ವಿಡಿಯೋಗೇಮ್​ಗೆ ಏಕಿಷ್ಟು ಕ್ರೇಜ್?

ಪ್ರಪಂಚದ ಹಲವು ದೇಶಗಳಲ್ಲಿ ನವೆಂಬರ್ 19ರಂದು ರಜೆಗಾಗಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿತ್ತು! ಕೆಲವು ಕಂಪನಿಗಳಂತೂ ತಾವೇ ಅಧಿಕೃತ ರಜೆಯನ್ನು ಘೊಷಿಸಿದ್ದವು. ಇದಕ್ಕೆ ಕಾರಣ ಯಾವುದೇ ಹಬ್ಬ ಅಥವಾ ಉತ್ಸವವಲ್ಲ, ಬದಲಾಗಿ ಒಂದು ವಿಡಿಯೋ ಗೇಮ್ ಅದರ ಹೆಸರು- ಜಿಟಿಎ 6. ಅಭಿಮಾನಿಗಳು ಇದಕ್ಕಾಗಿ 13 ವರ್ಷಗಳಿಂದ ಕಾಯುತ್ತಿದ್ದರು. ಬಿಡುಗಡೆಗೂ ಮುನ್ನವೇ ಇದು ಭರ್ಜರಿ ಆದಾಯವನ್ನು ಗಳಿಸಿದೆ.
ವಿಡಿಯೋಗೇಮ್​ಗೆ ಏಕಿಷ್ಟು ಕ್ರೇಜ್?
WEB
Published on: 

ಪ್ರಪಂಚದ ಹಲವು ದೇಶಗಳಲ್ಲಿ ನವೆಂಬರ್ 19ರಂದು ರಜೆಗಾಗಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿತ್ತು! ಕೆಲವು ಕಂಪನಿಗಳಂತೂ ತಾವೇ ಅಧಿಕೃತ ರಜೆಯನ್ನು ಘೊಷಿಸಿದ್ದವು. ಇದಕ್ಕೆ ಕಾರಣ ಯಾವುದೇ ಹಬ್ಬ ಅಥವಾ ಉತ್ಸವವಲ್ಲ, ಬದಲಾಗಿ ಒಂದು ವಿಡಿಯೋ ಗೇಮ್ ಅದರ ಹೆಸರು- ಜಿಟಿಎ 6. ಅಭಿಮಾನಿಗಳು ಇದಕ್ಕಾಗಿ 13 ವರ್ಷಗಳಿಂದ ಕಾಯುತ್ತಿದ್ದರು. ಬಿಡುಗಡೆಗೂ ಮುನ್ನವೇ ಇದು ಭರ್ಜರಿ ಆದಾಯವನ್ನು ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪೋಸ್ಟ್ ಮಾಡಿ, ‘ಭಾರತವು ಬೇರೆ ರೀತಿಯ ಆಟವನ್ನು ಆಡುತ್ತಿದೆ’ ಎಂದು ಬರೆದಿದ್ದಾರೆ. ಅಷ್ಟಕ್ಕೂ, ಈ ಜಿಟಎ 6 ಒಳಗಿನ ಪ್ರಪಂಚ ಹೇಗಿದೆ ಮತ್ತು ಜನರು ಒಂದು ವಿಡಿಯೋ ಗೇಮ್ ಬಗ್ಗೆ ಇಷ್ಟೊಂದು ಉತ್ಸಾಹಿತರಾಗಲು ಕಾರಣವೇನು; ಇಲ್ಲಿದೆ ವಿವರ.

