ಪ್ರಧಾನಿ ಸುರಕ್ಷತೆಗಾಗಿ ಸಂಸತ್ತಿನ ಇತಿಹಾಸದಲ್ಲೇ ಅತಿದೊಡ್ಡ ನಿರ್ಧಾರ.. ಸ್ಪೋಟಕ ಹೇಳಿಕೆ ನೀಡಿದ ಸ್ಪೀಕರ್​ ಓಂ ಬಿರ್ಲಾ | Om Birla

Om Birla | ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಪ್ರಧಾನಿ ನರೇಂದ್ರ ಮೋದಿ
Om Birla | ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಪ್ರಧಾನಿ ನರೇಂದ್ರ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೇಲೆ ಹಲ್ಲೆ!
  • ಆರೋಪ ನಿರಾಕರಿಸಿದ ಪ್ರಿಯಾಂಕಾ ಗಾಂಧಿ
  • ಲೋಕಸಭೆಯಲ್ಲಿ ಕೇಂದ್ರ-ವಿರೋಧ ಪಕ್ಷದ ನಡುವೆ ಹಣಾಹಣಿ
ದೆಹಲಿ: ಬುಧವಾರ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೂ ಮುನ್ನ ಕೆಳಮನೆಯ ಕಲಾಪ ಮುಂದೂಡಿಕೆಗೆ ಕಾರಣವಾದ ಗದ್ದಲದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla), ವಿರೋಧ ಪಕ್ಷದ ಸದಸ್ಯರು ಪ್ರಧಾನಿಯವರ ಕುರ್ಚಿಯನ್ನು ಸುತ್ತುವರೆದಿದ್ದರಿಂದ ಸದನ ಪ್ರವೇಶಿಸದಂತೆ ವೈಯಕ್ತಿಕವಾಗಿ ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸದರು ಪ್ರಧಾನಿಗಳ ಕುರ್ಚಿಯನ್ನು ಸುತ್ತುವರೆದಿದ್ದರು, ಆದ್ದರಿಂದ ನಾನು ಅವರಿಗೆ ಲೋಕಸಭೆಗೆ ಬರದಂತೆ ಸಲಹೆ ನೀಡಿದ್ದೆ ಎಂದು ಬಿರ್ಲಾ ತಿಳಿಸಿದ್ದು, ನಿನ್ನೆಯ ಅಸ್ತವ್ಯಸ್ತ ಘಟನೆಗಳ ಬಗ್ಗೆ ಸ್ವತಃ ಸದನಕ್ಕೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.
ಲೋಕಸಭೆಯ ತಮ್ಮ ಕೊಠಡಿಯೊಳಗೆ ಕೆಲವು ವಿರೋಧ ಪಕ್ಷದ ಸದಸ್ಯರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಸ್ಪೀಕರ್, ಅವರೆಲ್ಲಾ ಪ್ರಧಾನ ಮಂತ್ರಿಯವರ ಭಾಷಣದ ಸಮಯದಲ್ಲಿ ಗದ್ದಲವನ್ನು ಸೃಷ್ಟಿಸಲು ಪ್ರಯತ್ನಿಸಬಹುದು ಎಂಬ ಬಗ್ಗೆ ಮೊದಲೇ ಮಾಹಿತಿ ಇತ್ತು, ಅಂತಹ ಘಟನೆ ನಡೆದಿದ್ದರೆ, ಅದು ರಾಷ್ಟ್ರದ ಘನತೆಗೆ ಹಾನಿಯಾಗುತ್ತಿತ್ತು. ಅದಕ್ಕಾಗಿಯೇ ಪ್ರಧಾನಿಯನ್ನು ಸಂಸತ್ತಿಗೆ ಬರದಂತೆ ತಡೆದೆ ಎಂದು ಓಂ ಬಿರ್ಲಾ ಹೇಳಿದರು.
ಸ್ಪೀಕರ್ ಕಚೇರಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ತರುವುದು ಈ ಸದನದ ಸಂಪ್ರದಾಯವಲ್ಲ ಎಂದಿರುವ ಸ್ಪೀಕರ್​, ನಿನ್ನೆ ನಡೆದದ್ದು ಸಂಸತ್ತಿನ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ಮೇಲೆ ಹಲ್ಲೆ!

