ಇದು ಹಿಂದೂ ರಾಷ್ಟ್ರ: ಲೆನ್ಸ್‌ಕಾರ್ಟ್ ಮ್ಯಾನೇಜರ್‌ಗೆ ಬಿಜೆಪಿ ನಾಯಕಿ ತರಾಟೆ; ಸಿಬ್ಬಂದಿಗಳಿಗೆ ತಿಲಕವಿಟ್ಟ ನಾಜಿಯಾ ಖಾನ್! Nazia Khan in Lenskart

ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದ ಮಳಿಗೆಗೆ ನಾಜಿಯಾ ಖಾನ್​ ಎಂಟ್ರಿ
ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದ ಮಳಿಗೆಗೆ ನಾಜಿಯಾ ಖಾನ್​ ಎಂಟ್ರಿ
Published on

ಪ್ರಮುಖ ಮುಖ್ಯಾಂಶಗಳು

  • ಕುಂಕುಮ, ಬಿಂದಿ ಇಡಲು ಲೆನ್ಸ್​ಕಾರ್ಟ್​ನಲ್ಲಿ ವಿರೋಧ
  • ಹಿಜಾಬ್​, ನಕಾಬ್​ ಧರಿಸಲು ಅವಕಾಶ
  • ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದ ಮಳಿಗೆಗೆ ನಾಜಿಯಾ ಖಾನ್​ ಎಂಟ್ರಿ
  • ಮಳಿಗೆ ಮ್ಯಾನೇಜರ್​ ಹಣೆಗೆ ತಿಲಕವಿಟ್ಟ ಬಿಜೆಪಿ ನಾಯಕಿ
ಮುಂಬೈ: ನಾಸಿಕ್​ನ ಟಾಟಾಗಳ ಒಡೆತನದ ಟಿಸಿಎಸ್​ ಕಂಪನಿಯಲ್ಲಿ ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ನಂತರ, ಪಿಯೂಶ್​ ಬನ್ಸಲ್​​ ಮಾಲಿಕತ್ವದ ಲೆನ್ಸ್​ಕಾರ್ಟ್​ನಲ್ಲಿ ಕುಂಕುಮ, ಕಡಗ, ದಾರಗಳಿಗೆ ನಿಷೇಧ ಹೇರಿ ಹಿಜಾಬ್​ಗೆ ಅವಕಾಶ ನೀಡಿರುವ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಈ ಕ್ರಮವನ್ನು ವಿರೋಧಿಸಿ ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯ ನಾಯಕಿ ನಾಜಿಯಾ ಇಲಾಹಿ ಖಾನ್​ (Nazia Khan in Lenskart) ಮುಂಬೈನಲ್ಲಿರುವ ಲೆನ್ಸ್​ಕಾರ್ಟ್ ಮಳಿಗೆಗಳಿಗೆ ತೆರಳಿ, ಅಲ್ಲಿಯ ಸಿಬ್ಬಂದಿಗಳಿಗೆ ಕುಂಕುಮ ಮತ್ತು ರಕ್ಷಾದಾರ (ಕಲುವಾ) ವನ್ನು ಕಟ್ಟಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದು ಹಿಂದೂ ರಾಷ್ಟ್ರ; ಹಿಂದೂಗಳು ಹೇಳಿದಂತೆ ನಡೆಯುತ್ತದೆ