ಜಿಟಿಎ ಅಂದರೆ ಗ್ರ್ಯಾಂಡ್ ಥೆಫ್ಟ್ ಆಟೋ (Grand Theft Auto)- ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಅತಿ ಹೆಚ್ಚು ಮಾರಾಟವಾಗುವ ವಿಡಿಯೋ ಗೇಮ್ ಸರಣಿಯಾಗಿದೆ. ಇದನ್ನು ಅಮೆರಿಕನ್ ಕಂಪನಿಯಾದ ರಾಕ್​ಸ್ಟಾರ್ ಗೇಮ್ಸ್ 1997ರಲ್ಲಿ ತಯಾರಿಸಿತು. ಇದೊಂದು ಓಪನ್-ವರ್ಲ್ಡ್- ಆಕ್ಷನ್-ಅಡ್ವೆಂಚರ್ ಗೇಮ್ ಆಗಿದೆ. ಅಂದರೆ ಆಟಗಾರನಿಗೆ ಇಡೀ ಒಂದು ಕಾಲ್ಪನಿಕ ನಗರವನ್ನು ನೀಡಲಾಗುತ್ತದೆ, ಅಲ್ಲಿ ಆತ ತನ್ನ ಇಚ್ಛೆಯಂತೆ ಎಲ್ಲಿ ಬೇಕಾದರೂ ತಿರುಗಾಡಬಹುದು ಮತ್ತು ಏನು ಬೇಕಾದರೂ ಮಾಡಬಹುದು. ಈ ಗೇಮ್ಲ್ಲಿ ನಿಜವಾದ ಅಮೆರಿಕನ್ ನಗರಗಳಂತೆಯೇ ಇರುವ ಕಾಲ್ಪನಿಕ ನಗರಗಳನ್ನು ನಿರ್ವಿುಸಲಾಗುತ್ತದೆ. ಉದಾಹರಣೆಗೆ, ಜಿಟಿಎ 5ರಲ್ಲಿ ಲಾಸ್ ಸ್ಯಾಂಟೋಸ್ ಎಂಬ ನಗರವನ್ನು ತೋರಿಸಲಾಗಿತ್ತು, ಅದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರದಂತಿತ್ತು. ಆದರೆ ಹೊಸ ಜಿಟಿಎ 6ರಲ್ಲಿ ವೈಸ್ ಸಿಟಿ ಇದ್ದು, ಇದು ಅಮೆರಿಕದ ಮಿಯಾಮಿ ನಗರವನ್ನು ಆಧರಿಸಿದೆ. ಇದರಲ್ಲಿ ಆಟಗಾರರು ಒಂದು ಅಥವಾ ಎರಡು ಮುಖ್ಯ ಪಾತ್ರಗಳನ್ನು ನಿಯಂತ್ರಿಸುತ್ತಾರೆ. ಜಿಟಿಎ 6ರಲ್ಲಿ ಮೊದಲ ಬಾರಿಗೆ ಲೂಸಿಯಾ ಎಂಬ ಮಹಿಳಾ ಪಾತ್ರ ಮತ್ತು ಆಕೆಯ ಪುರುಷ ಸಂಗಾತಿ ಜೇಸನ್ ಜೋಡಿಯಿದೆ. ಇವರ ಕಥೆಯು ಅಮೆರಿಕದ ಪ್ರಸಿದ್ಧ ಕ್ರಿಮಿನಲ್ ಜೋಡಿ ಬೋನಿ ಮತ್ತು ಕ್ಲೈಡ್ ಆಧಾರಿತವಾಗಿದೆ.

