ರಾಜ್ಯದಲ್ಲಿ ನೂತನ ಅಬಕಾರಿ ತೆರಿಗೆ ಪದ್ಧತಿ ಯಶ್ವಸಿ: ಮದ್ಯ ಆದಾಯ ಹೆಚ್ಚಳ- New excise tax system successful

2026ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಕರ್ನಾಟಕದ ಒಟ್ಟು ಮದ್ಯ ಆದಾಯ ಸಂಗ್ರಹ ಶೇ.13.4 ಏರಿಕೆಯಾಗಿದ್ದು, 22,191 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ತೆರಿಗೆ ಬೆಳವಣಿಗೆ ಕೇವಲ ಶೇ. 2.8 ರಷ್ಟಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.19 ಬಿಯರ್ ಮಾರಾಟ ಕುಸಿತವಾಗಿತ್ತು. ಈ ಬಾರಿ ಬಿಯರ್ ಮಾರಾಟ ಶೇ. 41.3 ಏರಿಕೆಯಾಗಿದೆ ಎಂದು ಬಿಎಐ ಮಾಹಿತಿ ನೀಡಿದೆ.
ಮದ್ಯ ಆದಾಯ ಹೆಚ್ಚಳ
ಆಲ್ಕೋಹಾಲ್ ಪ್ರಮಾಣ ಆಧಾರಿತ (ಎಐಬಿ)
Published on: 

ಬೆಂಗಳೂರು: (New excise tax system successful in the state) ರಾಜ್ಯದಲ್ಲಿ ಜಾರಿಗೆ ಬಂದಿರುವ ನೂತನ ‘ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧಾರಿತ’ (ಎಐಬಿ) ತೆರಿಗೆ ಪದ್ಧತಿ ಯಶಸ್ವಿಯಾಗಿದೆ. ಇದರಿಂದ ಕರ್ನಾಟಕದ ಅಬಕಾರಿ ಆದಾಯ ಏರಿಕೆಯಾಗಿದೆ ಎಂದು ಬ್ರಿವೆರ್ಸ್ ಅಸೋಸಿಯೇಷನ್ ಆ್ ಇಂಡಿಯಾ (ಬಿಎಐ) ತಿಳಿಸಿದೆ.

ಭಾರತದ ಇತರ ರಾಜ್ಯಗಳು ಕೂಡ ಕರ್ನಾಟಕದ ಹೊಸ ತೆರಿಗೆ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಇತರೆ ರಾಜ್ಯಗಳಲ್ಲೂ ಇದು ಜಾರಿಯಾಗುವ ಸಾಧ್ಯತೆಯಿದೆ. ಎಐಬಿ ತೆರಿಗೆ ಪದ್ಧತಿಯಲ್ಲಿ ಪಾನೀಯದಲ್ಲಿರುವ ಆಲ್ಕೋಹಾಲ್ ಪ್ರಮಾಣ ಆಧರಿಸಿ ಅಬಕಾರಿ ಸುಂಕ ವಿಧಿಸಲಾಗುತ್ತದೆ.

Also Read
ಸೇವಾ ಭದ್ರತೆ, ಆಡಳಿತಾತ್ಮಕ ಗೊಂದಲದ ಕುರಿತು ಇಎಸ್ಐಎಸ್ ​ನೌಕರರ ಆತಂಕ: ಸರ್ಕಾರಕ್ಕೆ ಪತ್ರ- ESIS employees
ಮದ್ಯ ಆದಾಯ ಹೆಚ್ಚಳ

2026ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಕರ್ನಾಟಕದ ಒಟ್ಟು ಮದ್ಯ ಆದಾಯ ಸಂಗ್ರಹ ಶೇ.13.4 ಏರಿಕೆಯಾಗಿದ್ದು, 22,191 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ತೆರಿಗೆ ಬೆಳವಣಿಗೆ ಕೇವಲ ಶೇ. 2.8 ರಷ್ಟಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.19 ಬಿಯರ್ ಮಾರಾಟ ಕುಸಿತವಾಗಿತ್ತು. ಈ ಬಾರಿ ಬಿಯರ್ ಮಾರಾಟ ಶೇ. 41.3 ಏರಿಕೆಯಾಗಿದೆ ಎಂದು ಬಿಎಐ ಮಾಹಿತಿ ನೀಡಿದೆ.

ಹೊಸ ಪದ್ಧತಿಯಿಂದ ಭಾರತೀಯ ನಿರ್ಮಿತ ವಿದೇಶಿ ಮದ್ಯ(ಐಎಂಎಫ್‌ಎಲ್) ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂಬ ಆತಂಕವಿತ್ತು. ಆದರೆ, ಐಎಂಎಫ್‌ಎಲ್ ಮಾರಾಟದಲ್ಲಿ ಶೇ.1.1 ಸ್ಥಿರ ಬೆಳವಣಿಗೆ ಕಂಡುಬಂದಿದ್ದು, ಈ ವಿಭಾಗದಿಂದ ಬರುವ ತೆರಿಗೆ ಆದಾಯ ಶೇ. 13 ಹೆಚ್ಚಾಗಿದೆ. ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವುದು ಜಾಗತಿಕ ಮಟ್ಟದ ಅತ್ಯುತ್ತಮ ಮಾನದಂಡವಾಗಿದ್ದು ಎಂದು ಬಿಎಐ ವಿವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net