ಸಿಇಸಿ ರಾಜೀನಾಮೆ ನೀಡೋವರೆಗೂ ಹಿಂದೆ ಸರಿಯಲ್ಲ: ಇಂದು ಕೂಡ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿರುವ ಸಿಜೆಪಿ | CJP

ಎಸ್​ಐಆರ್ ವಿವಾದ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಶನಿವಾರ ನಡೆಸಬೇಕೆಂದಿದ್ದ ಪ್ರತಿಭಟನೆಯನ್ನು ದಿಗ್ಬಂಧನ, ನಾಯಕರು ಸೇರಿ ಸಾವಿರಾರು ಮಂದಿಯನ್ನು ಬಂಧಿಸುವ ಮೂಲಕ ದೆಹಲಿ ಪೊಲೀಸರು ತಡೆದಿದ್ದರು. ಆದರೆ ಹೋರಾಟವನ್ನು ನಿಲ್ಲಿಸಲ್ಲ ಎಂದಿರುವ ಸಿಜೆಪಿ, ಭಾನುವಾರ(ಅ. 11) ಬೆಳಿಗ್ಗೆ 10 ಗಂಟೆಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳನ್ನು ಪುನರಾರಂಭಿಸುವುದಾಗಿ ಹೇಳಿದೆ.
ಸಿಇಸಿ ರಾಜೀನಾಮೆ ನೀಡೋವರೆಗೂ ಹಿಂದೆ ಸರಿಯಲ್ಲ: ಇಂದು ಕೂಡ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿರುವ ಸಿಜೆಪಿ | CJP
Published on: 

ನವದೆಹಲಿ: ಎಸ್​ಐಆರ್ ವಿವಾದ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಶನಿವಾರ ನಡೆಸಬೇಕೆಂದಿದ್ದ ಪ್ರತಿಭಟನೆಯನ್ನು ದಿಗ್ಬಂಧನ, ನಾಯಕರು ಸೇರಿ ಸಾವಿರಾರು ಮಂದಿಯನ್ನು ಬಂಧಿಸುವ ಮೂಲಕ ದೆಹಲಿ ಪೊಲೀಸರು ತಡೆದಿದ್ದರು. ಆದರೆ ಹೋರಾಟವನ್ನು ನಿಲ್ಲಿಸಲ್ಲ ಎಂದಿರುವ ಸಿಜೆಪಿ, ಭಾನುವಾರ(ಅ. 11) ಬೆಳಿಗ್ಗೆ 10 ಗಂಟೆಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳನ್ನು ಪುನರಾರಂಭಿಸುವುದಾಗಿ ಹೇಳಿದೆ.

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಿಜೆಪಿ ರಾಷ್ಟ್ರೀಯ ಸಂಘಟನೆಯ ಉಸ್ತುವಾರಿ ಅಜಿಂಕ್ಯ ಶಿಂಧೆ, ನಮ್ಮ ನಾಯಕರು ಮತ್ತು ಯುವಕರ ಬಂಧನದ ಹೊರತಾಗಿಯೂ ಪಕ್ಷವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಎಲ್ಲರ ಬಂಧನದ ಬಳಿಕ ನಾವು ಮನೆಗೆ ಮರಳುತ್ತೇವೆ ಎಂದು ಸರ್ಕಾರ ಭಾವಿಸಿರಬೇಕು. ಮೋದಿ, ಶಾ ಅವರ ಈ ಭಯವು ನಾವು ಅರ್ಧದಷ್ಟು ಹೋರಾಟವನ್ನು ಗೆದ್ದಿದ್ದೇವೆ ಎಂದು ತೋರಿಸುತ್ತದೆ ಎಂದಿದ್ದಾರೆ.

ನೀವು ಎಷ್ಟೇ ಜನರನ್ನು ಬಂಧಿಸಿದರೂ, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಾವು ಹಿಂತಿರುಗುವುದಿಲ್ಲ. ನಾಳೆ ಬೆಳಿಗ್ಗೆ 10 ಗಂಟೆಗೆ ನಾವು ಮತ್ತೆ ಜಂತರ್ ಮಂತರ್‌ಗೆ ಹೋಗುತ್ತೇವೆ. ಪೊಲೀಸರು ಎಲ್ಲೆಲ್ಲಿ ತಡೆಯುತ್ತಾರೋ ಅದೇ ಸ್ಥಳವನ್ನು ಜಂತರ್ ಮಂತರ್ ಎಂದು ಭಾವಿಸಿ ಹೋರಾಟ ಮಾಡುವಂತೆ ಯುವಕರಿಗೆ ಕರೆ ನೀಡಿದ್ದಾರೆ.

Also Read
ಸೌದಿಯ ರಿಯಾದ್ ಅಂತಾರಾಷ್ಟ್ರೀಯ ಏರ್ಪೋರ್ಟ್​ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ | Missile attack
ಸಿಇಸಿ ರಾಜೀನಾಮೆ ನೀಡೋವರೆಗೂ ಹಿಂದೆ ಸರಿಯಲ್ಲ: ಇಂದು ಕೂಡ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿರುವ ಸಿಜೆಪಿ | CJP

13 ಕೋಟಿ ಮತಗಳನ್ನು ಡಿಲಿಟ್ ಮಾಡಲಾಗಿದೆ. ಮತ್ತು ತಿರುಚಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವವರೆಗೂ ದೇಶಾದ್ಯಂತ ನಾಗರಿಕ ಅಸಹಕಾರ ಮತ್ತು ಬೀದಿ ಪ್ರತಿಭಟನೆಗಳು ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.

ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಜೆಪಿ ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿತ್ತು. ಈ ಪ್ರತಿಭಟನೆಯು ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಅದರ ನಾಯಕರಾದ ರಾಂಕಾ, ದಾಸ್ ಸೇರಿದಂತೆ ಹಲವು ಪ್ರಮುಖ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಂತರ್ ಮಂತರ್ ಬಳಿ ನಡೆಯಬೇಕಿದ್ದ ಈ ಬೃಹತ್ ಪ್ರತಿಭಟನಾ ಸಭೆಯನ್ನು ತಡೆಯಲು ಪೊಲೀಸರು ಭಾರಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಮುಂಜಾಗೃತಾ ಕ್ರಮವಾಗಿ ನೂರಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ (ಏಜೆನ್ಸೀಸ್).

Related Stories

ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ವಕ್ತಾರ ಅಶುತೋಷ್ ರಾಂಕಾ
CJP Protest
BJP National President Nitin Navin lashes out at Rahul Gandhi and Arvind Kejriwal.
ಸಿಜೆಪಿ ಪ್ರತಿಭಟನೆ ಹಿನ್ನೆಲೆ ಇಂದು ಭಾಗಶಃ ದೆಹಲಿ ಬಂದ್; ನಗರದ ಹೃದಯ ಭಾಗದಲ್ಲಿ ಇಂಟರ್ನೆಟ್, ರಸ್ತೆಗಳು, ಮೆಟ್ರೋ ಸ್ತಭ್ದ | CJP protests
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net