ಆಟಗಾರರು ನಗರದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು. ಕಾರು, ಬೈಕ್ ಮುಂತಾದವುಗಳನ್ನು ಚಲಾಯಿಸಬಹುದು. ರೇಸಿಂಗ್ ಮಾಡಬಹುದು. ಮಿಷನ್​ಗಳು ಮತ್ತು ಇತರ ಚಟುವಟಿಕೆಗಳಿಂದ ಹಣ ಸಂಪಾದಿಸಿ ವಾಹನಗಳು, ಆಯುಧಗಳು, ಬಟ್ಟೆಗಳು ಮತ್ತು ಆಸ್ತಿಗಳನ್ನು ಖರೀದಿಸಬಹುದು. ಈ ಗೇಮ್ಲ್ಲಿ, ಭೂಗತ ಜಗತ್ತಿನಲ್ಲಿ ಸಣ್ಣಪುಟ್ಟ ಅಪರಾಧಗಳಿಂದ ಪ್ರಾರಂಭಿಸಿ ದೊಡ್ಡ ಮಿಷನ್​ಗಳನ್ನು ಪೂರ್ಣಗೊಳಿಸುತ್ತಾರೆ- ಉದಾಹರಣೆಗೆ ಬ್ಯಾಂಕ್ ದರೋಡೆ, ವಾಹನ ಕಳ್ಳತನ, ಗ್ಯಾಂಗ್ ವಾರ್ ಮತ್ತು ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗುವುದು. ಗೇಮ್ ಆನ್​ಲೈನ್ ಆವೃತ್ತಿಯಲ್ಲಿ ನಿಮ್ಮ ಸ್ನೇಹಿತರೊಂದಿಗೆ ಮಿಷನ್​ಗಳು, ರೇಸ್, ಚಾಲೆಂಜ್ ಮತ್ತು ಕಸ್ಟಮ್ ಮೋಡ್​ಗಳನ್ನು ಆಡಬಹುದು.

ಈ ಗೇಮ್ ವಿಶೇಷತೆಯೆಂದರೆ ಇದರಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಆಟವಾಡುವವನಿಗೆ ಮಿಷನ್ ಪೂರ್ಣಗೊಳಿಸಲು ಇಷ್ಟವಿಲ್ಲದಿದ್ದರೆ, ಆತ ನಗರದಲ್ಲಿ ಕಾರು ಅಥವಾ ಹೆಲಿಕಾಪ್ಟರ್ ಚಲಾಯಿಸಬಹುದು, ಸಮುದ್ರದಲ್ಲಿ ಬೋಟಿಂಗ್ ಮಾಡಬಹುದು, ಕ್ಲಬ್​ಗೆ ಹೋಗಬಹುದು, ಶಾಪಿಂಗ್ ಮಾಡಬಹುದು ಅಥವಾ ಸುಮ್ಮನೆ ರಸ್ತೆಯಲ್ಲಿ ನಡೆದಾಡುತ್ತ ನಗರದ ನೈಟ್​ಲೈಫ್ ನೋಡಬಹುದು. ಗೇಮ್ಲ್ಲಿ ಅಪರಾಧಗಳನ್ನು ಮಾಡಿದಾಗ ಆಟಗಾರನ ಮೇಲೆ ವರ್ಚುವಲ್ ಪೊಲೀಸ್ ಕೇಸ್​ಗಳು ಸಹ ದಾಖಲಾಗುತ್ತವೆ, ಅವುಗಳಿಂದ ತಪ್ಪಿಸಿಕೊಳ್ಳಲು ಗೇಮ್ ಒಳಗೇ ಕಾನೂನು ಪ್ರಕ್ರಿಯೆ ಮತ್ತು ನಿಯಮಗಳನ್ನು ರೂಪಿಸಲಾಗಿದೆ.

ಜನರಲ್ಲಿ ಇಷ್ಟೊಂದು ಉತ್ಸಾಹ ಏಕೆ?