ಲೆನ್ಸ್​ಕಾರ್ಟ್​ನ ಈ ಧೋರಣೆಯನ್ನು ವಿರೋಧಿಸಿದ ನಾಜಿಯಾ, ಮಳಿಗೆಯ ಮ್ಯಾನೇಜರ್​ನನ್ನು ಕರೆದು, ನಿಮ್ಮಲ್ಲಿ ಬಿಂದಿ, ತಿಲಕ, ಮತ್ತು ರಕ್ಷಾದಾರ (ಕಲುವಾ) ವನ್ನು ಕಟ್ಟದಂತೆ ಏಕೆ ನಿರ್ಭಂದ ಹೇರಿದ್ದಿರಿ. ಇದು ಹಿಂದೂಗಳ ದೇಶ 1947 ರಲ್ಲಿ ಪಾಕಿಸ್ತಾನವನ್ನು ಮುಸ್ಲಿಮರಿಗೆ ಕೊಟ್ಟಾಗಿದೆ, ಈ ದೇಶದಲ್ಲಿ ಶರಿಯಾ ಕಾನೂನನ್ನು ಜಾರಿ ಮಾಡುವುದು ನಿಮ್ಮ ಉದ್ದೇಶವೆ? ಎಂದು ಕೆಂಡ ಕಾರಿದ್ದಾರೆ. ನಂತರ ಆ ಮ್ಯಾನೇಜರ್​ನ ಮತ್ತು ಇತರ ಸಿಬ್ಬಂದಿಗಳ ಹಣೆಗೆ ತಿಲಕ ಮತ್ತು ಬಿಂದಿಯನ್ನು ನಾಜಿಯಾ ಹಚ್ಚಿದ್ದಾರೆ.
ಏನಿದು ಲೆನ್ಸ್​ಕಾರ್ಟ್ ವಿವಾದ?
ಪಿಯೂಶ್​ ಬನ್ಸಲ್​ ಮಾಲಿಕತ್ವದ ಲೆನ್ಸ್​ಕಾರ್ಟ್ ಇದೊಂದು ಕನ್ನಡಕ ತಯಾರಕ, ಹಾಗೂ ಮಾರಾಟಗಾರ ಕಂಪನಿಯಾಗಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ತಿಲಕ, ಬಿಂದಿ ಮತ್ತು ಕಲುವಾ, ಅಷ್ಟೇ ಅಲ್ಲದೆ, ಮದುವೆಯಾದ ಯುವತಿಯರಿಗೆ ಮಂಗಳಸೂತ್ರವನ್ನು ಧರಿಸದಂತೆ ನಿಷೇಧ ಹೇರಲಾಗಿತ್ತು ಎಂದು ತಿಳಿದು ಬಂದಿದೆ.
ಇದು ಹಿಂದೂ ಧರ್ಮವನ್ನು ಒಡೆಯುವ ಮತ್ತು ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುವುದಾಗಿದೆ ಎನ್ನುವುದು ಬಿಜೆಪಿಯ ಮತ್ತು ಸನಾತನ ಸಂಘಟನೆಗಳ ವಾದವಾಗಿದೆ. ಆದರೆ ಈ ಕಂಪನಿಯಲ್ಲಿ ಹಿಜಾಬ್​, ನಕಾಬ್​ ಹಾಗೂ ಪಗಡಿ ಕಟ್ಟಲು ಅವಕಾಶ ನೀಡಿರುವುದು ಇನ್ನಷ್ಟು ಕೋಪಕ್ಕೆ ಕಾರಣವಾಗಿದೆ.

ಸ್ಪಷ್ಟಣೆ ನೀಡಿರುವ ಪಿಯೂಶ್​ ಬನ್ಸಲ್​!

ಸೋಷಿಯಲ್​ ಮೀಡಿಯಾನಲ್ಲಿ ಲೆನ್ಸ್​ಕಾರ್ಟ್ ಕಂಪನಿಯ ನಿಯಮಾವಳಿ ಎಂದು ಹರಿದಾಡುತ್ತಿರುವ ನೋಟಿಸ್​ ಇದು, ನಮ್ಮ ಹಳೆಯ ನಿಯಮಗಳಾಗಿದ್ದವು. ಇದನ್ನು ನಾವು ಬದಲಿಸಿ ವರ್ಷಗಳೇ ಕಳೆದಿದೆ. ನಾವು ಹಿಂದೂ ಧರ್ಮಕ್ಕೆ ಅಪಚಾರ ಮಾಡುವ ಯಾವುದೇ ಉದ್ದೇಶ ಮತ್ತು ಕೆಲಸವನ್ನು ನಾವು ಮಾಡಿಲ್ಲ ಎಂದು ಕಂಪನಿ ಸಿಇಓ ಪಿಯೂಶ್​ ಬನ್ಸಲ್​ ಸ್ಪಷ್ಟಣೆ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net