ತೆಲಂಗಾಣ: ಮಹಬೂಬಾಬಾದ್: ದೇಶದಲ್ಲಿ ಕೊಲೆ ಪ್ರಕರಣಗಳು ಅದ್ಯಾಕೋ ವಿಚ್ಛೇದನ ಕೇಸ್ಗಳಂತೆ ವಿಪರೀತ ಹೆಚ್ಚುತ್ತಿದೆ. ಅದರಲ್ಲೂ, ಮದುವೆಯಾಗುವ ಮುನ್ನವೇ ಜೋಡಿಗಳು ಪರಸ್ಪರ ಒಳ ಸಂಚು ರೂಪಿಸಿ (Murder Plot), ಭೀಕರ, ಬರ್ಬರವಾಗಿ ಕೊಲೆಗೈದರೆ, ಇನ್ನೂ ಕೆಲವರಂತು ಸದ್ದಿಲ್ಲದಂತೆ ಕೆಲಸ ಮುಗಿಸಿ ತಮಗೇನೂ ಗೊತ್ತಿಲ್ಲದಂತೆ ಖಾಕಿ ಮುಂದೆ ನಾಟಕವಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ, ಇತ್ತೀಚಿನ ಹನಿಮೂನ್ ಮರ್ಡರ್, ಕೇತನ್ ಅಗರ್ವಾಲ್ ಕೇಸ್ಗಳೇ ಜ್ವಲಂತ ಸಾಕ್ಷಿ. ಇಷ್ಟೆಲ್ಲ ಕೇಸ್ಗಳಲ್ಲಿ ಮೃತಪಟ್ಟಿರುವುದು ಯುವಕರೇ ಜಾಸ್ತಿ. ಮದುವೆ ಆಗಿದ್ದರೆ ಗಂಡಂದಿರೇ ಹೆಚ್ಚು.