ಮೊದಲ ಜಿಟಿಎ ಗೇಮ್ 1997ರ ನವೆಂಬರ್​ನಲ್ಲಿ ಬಿಡುಗಡೆಯಾಯಿತು. ಆಗ ಈ ಗೇಮ್ 2ಡಿ ಕಾರ್ಟೂನ್ ಶೈಲಿಯಲ್ಲಿತ್ತು. ಇದಾದ ನಂತರ 2001ರಲ್ಲಿ ಜಿಟಿಎ 3 ಬಿಡುಗಡೆಯಾಯಿತು, ಇದರಲ್ಲಿ ಮೊದಲ ಬಾರಿಗೆ ಗೇಮ್ ಅನ್ನು 3ಡಿಯಲ್ಲಿ ಸಿದ್ಧಪಡಿಸಲಾಯಿತು. ನಂತರ 2002ರಲ್ಲಿ ಜಿಟಿಎ ವೈಸ್ ಸಿಟಿ ಮತ್ತು 2004ರಲ್ಲಿ ಜಿಟಿಎ ಸ್ಯಾನ್ ಆಂಡ್ರಿಯಾಸ್ ಬಂದವು, ಇವು ಪ್ರಪಂಚದಾದ್ಯಂತದ ಅನೇಕ ಸೈಬರ್ ಕೆಫೆಗಳಲ್ಲಿ ಭಾರಿ ಸದ್ದು ಮಾಡಿದವು. 2013ರಲ್ಲಿ ಜಿಟಿಎ 5 ಬಿಡುಗಡೆಯಾಯಿತು. 13 ವರ್ಷಗಳ ನಂತರ ರಾಕ್​ಸ್ಟಾರ್ ಗೇಮ್ಸ್ ಕಂಪನಿಯು ಜಿಟಿಎ 6 ಅನ್ನು ನ.19ರಂದು ಬಿಡುಗಡೆ ಮಾಡಿದೆ. ಜನರು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. 2023ರ ಡಿಸೆಂಬರ್​ನಲ್ಲಿ ಜಿಟಿಎ 6ರ ಮೊದಲ ಟ್ರೇಲರ್ ಬಿಡುಗಡೆಯಾದಾಗ, 24 ಗಂಟೆಗಳ ಒಳಗೆ ಯೂಟ್ಯೂಬ್​ನಲ್ಲಿ 9 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು ಎಂಬುದರಿಂದಲೇ ಇದರ ಕ್ರೇಜ್ ಎಷ್ಟಿದೆ ಎಂದು ಊಹಿಸಬಹುದು. ಇದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ನಾನ್-ಮ್ಯೂಸಿಕ್ ವಿಡಿಯೋ ಎಂಬ ಗಿನ್ನೆಸ್ ವಿಶ್ವದಾಖಲೆಯನ್ನೂ ನಿರ್ವಿುಸಿತು.

ಈ ಕ್ರೇಜ್​ಗೆ ದೊಡ್ಡ ಕಾರಣವೆಂದರೆ, ರಾಕ್​ಸ್ಟಾರ್ ಗೇಮ್ಸ್​ನ ಗುಣಮಟ್ಟ, ಉತ್ತಮ ಟ್ರಾ್ಯಕ್ ರೆಕಾರ್ಡ್, ಆಧುನಿಕ ತಂತ್ರಜ್ಞಾನ ಮತ್ತು ಹಳೆಯ ನೆನಪುಗಳು. ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಜಿಟಿಎ ಕೇವಲ ಒಂದು ಗೇಮ್ ಅಲ್ಲ, ಬದಲಾಗಿ ಬಾಲ್ಯ ಮತ್ತು ಯೌವನದ ನೆನಪುಗಳ ಒಂದು ಭಾಗವಾಗಿದೆ. 2013ರ ಜಿಟಿಎ 5 ಅನ್ನು ಶಾಲೆ ಅಥವಾ ಕಾಲೇಜು ದಿನಗಳಲ್ಲಿ ಆಡಿದ್ದವರು ಈಗ ಕೆಲಸ ಅಥವಾ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಅವರಿಗೆ ಜಿಟಿಎ 6 ಆಡುವುದು ಒಂದು ಭಾವನಾತ್ಮಕ ಮತ್ತು ರೋಮಾಂಚಕಾರಿ ಅನುಭವವಾಗಿದೆ.

