Bihar Election | ದೊಡ್ಡ ಅಲೆಯಲ್ಲೂ ಗೆಲುವು ದಕ್ಕಿಸಿಕೊಳ್ಳದ ಡಜನ್​ ಬಿಜೆಪಿ ಅಭ್ಯರ್ಥಿಗಳು ಇವರೇ.. ಸೋಲಿನ ಅಂತರವೆಷ್ಟು ಗೊತ್ತಾ..?

Bihar Election | ಬಿಜೆಪಿ ಚಿಹ್ನೆಯ ಸಂಗ್ರಹ ಚಿತ್ರ
Bihar Election | ಬಿಜೆಪಿ ಚಿಹ್ನೆಯ ಸಂಗ್ರಹ ಚಿತ್ರ
Published on
ಪಟನಾ: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಪ್ರಸ್ತುತ ಚುನಾವಣೆಯಲ್ಲಿ ಪಕ್ಷದ ಸ್ಟ್ರೈಕ್ ರೇಟ್ 88% ರಷ್ಟಿತ್ತು. ಸ್ಪರ್ಧಿಸಿದ್ದ 101 ಜನ ಅಭ್ಯರ್ಥಿಗಳಲ್ಲಿ 12 ಜನರು ಸೋಲನುಭವಿಸಿದ್ದಾರೆ.
ಸೋತಿರುವ ಒಟ್ಟು 12 ಸ್ಥಾನಗಳಲ್ಲಿ ನಾಲ್ಕರಲ್ಲಿ ಬಿಜೆಪಿಯ ಸೋಲಿನ ಅಂತರ ಕೇವಲ ಸಾವಿರ ಮತಗಳ ಒಳಗಿದೆ. ರಾಜ್ಯದಲ್ಲಿ ಈ ಮಟ್ಟದ ದೊಡ್ಡ ಅಲೆಯ ನಡುವೆಯೂ ಗೆಲುವಿನ ದಡ ಸೇರಲಾಗದ ಆ ಒಂದು ಡಜನ್ ಹುರಿಯಾಳುಗಳು ಯಾರು..?  ಇಲ್ಲಿದೆ ಮಾಹಿತಿ.
ತೀವ್ರ ಹಣಾಹಣಿ ಏರ್ಪಟ್ಟಿದ್ದ ರಾಮಗಢ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಕುಮಾರ್ ಸಿಂಗ್ ಬಿಎಸ್‌ಪಿ ವಿರುದ್ಧ ಕೇವಲ 30 ಮತಗಳಿಂದ ಸೋತರೆ, ಢಾಕಾದಲ್ಲಿ ಮತ್ತು ಫೋರ್ಬ್ಸ್‌ಗಂಜ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳು ಕ್ರಮವಾಗಿ ಆರ್‌ಜೆಡಿ ವಿರುದ್ಧ 178 ಮತಗಳು ಮತ್ತು ಕಾಂಗ್ರೆಸ್‌ ವಿರುದ್ಧ 221 ಮತಗಳಿಂದ ಸೋಲನುಭವಿಸಿದ್ದಾರೆ.
ಬಿಜೆಪಿಯ ಡಜನ್​ ಸೋಲುಗಳಲ್ಲಿ ನಾಲ್ಕು ಸೀಮಾಂಚಲ್‌ನಿಂದ ಭಾಗದಿಂದ ಬಂದಿದ್ದು, ಈ ಭಾಗದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿದ್ದು, ಹೀಗಾಗಿ ಕಾಂಗ್ರೆಸ್ ಮತ್ತು AIMIM ಇದರ ಲಾಭ ಪಡೆದುಕೊಂಡಿವೆ. ಮಿಥಿಲಾ-ಕೋಶಿ ಪ್ರದೇಶದಿಂದ ಇಬ್ಬರು ಸೋತರೆ, ಉಳಿದ ಆರು ಸೋಲುಗಳು ಸರನ್, ಚಂಪಾರಣ್, ಮಗಧ್ ಮತ್ತು ತಿರ್ಹತ್ ವಿಭಾಗದಿಂದ ಬಂದಿವೆ.
2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಇತರ ಮಿತ್ರಪಕ್ಷಗಳು ಸಹ ಉತ್ತಮ ಸ್ಟ್ರೈಕ್ ರೇಟ್​ನೊಂದಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿವೆ. ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) 101 ರಲ್ಲಿ 85 ಸ್ಥಾನಗಳನ್ನು ಗೆದ್ದು ಶೇ 88% ಸ್ಟ್ರೈಕ್ ರೇಟ್​ ಹೊಂದಿದ್ದು, ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ(ಆರ್‌ವಿ) 29 ರಲ್ಲಿ 19 ಸ್ಥಾನಗಳನ್ನು ಗೆದ್ದು ಶೇ 83 ಸ್ಟ್ರೈಕ್ ರೇಟ್​ ಹೊಂದಿದೆ. ಇತ್ತ ಜಿತನ್ ರಾಮ್ ಮಾಂಝಿ ನೇತೃತ್ವದ ಎಚ್‌ಎಎಂ(ಎಸ್ ) ಆರು ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆದ್ದು ಶೇ 83 ರಷ್ಟು ಸ್ಟ್ರೈಕ್ ರೇಟ್​ ಹೊಂದಿದೆ. 
ಆರ್‌ಜೆಡಿಯನ್ನು ಹಿಂದಿಕ್ಕಿರುವ ಬಿಜೆಪಿ 89 ಕ್ಷೇತ್ರವನ್ನು ತನ್ನ ತೆಕ್ಕಗೆ ತೆಗೆದುಕೊಂಡು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 12 ಸ್ಥಾನಗಳಲ್ಲಿ ಸೋಲನುಭವಿಸಿದೆ. ರಾಜ್ಯಾದ್ಯಂತ ಎನ್‌ಡಿಎ 202 ಸ್ಥಾನಗಳಲ್ಲಿ ಜಯಶೀಲವಾದರೂ, ಆರ್‌ಜೆಡಿ ಭದ್ರಕೋಟೆಗಳು ಮತ್ತು ಯಾದವ್ ಅಥವಾ ಮುಸ್ಲಿಂ ಪ್ರಭಾವವಿರುವ ಪ್ರದೇಶಗಳಲ್ಲಿ ಗೆಲುವಿಗಾಗಿ ತುಂಬಾ ಶ್ರಮಪಟ್ಟರು ಅದು ವ್ಯರ್ಥವಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net