ಏಷ್ಯಾದ ಕೆಟ್ಟ ಕರೆನ್ಸಿ; ನಮ್ಮ ಕರೆನ್ಸಿಗೆ ವಿಶ್ವದಲ್ಲಿ ಮೌಲ್ಯವೇ ಇಲ್ಲ: ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

Mallikarjun Kharge | ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನಿ ಮೋದಿ
Mallikarjun Kharge | ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನಿ ಮೋದಿ
Published on
ನವದೆಹಲಿ: ಅಮೆರಿಕದ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತವು ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ನಿಜವಾದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸರ್ಕಾರ ಎಷ್ಟೇ ಡೋಲು ಬಾರಿಸಿದರೂ, ರೂಪಾಯಿಯ ಕುಸಿತವು ದೇಶದ ನಿಜವಾದ ಆರ್ಥಿಕ ಪರಿಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಅಲ್ಲದೆ, ಮೋದಿ ಸರ್ಕಾರದ ನೀತಿಗಳು ಸರಿಯಾಗಿದ್ದರೆ, ರೂಪಾಯಿ ಕುಸಿಯುತ್ತಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ 2014 ಕ್ಕೂ ಮೊದಲು ಮೋದಿ ಹೇಳಿದ್ದರು. ಭಾರತದ ರೂಪಾಯಿ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಏಕೆ ಎಂದು ನೀವು ಇದಕ್ಕೆ ಉತ್ತರಿಸಬೇಕಾಗುತ್ತದೆ. ಅಲ್ಲದೆ, ದೇಶವು ನಿಮ್ಮಿಂದ ಉತ್ತರವನ್ನು ಕೇಳುತ್ತಿದೆ. ಇಂದು ನಾವು ಮೋದಿ ಅವರನ್ನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇವೆ. ಮೋದಿ ಉತ್ತರಿಸಬೇಕಾಗುತ್ತದೆ ಎಂದು ಖರ್ಗೆ ಕಿಡಿಕಾರಿದ್ದಾರೆ.
ಇದಕ್ಕೂ ಮೊದಲು ಸಂಸತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದರ್ಥ ಎಂದು ಕೇಂದ್ರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು ಮಾತನಾಡಿದ ಖರ್ಗೆ, ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ ಮತ್ತು ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಮೋದಿ ಹೇಳುತ್ತಲೇ ಇರುತ್ತಾರೆ. ಆದರೆ, ರೂಪಾಯಿ ಮೌಲ್ಯ ಕುಸಿದಾಗ ನಿಜವಾದ ಆರ್ಥಿಕ ಪರಿಸ್ಥಿತಿ ಏನೆಂದು ನಮಗೆ ತಿಳಿಯುತ್ತದೆ.
ಬುಧವಾರ, ರೂಪಾಯಿ ಮೌಲ್ಯವು ಮೊದಲ ಬಾರಿಗೆ ಡಾಲರ್‌ಗೆ 90 ರೂಪಾಯಿಗಳ ಮಟ್ಟವನ್ನು ದಾಟಿ, ಡಾಲರ್ ವಿರುದ್ಧ 90.15 ರ ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅಲ್ಲದೆ, ಗುರುವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 28 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 90.43ಕ್ಕೆ ತಲುಪಿದೆ.
ಕಳೆದ ತಿಂಗಳವರೆಗೂ ಡಾಲರ್ ಮಾರಾಟದ ಮೂಲಕ ಆಕ್ರಮಣಕಾರಿ ಹಸ್ತಕ್ಷೇಪದ ಮೂಲಕ ರೂಪಾಯಿಯನ್ನು ಬೆಂಬಲಿಸಿದ್ದ ಆರ್‌ಬಿಐ, ಕಳೆದ ಏಳು ವಹಿವಾಟು ಅವಧಿಗಳಲ್ಲಿ ರೂಪಾಯಿ ಶೇ. 1.3 ರಷ್ಟು ಕುಸಿಯಲು ಅವಕಾಶ ಮಾಡಿಕೊಟ್ಟಿದೆ.ವರ್ಷಕ್ಕೆ ಶೇ. 5.5 ರಷ್ಟು ಕುಸಿದ ರೂಪಾಯಿ, ಏಷ್ಯಾದ ಅತ್ಯಂತ ಕಳಪೆ ಕರೆನ್ಸಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net