ಇದರೊಂದಿಗೆ, ರಾಕ್​ಸ್ಟಾರ್ ಗೇಮ್ಸ್ ತನ್ನ ಪ್ರತಿ ಹೊಸ ಗೇಮ್ೊಂದಿಗೆ ಇಡೀ ಗೇಮಿಂಗ್ ಉದ್ಯಮಕ್ಕೆ ಹೊಸ ಮಾನದಂಡವನ್ನು ಸೃಷ್ಟಿಸುತ್ತದೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. 2018ರಲ್ಲಿ ಬಿಡುಗಡೆಯಾದ ಅದರ ‘ರೆಡ್ ಡೆಡ್ ರಿಡೆಂಪ್ಶನ್ 2’ ಗೇಮ್ ಸೂಕ್ಷ್ಮ ವಿವರಗಳನ್ನು ಕಂಡು ಜನರು ಇಂದಿಗೂ ಆಶ್ಚರ್ಯಪಡುತ್ತಾರೆ. ಹೀಗಾಗಿ, ಜಿಟಿಎ 6 ಕೇವಲ ಮತ್ತೊಂದು ಸೀಕ್ವೆಲ್ ಆಗಿರದೆ, ಗೇಮಿಂಗ್ ಜಗತ್ತಿನ ಹೊಸ ಮೈಲಿಗಲ್ಲಾಗಲಿದೆ ಎಂಬ ನಂಬಿಕೆ ಜಗತ್ತಿಗಿತ್ತು.

ಬೆಂಗಳೂರಿನ ಪಾತ್ರ

ಈ ಬೃಹತ್ ಗೇಮ್ ನಿರ್ವಣದಲ್ಲಿ ಬೆಂಗಳೂರಿನ ಮಹತ್ವದ ಪಾತ್ರವಿದೆ. ರಾಕ್​ಸ್ಟಾರ್ ಇಂಡಿಯಾದ ಬೆಂಗಳೂರು ಕಚೇರಿಯ 1,615 ಡೆವಲಪರ್​ಗಳು ಜಿಟಿಎ 6 ಅಭಿವೃದ್ಧಿಪಡಿಸುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೆ ‘ರೆಡ್ ಡೆಡ್ ರಿಡೆಂಪ್ಯನ್ 2 ಗೇಮ್ಲ್ಲೂ ಈ ತಂಡ ಕೆಲಸ ಮಾಡಿತ್ತು.

ಮೋದಿ ಪೋಸ್ಟ್

ಈ ಗೇಮ್ ಬಿಡುಗಡೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, 2013ರ ಬಳಿಕ ಗೇಮ್ ಅಪ್​ಗ್ರೇಡ್ ವರ್ಷನ್​ನಂತೆ ದೇಶವೂ ಅಭಿವೃದ್ಧಿಯಲ್ಲಿ ಅಪ್​ಗ್ರೇಡ್ ಆಗಿದೆ ಎನ್ನುವ ಪೋಸ್ಟರ್​ಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಷನ್​ನಲ್ಲಿ ಭಾರತ ಸಂಪೂರ್ಣವಾಗಿ ಹೊಸ ಆಟ ಆಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ತಯಾರಿಸಲು ಎಷ್ಟು ಹಣ ಖರ್ಚಾಗಿದೆ?

