇಳಿದ್ದಾರೆ.

Olympic medalist Swapnil Kusale

ಕೊಲ್ಹಾಪುರದಲ್ಲಿ ಮಾತನಾಡಿರುವ ಸುರೇಶ್​​ ಕುಸಾಲೆ, ಹರಿಯಾಣ ಸರ್ಕಾರವು ತನ್ನ (ಒಲಿಂಪಿಕ್ ಪದಕ ವಿಜೇತರು) ಪ್ರತಿಯೊಬ್ಬ ಆಟಗಾರರಿಗೆ 5 ಕೋಟಿ ರೂಪಾಯಿ ನೀಡುತ್ತಿದೆ. ಮಹಾರಾಷ್ಟ್ರ ಸರ್ಕಾರದ ಹೊಸ ನೀತಿಯ ಪ್ರಕಾರ ಒಲಿಂಪಿಕ್ ಕಂಚಿನ ಪದಕ ವಿಜೇತರಿಗೆ 2 ಕೋಟಿ ರೂ ನೀಡಲಾಗುತ್ತದೆ. ಕಳೆದ 72 ವರ್ಷಗಳಲ್ಲಿ (1952 ರಲ್ಲಿ ಕುಸ್ತಿಪಟು ಕೆ.ಡಿ. ಜಾಧವ್ ನಂತರ) ಮಹಾರಾಷ್ಟ್ರದ ಎರಡನೇ ವೈಯಕ್ತಿಕ ಒಲಿಂಪಿಕ್ ಪದಕ ವಿಜೇತ ಸ್ವಪ್ನಿಲ್ ಆಗಿರುವಾಗ ರಾಜ್ಯವು ಅಂತಹ ಮಾನದಂಡಗಳನ್ನು ಏಕೆ ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.

ಸ್ವಪ್ನಿಲ್ ಅವರಿಗೆ 5 ಕೋಟಿ ಬಹುಮಾನ ಹಾಗೂ ಬಾಳೇವಾಡಿ ಕ್ರೀಡಾ ಸಂಕೀರ್ಣದ ಬಳಿ ಫ್ಲಾಟ್ ನೀಡಿಬೇಕು. ಇದರಿಂದ ಸುಲಭವಾಗಿ ಅಭ್ಯಾಸಕ್ಕೆ ಬಂದು ಹೋಗುವಂತಾಗುತ್ತದೆ. ಇದಷ್ಟೇ ಅಲ್ಲ ಈ ಸಂಕೀರ್ಣದಲ್ಲಿರುವ 50 ಮೀಟರ್ ರೈಫಲ್ 3 ಪೊಸಿಷನ್ ಶೂಟಿಂಗ್ ಪ್ರದೇಶಕ್ಕೆ ಸ್ವಪ್ನಿಲ್ ಹೆಸರಿಡಬೇಕು ಎಂದು ಮಹಾರಾಷ್ಟ್ರ ಸರ್ಕಾರ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಭಾರತಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐದು ವ್ಯಕ್ತಿಗಳು ಪದಕಗಳನ್ನು ಗೆದ್ದಿದ್ದಾರೆ. ಅವರಲ್ಲಿ ನಾಲ್ವರು ಹರಿಯಾಣದವರು ಮತ್ತು ಒಬ್ಬರು ಮಹಾರಾಷ್ಟ್ರದ ಸ್ವಪ್ನಿಲ್ ಕುಸಾಲೆ. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಹರಿಯಾಣವು ತುಂಬಾ ಚಿಕ್ಕ ರಾಜ್ಯವಾಗಿದೆ, ಆದರೆ ಇದು ಪದಕ ವಿಜೇತ ಕ್ರೀಡಾಪಟುಗಳಿಗೆ ಹೆಚ್ಚಿನ ಬಹುಮಾನವನ್ನು ನೀಡುತ್ತದೆ ಎಂದು ಸುರೇಶ್​​ ಕುಸಾಲೆ ಹೇಳಿದರು.

ಹರಿಯಾಣ ಸರ್ಕಾರ ಚಿನ್ನದ ಪದಕ ವಿಜೇತರಿಗೆ 6 ಕೋಟಿ, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ಮತ್ತು ಕಂಚಿನ ಪದಕ ವಿಜೇತರಿಗೆ 2.5 ಕೋಟಿ ರೂಪಾಯಿಗಳನ್ನು ನೀಡುವುದು. ಮಹಾರಾಷ್ಟ್ರ ಸರ್ಕಾರವು ಕ್ರಮವಾಗಿ 5 ಕೋಟಿ ರೂ., 3 ಕೋಟಿ ರೂ.ಮತ್ತು 2 ಕೋಟಿ ರೂ. ಬಹುಮಾನವನ್ನು ನೀಡಲು ನಿರ್ಧರಿಸಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net