ರಕ್ಷಕರೇನೇ ಭಕ್ಷಕನಾದ್ರೆ ಗತಿಯೇನು? ಉದ್ಯಮಿ ಮನೆಯಲ್ಲಿ ಐವರು ಪೊಲೀಸರಿಂದ ಚಿನ್ನಾಭರಣ ಲೂಟಿ; ವಿಡಿಯೋ ವೈರಲ್​! Police Theft

ಇಂದೋರ್‌ನಲ್ಲಿ ಪೊಲೀಸರಿಂದಲೇ ದರೋಡೆ
ಇಂದೋರ್‌ನಲ್ಲಿ ಪೊಲೀಸರಿಂದಲೇ ದರೋಡೆ
Published on

ಪ್ರಮುಖ ಮುಖ್ಯಾಂಶಗಳು

  • ಇಂದೋರ್‌ನಲ್ಲಿ ಪೊಲೀಸರಿಂದಲೇ ದರೋಡೆ
  • ಉದ್ಯಮಿಯ ಮನೆಯಲ್ಲಿ ಚಿನ್ನಾಭರಣ ಕದ್ದ ಖಾಕಿ ಪಡೆ
  • ವಿಚಾರಣೆ ಹೆಸರಲ್ಲಿ ಮನೆ ಬಾಗಿಲು ಮುರಿದ ಪೊಲೀಸರು
ಇಂದೋರ್: ಪೊಲೀಸರೆಂದರೆ ಭಯ ಅಲ್ಲ ಭರವಸೆ, ಅವರು ನಮ್ಮಂತೆಯೆ ಮನುಷ್ಯರೆ, ಅವರು ಇರುವುದು ಸಾರ್ವಜನಿಕರ ರಕ್ಷಣೆಗೆ ಎಂದು ಬಹತೇಕ ಎಲ್ಲಾ ರಾಜ್ಯದ ಪೊಲೀಸರ ಮತ್ತು ಗೃಹ ಮಂತ್ರಿಗಳ ಬಾಯಿಂದ ಕೇಳಿರುತ್ತೇವೆ.
ಆದರೆ ಕಳ್ಳರನ್ನು ಹಿಡಿಯಬೇಕಾದ ಈ ಪೊಲೀಸರೆ ಖುದ್ದು ಕಳ್ಳತನ(Police Theft)ಕ್ಕೆ ಇಳಿದರೆ ಜನ ಏನು ಮಾಡಬೇಕು? ಈಗ ಸದ್ಯ ಮಧ್ಯ ಪ್ರದೇಶದ ಇಂದೋರ್​ನಲ್ಲಿ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಪೊಲೀಸ್​ ಇಲಾಖೆ ತಲೆ ತಗ್ಗಿಸುವಂತೆ ಮಾಡಿದೆ.

ಮನೆಯ ಬಾಗಿಲು ಮುರಿದು ಚಿನ್ನಾಭರಣ ಲೂಟಿ!

ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಐದು ಜನ ಪೊಲೀಸರು, ಉದ್ಯಮಿಯೊಬ್ಬನ ಮನೆಗೆ ಕನ್ನ ಹಾಕಿದ್ದು, ಸರಿಸುಮಾರು 35 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆಂದು ತಿಳಿದು ಬಂದಿದೆ.
ಕಳ್ಳತನಕ್ಕೆ ತೊಡಗಿದ್ದ ಈ ಖಾಕಿಗಲ ಕೈ ಚಳಕವು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮಾರಾನಲ್ಲಿ ಸೆರೆಯಾಗಿದೆ. ಕಳ್ಳತನದಲ್ಲಿ ಭಾಗಿಯಾಗಿದ್ದ ಹೆಚ್ಚುವರಿ ಪೊಲೀಸ್​​ ಆಯುಕ್ತ ಅಮರೇಂದ್ರ ಸಿಂಗ್​, ಸಬ್​-ಇನ್ಸ್​ಪೆಕ್ಟರ್​ ಸಂಜಯ್​ ಬಿಷ್ಣೋಯ್​, ಹೆಡ್​ ಕಾನ್ಸ್​ಟೇಬಲ್​ಗಳಾದ ಪ್ರವೀಣ್​ ಬದೋರಿಯಾ, ದಿನೇಶ್​​ ಜಾಟ್​, ರವೀಂದ್ರ ಖುಶ್ವಾ ಎಂದು ಗುರುತಿಸಲಾಗಿದೆ.

ದಾಳಿಯ ನೆಪದಲ್ಲಿ ಕಳ್ಳತನ

ಈ ಮನೆಯು ಚಿನ್ನದ ವ್ಯಾಪಾರಿ ಗೌರವ್​ ಜೈನ್​ ಎಂಬುವವರಿಗೆ ಸೇರಿದ್ದಾಗಿದೆ. ಅವರ ಪ್ರಕಾರ ಪೊಲೀಸರು ಯಾವುದೇ ವಾರೆಂಟ್​ ಇಲ್ಲದೆ ಮನೆಯನ್ನು ಕಳ್ಳರಂತೆ ಪ್ರವೇಶಿಸಿದ್ದಾರೆ. ಅವರ ಬಳಿಯಿದ್ದ ಮಾಸ್ಟರ್​ ಕೀಯಿಂದ ಬೀಗವನ್ನು ಮುರಿದಿದ್ದು, ವಿಚಾರಣೆಯ ನಡೆಸಿ ಹೋದಾಗ ಮನೆಯಲಿದ್ದ 36 ಲಕ್ಷ ಮೌಲ್ಯದ ಚಿನ್ನಾಭರಣ ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ.

ಪೊಲೀಸರಿಂದ ಪೊಲೀಸರ ಮೇಲೆ ಕ್ರಮ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಬ್​-ಇನ್ಸ್​ಪೆಕ್ಟರ್​ನನ್ನು ಬೆರೆಕಡೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಆದರೆ ಪೊಲೀಸರು ಕಳ್ಳತನ ಮಾಡಿದ್ದಾರೆ ಅಥವಾ ಇಲ್ಲವೇ ಎಂದು ಇನ್ನೂ ಇಲಾಖೆ ಸ್ಪಷ್ಟ ಪಡಿಸಿಲ್ಲ, (ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net