ರಾಕ್​ಸ್ಟಾರ್ ಗೇಮ್ಸ್ ಕಂಪನಿ ಇದರ ಅಧಿಕೃತ ಬಜೆಟ್ ಅನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಗೇಮಿಂಗ್ ತಜ್ಞರು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಜಿಟಿಎ 6 ತಯಾರಿಸಲು 1ರಿಂದ 1.5 ಬಿಲಿಯನ್ ಡಾಲರ್, ಅಂದರೆ 9,300ರಿಂದ 14,000 ಕೋಟಿ ರೂಪಾಯಿ ಖರ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟೇ ವೆಚ್ಚದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನಿರ್ವಣವಾಗಿದೆ. ಕಳೆದ 10 ವರ್ಷಗಳಿಂದ ಈ ಗೇಮ್ಾಗಿ ಪ್ರಪಂಚದ 12 ವಿವಿಧ ಸ್ಟುಡಿಯೋಗಳಲ್ಲಿ 4,700ಕ್ಕೂ ಹೆಚ್ಚು ಡೆವಲಪರ್​ಗಳು, ಪೋ›ಗ್ರಾಮರ್​ಗಳು, ಕಲಾವಿದರು ಮತ್ತು ಇಂಜಿನಿಯರ್​ಗಳು ಕೆಲಸ ಮಾಡುತ್ತಿದ್ದರು. ಹೊಸ ಗೇಮ್ ಇಂಜಿನ್ ತಯಾರಿಕೆ, ಗ್ರಾಫಿಕ್ಸ್, ಮೋಷನ್ ಕ್ಯಾಪ್ಚರ್, ಮ್ಯೂಸಿಕ್ ಲೈಸೆನ್ಸಿಂಗ್ ಮತ್ತು ಜಾಗತಿಕ ಮಾರ್ಕೆಟಿಂಗ್​ಗಾಗಿ ಭಾರಿ ಪ್ರಮಾಣದ ಹಣವನ್ನು ವ್ಯಯಿಸಲಾಗಿದೆ.

ರಾಕ್​ಸ್ಟಾರ್ ಗೇಮ್ಸ್ ಭಾರತದಲ್ಲಿ ಜಿಟಿಎ 6ರ ಸ್ಟಾ್ಯಂಡರ್ಡ್ ಎಡಿಷನ್ ಬೆಲೆಯನ್ನು 5,999 ರೂಪಾಯಿ ಮತ್ತು ಅಲ್ಟಿಮೇಟ್ ಎಡಿಷನ್ ಬೆಲೆಯನ್ನು 7,499 ರೂಪಾಯಿ ನಿಗದಿಪಡಿಸಿದೆ. ಈ ಬೆಲೆಯು ಪ್ಲೇಸ್ಟೇಷನ್ 5 ಮತ್ತು ಗಿಚಿಟ್ಡ ಖಛ್ಟಿಜಿಛಿಠ ಗಿ/ಖ ಎರಡೂ ಪ್ಲಾಟ್​ಫಾಮರ್್​ಗಳಿಗೆ ಅನ್ವಯಿಸುತ್ತದೆ. ಆದಾಗ್ಯೂ, ಈಗಾಗಲೇ ಗೇಮಿಂಗ್ ಕನ್ಸೋಲ್ ಹೊಂದಿರದವರು ಕನ್ಸೋಲ್ ಖರೀದಿಸಲು ಪ್ರತ್ಯೇಕವಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಈ ಗೇಮ್ ಹಳೆಯ ಕಖ4 ಅಥವಾ ಲ್ಯಾಪ್​ಟಾಪ್-ಪಿಸಿಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ, 44,990 ರೂಪಾಯಿ ಬೆಲೆಯ ಪ್ಲೇಸ್ಟೇಷನ್ 5 ಸ್ಲಿಮ್ ಮತ್ತು 5,999 ರೂಪಾಯಿ ಬೆಲೆಯ ಗೇಮ್ ಖರೀದಿಸಿದರೆ, ಒಟ್ಟು ಖರ್ಚು 50,989 ರೂಪಾಯಿಗಳವರೆಗೆ ತಲುಪುತ್ತದೆ.

