ಕೆರೆ ಒತ್ತುವರಿ ಬಗ್ಗೆ ದೂರು ಬಂದಿಲ್ಲ

Deputy Lokayukta, Justice K.N.Phanindra
ಉಪ ಲೋಕಾಯುಕ್ತ, ನ್ಯಾ. ಕೆ.ಎನ್.ಫಣೀಂದ್ರ
Published on

ಶಿವಮೊಗ್ಗ: ಜಿಲ್ಲಾಧ್ಯಂತ ಕೆರೆ ಒತ್ತುವರಿ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಉಪ ಲೋಕಾಯುಕ್ತ, ನ್ಯಾ. ಕೆ.ಎನ್.ಫಣೀಂದ್ರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗಕ್ಕೆ ಬಂದಿದ್ದು ಖಾಸಗಿ ಭೇಟಿಯಾದರೂ ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಲೋಕಾಯುಕ್ತ ಕಾಯ್ದೆ, ಅದನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದೇನೆ. ಲೋಕಾಯುಕ್ತ ಕಾಯ್ದೆ ಅಡಿ ದೂರು ನೋಂದಣಿ, ವಿವರ ನೀಡಿದ್ದೇನೆ ಎಂದರು.

ಲೋಕಾಯುಕ್ತ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಎಲ್ಲಿ ತಪ್ಪುಗಳಾಗಿವೆ ಎಂಬುದನ್ನು ಗಮನಕ್ಕೆ ತಂದು ತಿದ್ದಿಕೊಳ್ಳಲು ಸೂಚನೆ ನೀಡಿದ್ದೇನೆ. ಸುಮಾರು 26 ಕಾರ್ಯಕ್ರಮ ಮಾಡುವಂತೆ ಹೇಳಿದ್ದು ಶಿವಮೊಗ್ಗದಲ್ಲಿ ಎರಡು ಉಪವಿಭಾಗ ಕಚೇರಿ, ತಹಶೀಲ್ದಾರ್ ಕಚೇರಿ, 32 ಸ್ಥಳೀಯ ಸಂಸ್ಥೆ, ಎಪಿಎಂಸಿ, ಅಂಗನವಾಡಿ, ಶಾಲೆ ಸೇರಿ ಹಲವೆಡೆ ಭೇಟಿ ನೀಡುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net