ಪಾಯಲ್ ಅವರ ಈ ಸಾಹಸವನ್ನು ಕಂಡು ಭಾವುಕರಾದ ಉದ್ಯಮಿ ಆನಂದ್ ಮಹೀಂದ್ರಾ ಅವರು ಎಕ್ಸ್ (ಟ್ವಿಟರ್) ನಲ್ಲಿ ಸುದೀರ್ಘ ಟಿಪ್ಪಣಿ ಹಂಚಿಕೊಂಡಿದ್ದಾರೆ. ಪಾಯಲ್ ನಾಗ್, ಒಡಿಶಾದ ದಿನಗೂಲಿ ಕಾರ್ಮಿಕನ ಮಗಳು. ಎಂಟನೇ ವಯಸ್ಸಿನಲ್ಲಿ ಎಲ್ಲವನ್ನೂ ಕಳೆದುಕೊಂಡರೂ, ಇಂದು ಬಿಲ್ಲುಗಾರಿಕೆಯಲ್ಲಿ ವಿಶ್ವವನ್ನೇ ಗೆದ್ದಿದ್ದಾಳೆ. ಇಂತಹ ಚಾಂಪಿಯನ್ಗಳು ನನ್ನ ಸೋಮವಾರದ ಪ್ರೇರಣೆ ಮಾತ್ರವಲ್ಲ, ಅವರು ಪ್ರತಿ ದಿನದ ಪ್ರೇರಣೆಯ ಮೂಲ ಎಂದು ಬರೆದುಕೊಂಡಿದ್ದಾರೆ.