ಗಳಿಕೆಯಲ್ಲಿ ಹೊಸ ದಾಖಲೆ

ವಿಡಿಯೋ ಗೇಮ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದ್ದು, ಬಹುನಿರೀಕ್ಷಿತ ಗ್ರಾ್ಯಂಡ್ ಥೆಫ್ಟ್ ಆಟೋ 6 (ಜಿಟಿಎ 6) ಬಿಡುಗಡೆಯಾದ 24 ಗಂಟೆಗಳೊಳಗೆ 2.36 ಬಿಲಿಯನ್ ಡಾಲರ್ (ಸುಮಾರು -ಠಿ;21,952 ಕೋಟಿ) ಆದಾಯ ಗಳಿಸುವ ಮೂಲಕ ಮನರಂಜನಾ ಇತಿಹಾಸದಲ್ಲೇ ಅತಿದೊಡ್ಡ ಓಪನಿಂಗ್ ಪಡೆದುಕೊಂಡಿದೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸೆನ್ಸಾರ್ ಟವರ್ ವರದಿಯ ಪ್ರಕಾರ, ಗುರುವಾರ ಮಧ್ಯರಾತ್ರಿ ಬಿಡುಗಡೆಯಾದ ಈ ಗೇಮ್ 2.45 ಕೋಟಿ (24.58 ಮಿಲಿಯನ್) ಪ್ರತಿಗಳು ಈಗಾಗಲೇ ಮಾರಾಟವಾಗಿವೆ. ಇದರಲ್ಲಿ ಶೇ.75ರಷ್ಟು ಮಾರಾಟವು ಪ್ಲೇಸ್ಟೇಷನ್ ಪ್ಲಾಟ್​ಫಾಮರ್್​ನಲ್ಲೇ ನಡೆದಿರುವುದು ವಿಶೇಷ. ಅಲ್ಲದೆ, ಬಿಡುಗಡೆಯ ದಿನದವರೆಗಿನ ಪ್ರಿ-ಆರ್ಡರ್​ಗಳಿಂದಲೇ 2 ಬಿಲಿಯನ್ ಡಾಲರ್​ಗೂ ಅಧಿಕ ಆದಾಯ ಗಳಿಸುವ ಮೂಲಕ 2026ರ ಅತಿ ಹೆಚ್ಚು ಮಾರಾಟವಾದ ಗೇಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 13 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಜಿಟಿಎ-5 ಒಂದು ಬಿಲಿಯನ್ ಡಾಲರ್ ಗಡಿ ದಾಟಲು ಮೂರು ದಿನಗಳನ್ನು ತೆಗೆದುಕೊಂಡಿತ್ತು. ಹಾಲಿವುಡ್​ನ ಬ್ಲಾಕ್​ಬಸ್ಟರ್ ಸಿನಿಮಾ ‘ಅವೆಂಜರ್ಸ್: ಎಂಡ್​ಗೇಮ್ 1 ಬಿಲಿಯನ್ ಡಾಲರ್ ಗಳಿಸಲು ಐದು ದಿನ ತೆಗೆದುಕೊಂಡಿತ್ತು. ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ‘ಸ್ಪೈಡರ್-ಮ್ಯಾನ್: ಬ್ರಾ್ಯಂಡ್ ನ್ಯೂ ಡೇ’ ತನ್ನ ಸಂಪೂರ್ಣ ಥಿಯೇಟರ್ ಪ್ರದರ್ಶನದಲ್ಲಿ 2.5 ಬಿಲಿಯನ್ ಡಾಲರ್ ಗಳಿಸಿತ್ತು, ಆದರೆ ಜಿಟಿಎ 6 ಒಂದೇ ದಿನದಲ್ಲಿ ಆ ಮೊತ್ತದ ಸನಿಹಕ್ಕೆ ಬಂದು ನಿಂತಿದೆ. ಅಲ್ಲದೆ, ಈ ವರ್ಷದ ಅಂತ್ಯದೊಳಗೆ ಜಿಟಿಎ 6 ಜಾಗತಿಕವಾಗಿ 3 ಬಿಲಿಯನ್ ಡಾಲರ್​ಗೂ ಹೆಚ್ಚು ವಹಿವಾಟು ನಡೆಸಲಿದೆ ಎಂದು ‘ನಿಕೊ ಪಾಟರ್°ರ್ಸ್ ಸಂಸ್ಥೆ ಭವಿಷ್ಯ ನುಡಿದಿದೆ.