ತಾಯಿಗೆ ಫೋಟೋ ತೋರಿಸಿದಾಗ, ಅದರಲ್ಲಿರುವ ವ್ಯಕ್ತಿ ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಆತ ನನ್ನ ಬಾಯ್ಫ್ರೆಂಡ್ ಎಂದು ಮಗಳು ಹೇಳುತ್ತಾಳೆ. ನಿಜವಾಗಿಯೂ ಆತ ನಿನ್ನ ಬಾಯ್ಫ್ರೆಂಡಾ? ನಿಮ್ಮ ನಡುವಿನ ಪ್ರೀತಿ ಯಾವಾಗ ಆರಂಭವಾಯಿತು? ಎಂದೆಲ್ಲ ತಾಯಿ ಪ್ರಶ್ನೆಗಳನ್ನು ಕೇಳುತ್ತಾಳೆ. ಇದಕ್ಕೆ ಉತ್ತರ ನೀಡುವ ಪಾವನಿ, ಆತನನ್ನು ಬಹಳ ದಿನಗಳಿಂದ ತಿಳಿದಿದ್ದೇನೆ. ಆತ ಒಳ್ಳೆಯ ಸ್ನೇಹಿತ, ಸರ್ಕಾರಿ ಕೆಲಸದಲ್ಲಿದ್ದಾನೆ ಮತ್ತು ಶ್ರೀಮಂತರು ಕೂಡ ಹೌದು ಎನ್ನುತ್ತಾಳೆ. ಅಲ್ಲದೆ, ಆತ ಕೆಲವೇ ದಿನಗಳಲ್ಲಿ ನಮ್ಮ ಮನೆಗೆ ಬರುತ್ತಾನೆ ಎಂದು ಹೇಳುತ್ತಾಳೆ. ಇದರಿಂದ ಕೋಪಗೊಂಡ ತಾಯಿ, ನಿಮ್ಮ ತಂದೆಗೆ ಈ ವಿಷಯ ತಿಳಿದರೆ, ಅವರು ಸುಮ್ಮನೇ ಬಿಡುವುದಿಲ್ಲ ಎನ್ನುತ್ತಾರೆ. ಇದೆಲ್ಲ ಸರಿ ಹೋಗುವುದಿಲ್ಲ ಎಂದು ಮಗಳನ್ನು ಹಿಗ್ಗಾಮುಗ್ಗಾ ಬೈಯುತ್ತಾಳೆ. ಅಲ್ಲದೆ, ಮಗಳ ಮುಖಕ್ಕೆ ಬಾರಿಸುತ್ತಾಳೆ. ನಂತರ, ಫೋನ್ ಎಸೆಯಲು ಹೊರಟ ದೃಶ್ಯವು ಕಡಿತಗೊಳ್ಳುತ್ತದೆ.