ವಿರೋಧ ಪಕ್ಷದ ಹಲವಾರು ಮಹಿಳಾ ಸಂಸದರು ಸದನದ ಬಾವಿಗಿಳಿದು, ಪ್ರಧಾನಿಯವರ ಕುರ್ಚಿಯ ಕಡೆಗೆ ಸಾಗಿದರು. ತಮ್ಮ ಸ್ಥಾನಗಳಿಗೆ ಮರಳುವಂತೆ ಹಿರಿಯ ಸಚಿವರು ಮನವಿ ಮಾಡಿದರು ಅವರೆಲ್ಲಾ ನಿರ್ಲಕ್ಷಿಸಿದ್ದಾರೆ, ಪರಿಸ್ಥಿತಿ ನಿಯಂತ್ರಣ ತಪ್ಪಿದ್ದರಿಂದ ಪ್ರಧಾನಮಂತ್ರಿಗಳ ಭಾಷಣವನ್ನು ಮುಂದೂಡಬೇಕಾಯಿತು ಎಂದು ಮನೋಜ್​ ತಿವಾರಿ ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಕುಳಿತುಕೊಳ್ಳುವ ಆಸನದ ಬಳಿ ದೊಡ್ಡ ಗದ್ದಲ ಸೃಷ್ಟಿಸಿದರು, ವಿರೋಧ ಪಕ್ಷದ ಸಂಸದರು ಆಕ್ರಮಣಕಾರಿಯಾಗಿ ವರ್ತಿಸಿದರು, ಈ ವೇಳೆ ಗಂಭೀರ ಭದ್ರತಾ ಕಾಳಜಿ ಪ್ರಶ್ನೆಯೂ ಉದ್ಭವವಾಯಿತು, ಪ್ರಧಾನಿಯವರ ಮೇಲೆಯೂ ದಾಳಿ ಮಾಡುವ ಸಾಧ್ಯತೆಯೂ ಇತ್ತು ಎಂದು ತಿವಾರಿ ಹೇಳಿದ್ದಾರೆ.

ಆರೋಪ ನಿರಾಕರಿಸಿದ ಪ್ರಿಯಾಂಕಾ ಗಾಂಧಿ

ಬಿಜೆಪಿ ನಾಯಕರ ಆರೋಪಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಮೋದಿ ಮೇಲಿನ ದಾಳಿಯ ಮಾತು ಶುದ್ಧ ಸುಳ್ಳು. ನಮ್ಮ ಸದಸ್ಯರು ಕೇವಲ ಪ್ರತಿಭಟನೆ ನಡೆಸುತ್ತಿದ್ದರು ಎಂದು ಸಮರ್ಥನೆಗಿಳಿದರು.
ಪ್ರಧಾನಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸ್ಪೀಕರ್ ಹಿಂದೆ ಅಡಗಿಕೊಂಡಿದ್ದಾರೆ ಎಂದು ಆರೋಪಿಸಿದ ಪ್ರಿಯಾಂಕಾ, ಅವರ ಈ ನಿರಾಕರಣೆಯು ವಿರೋಧ ಪಕ್ಷದ ಕಾನೂನುಬದ್ಧ ಭಿನ್ನಾಭಿಪ್ರಾಯದ ನಿರೂಪಣೆಯನ್ನು ಒತ್ತಿಹೇಳುತ್ತದೆ ಎಂದರು.

ಲೋಕಸಭೆಯಲ್ಲಿ ಕೇಂದ್ರ-ವಿರೋಧ ಪಕ್ಷದ ನಡುವೆ ಹಣಾಹಣಿ

ವಿರೋಧ ಪಕ್ಷದ ಮಹಿಳಾ ಸಂಸದರ ಗುಂಪೊಂದು ಪೀಠಗಳ ಕಡೆಗೆ ತೆರಳಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರನ್ನು ಎದುರಿಸಿತು, ಇದು ಬಿಸಿ ಮಾತಿನ ಚಕಮಕಿಗೆ ಕಾರಣವಾಯಿತು. ಸಂಸದರಾದ ಜ್ಯೋತಿಮಣಿ ಮತ್ತು ವರ್ಷಾ ಗಾಯಕ್ವಾಡ್ ಸೇರಿದಂತೆ ಅನೇಕರು ದುಬೆ ಕಡೆಗೆ ಸಾಗುತ್ತಿರುವುದು ಕಂಡುಬಂದಿತು, ಇದಕ್ಕೆ ತಿರುಗೇಟು ಎಂಬಂತೆ ಬಿಜೆಪಿ ಮಹಿಳಾ ಸಂಸದರು ಕೂಡ ವಿಪಕ್ಷ ಸದಸ್ಯರತ್ತ ಸಾಗಿದರು ಎನ್ನಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net