ವೀವ್ಸ್​ ಹುಚ್ಚಿಗೆ ಇಷ್ಟು ಕೆಳಮಟ್ಟಕ್ಕೆ ಇಳಿತಾರಾ? ಕೇರಳದ ದೀಪಕ್​ ಸಾವು ಪ್ರಕರಣ ನೆನಪಿಸಿದ ಯುವತಿಯ ಈ ವೈರಲ್​​ ವಿಡಿಯೋ

Viral Video
ವೀವ್ಸ್​ ಹುಚ್ಚಿಗೆ ಇಷ್ಟು ಕೆಳಮಟ್ಟಕ್ಕೆ ಇಳಿತಾರಾ? ಕೇರಳದ ದೀಪಕ್​ ಸಾವು ಪ್ರಕರಣ ನೆನಪಿಸಿದ ಯುವತಿಯ ಈ ವೈರಲ್​​ ವಿಡಿಯೋ
Published on: 

Viral Video: ಡಿಜಿಟಲ್​ ಯುಗದಲ್ಲಿ ಈಗ ಎಲ್ಲವೂ ಆಯೋಮಯ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಆಕ್ಟೀವ್ ಇರುವ ಒಂದಷ್ಟು ಮಂದಿ, ಹೆಚ್ಚು ಲೈಕ್ಸ್‌ ಮತ್ತು ವೀಕ್ಷಣೆಗಾಗಿ ಎಷ್ಟು ಕೀಳು ಮಟ್ಟಕ್ಕೆ ಬೇಕಾದರೂ ಹೋಗಲು ಮುಂದಾಗಿದ್ದಾರೆ, ತಮಗೆ ಬೇಕಿರುವ ವೀವ್ಸ್​, ಫಾಲೋವರ್ಸ್​ಗಾಗಿ ಯಾರ ಪ್ರಾಣವನ್ನಾದರೂ ಬಲಿ ಕೊಡಲು ಹಿಂದೆ ಮುಂದೆ ಯೋಚಿಸದ ಕ್ರೂರ ಮನಸ್ಥಿತಿಯಲ್ಲಿದ್ದಾರೆ ಎಂಬುದಕ್ಕೆ ಇಲ್ಲೊಂದು ವೈರಲ್ ವಿಡಿಯೋ ಜ್ವಲಂತ ಸಾಕ್ಷಿ.

ಕೆಲವು ದಿನಗಳಿಂದ ವೈರಲ್​ ವಿಡಿಯೋದಲ್ಲಿ, ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಯುವತಿಯೊಬ್ಬಳು, ಮುಂದಿರುವ ಹಿರಿಯ ಪುರುಷ ವ್ಯಕ್ತಿಯೊಬ್ಬರು ತನ್ನ ದೇಹದ ಭಾಗವನ್ನು ಮುಟ್ಟುತ್ತಿದ್ದಾನೆ ಎಂಬ ಅರ್ಥದಲ್ಲಿ ರೆಕಾರ್ಡ್​ ಮಾಡಿಕೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ. ಈ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್​ ಆಗುತ್ತಿದ್ದಂತೆ ಇದೀಗ ನೆಟ್ಟಿಗರು ಯುವತಿಯ ಅಸಭ್ಯ ವರ್ತನೆಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಯುವತಿ ಹಂಚಿಕೊಂಡಿರುವ ವಿಡಿಯೋವನ್ನು ಸೂಕ್ಷ್ಮವಾಗಿ ನೋಡಿರುವ ಬಹುತೇಕರು ಆಕೆಯ ವಿರುದ್ಧ ಸಿಡಿದೆದ್ದಿದ್ದಾರೆ. ಇದೆಲ್ಲವೂ ಯುವತಿಯ ರೀಲ್ಸ್​ ಮೋಹ ಮತ್ತು ವೀವ್ಸ್​, ಲೈಕ್ಸ್​ಗಾಗಿ ಮಾಡಿಕೊಂಡಿರುವುದು ಎಂದು ತೀವ್ರವಾಗಿ ಟೀಕಿಸಿದ್ದಾರೆ. ನಿಮ್ಮ ಲೈಕ್ಸ್‌ ಮತ್ತು ವೀವ್ಸ್​ ಹುಚ್ಚಿಗಾಗಿ ಸಹ ಪ್ರಯಾಣಿಕನ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವುದು ಎಷ್ಟು ಸರಿ? ಇಂತಹ ಕೃತ್ಯಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಇಂತಹದ್ದೇ ಘಟನೆಗೆ ಕೇರಳದ ದೀಪಕ್​ ಸಾವು

ಈ ವರ್ಷದ ಆರಂಭದಲ್ಲಿ, ಕೇರಳ ಮೂಲದ ದೀಪಕ್​ ಸಾವು ಪ್ರಕರಣ ಇಡೀ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದು ಬಹುತೇಕರಿಗೆ ಗೊತ್ತಿದೆ. ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್​ ಸಾವಿಗೆ ಶರಣಾದನು. ತನ್ನ ವೀವ್ಸ್​ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸಿದ ಆರೋಪಿ ಶಿಮ್ಜಿತಾ ಮುಸ್ತಫಾ ವಿರುದ್ಧ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಯಿತು.

Also Read
ತಂದೆ ಬದುಕಿರುವಾಗಲೇ ಮಗನಿಂದ ಶವಪೆಟ್ಟಿಗೆ ರೆಡಿ! ಪುಟ್ಟ ಬಾಲಕನ ಈ ವಿಚಿತ್ರ ಹವ್ಯಾಸದ ಹಿಂದಿದೆ ರೋಚಕ ಸ್ಟೋರಿ | Coffin Box
Viral Video

ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಶಿಮ್ಜಿತಾ, ತನಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯಕರವಾಗಿ ಮುಟ್ಟುತ್ತಿದ್ದಾನೆ ಎಂದು ವಿಡಿಯೋ ಮಾಡಿ, ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿ, ವ್ಯಕ್ತಿಗೆ ಅಲ್ಲೇ ಹಿಗ್ಗಾಮುಗ್ಗಾ ಥಳಿಸಬೇಕಿತ್ತು ಎಂಬ ಕಮೆಂಟ್​ಗಳಿಂದ ತುಂಬಿತು. ಸಾಕಷ್ಟು ಜನರು, ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು ಎಂದೆಲ್ಲ ಆಕ್ರೋಶ ಹೊರಹಾಕಿದರು. ತನ್ನದೇನು ತಪ್ಪಿಲ್ಲದಿದ್ದರೂ ಸುಖಾಸುಮ್ಮನೆ ನನ್ನನ್ನು ವಿಡಿಯೋದಲ್ಲಿ ತೋರಿಸಿ, ಮಾನ-ಮರ್ಯಾದೆ ಕಳೆದಳು ಎಂದು ದೀಪಕ್, ಮನನೊಂದು ಆತ್ಮಹತ್ಯೆಗೆ ಶರಣಾದರು.