

Nana Patekar's Final hours: ಇಂದು (ಅಕ್ಟೋಬರ್ 8 ಗುರುವಾರ) ಮುಂಜಾನೆ ಸ್ನೇಹಿತನಿಗೆ ಕಳುಹಿಸಿದ ಸಂದೇಶದೊಂದಿಗೆ ಹಿರಿಯ ನಟ ನಾನಾ ಪಾಟೇಕರ್ ಅವರ ಕೊನೆಯ ಗಂಟೆಗಳು ಪ್ರಾರಂಭವಾದವು. ಪಾಟೇಕರ್ ತಮಗೆ ಆರೋಗ್ಯ ಸರಿ ಇಲ್ಲ ಎಂದು ತಮ್ಮ ಸ್ನೇಹಿತರಿಗೆ ತಿಳಿಸಿದ್ದರು. ಅವರೆಲ್ಲಾ ಮನೆಗೆ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ತಲುಪಿದಾಗ, ಪಾಟೇಕರ್ ಬೆವರುತಿದ್ದು ಕ್ರಮೇಣ ಪ್ರಜ್ಞೆ ತಪ್ಪುತ್ತಿದ್ದರು ಎಂದು ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ್ ಸಲ್ಕರ್ ತಿಳಿಸಿದ್ದಾರೆ.
ನಾನಾ ಪಾಟೇಕರ್ ನಿಧನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಶೇಖರ್ ಸಲ್ಕರ್, ಸುಮಾರು 2:30ರ ಸುಮಾರಿಗೆ ಅವರು ತಮ್ಮ ಸ್ನೇಹಿತನಿಗೆ ತಮಗೆ ಆರೋಗ್ಯ ಸರಿಯಿಲ್ಲ ಎಂದು ಸಂದೇಶ ಕಳುಹಿಸಿದ್ದರು. ಆದರೆ ರಾತ್ರಿಯಾದ ಕಾರಣ ಅವರ ಸ್ನೇಹಿತ ಆ ಸಂದೇಶವನ್ನು ನೋಡಿರಲಿಲ್ಲ, ಹಾಗಾಗಿ ಅವರು ಕರೆ ಮಾಡಿದರು. ಅವರು ಸುಮಾರು 4 ಗಂಟೆಗೆ ಅವರ ಮನೆಗೆ ಹೋದರು. ಅಷ್ಟೊತ್ತಿಗೆ ಅವರಿಗೆ ಬೆವರುವುದು ಮುಂತಾದ ಲಕ್ಷಣಗಳಿದ್ದವು. ಅವರು ಅಗತ್ಯವಿರುವ ಎಲ್ಲ ಪ್ರಾಥಮಿಕ ಕೆಲಸಗಳನ್ನು ಮಾಡಿ ಅವರನ್ನು ಸ್ಥಳಾಂತರಿಸಿದರು, ಆದರೆ ಅವರು ನಿಧಾನವಾಗಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು ಎಂದು ವಿವರಿಸಿದರು.
ನಾನಾ ಪಾಟೇಕರ್ ಅವರ ನಿವಾಸಕ್ಕೆ ತಲುಪಿದ ಬಳಿಕ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಕೇರ್‌ಟೇಕರ್ ಅನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ತುರ್ತು ವೈದ್ಯಕೀಯ ತಂಡವು ಪಾಟೇಕರ್ ಅವರ ಮನೆಗೆ ತಲುಪಿತು. ಡಾ. ಸಲ್ಕರ್ ಅವರ ಪ್ರಕಾರ, ವೈದ್ಯಕೀಯ ಸಹಾಯ ತಲುಪುವಷ್ಟರಲ್ಲಿ ನಟರು ಸಂಪೂರ್ಣವಾಗಿ ಪ್ರತಿಕ್ರಿಯಿಸದ ಸ್ಥಿತಿಯಲ್ಲಿದ್ದರು, ತದನಂತರ ಸಿಪಿಆರ್ (CPR) ಆರಂಭಿಸಲಾಯಿತು. ಬೆಳಿಗ್ಗೆ 4:20 ರ ಸುಮಾರಿಗೆ ಪಾಟೇಕರ್ ಅವರನ್ನು ಗೋವಾದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಆಸ್ಪತ್ರೆಗೆ ಕರೆತಂದ ನಂತರ ವೈದ್ಯರು ಅವರನ್ನು ಬದುಕುಳಿಸುವ ಪ್ರಯತ್ನಗಳನ್ನು ಮುಂದುವರೆಸಿದರು.
ವೈದ್ಯರು ಸುಮಾರು 45 ನಿಮಿಷಗಳ ಕಾಲ ಕಾರ್ಡಿಯಾಕ್ ಮಸಾಜ್ ಮತ್ತು ಸಿಪಿಆರ್ ಮುಂದುವರೆಸಿರುವುದಾಗಿ ಡಾ. ಸಲ್ಕರ್ ಹೇಳಿದರು. ಎಷ್ಟೇ ಪ್ರಯತ್ನಿಸಿದರೂ ಪಾಟೇಕರ್ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಮತ್ತು ಬೆಳಿಗ್ಗೆ 5:20 ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಪಾಟೇಕರ್ ಅವರು ಮಣಿಪಾಲ್ ಆಸ್ಪತ್ರೆಯ ನೋಂದಾಯಿತ ರೋಗಿಯಾಗಿರಲಿಲ್ಲದ ಕಾರಣ, ಈ ಪ್ರಕರಣವನ್ನು ವೈದ್ಯಕೀಯ-ಕಾನೂನು ಪ್ರಕರಣವೆಂದು ಪರಿಗಣಿಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತದನಂತರ ಮರಣೋತ್ತರ ಪರೀಕ್ಷೆಗಾಗಿ ಅವರ ಮೃತದೇಹವನ್ನು ಗೋವಾ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು.
ಭಾರತೀಯ ಚಿತ್ರರಂಗದ ಅತ್ಯಂತ ಮೆಚ್ಚುಗೆ ಪಡೆದ ನಟರಲ್ಲಿ ಒಬ್ಬರಾದ ಪಾಟೇಕರ್, ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಪರಿಂದಾ, ಕ್ರಾಂತಿವೀರ್, ಅಗ್ನಿಸಾಕ್ಷಿ, ಅಬ್ ತಕ್ ಛಪ್ಪನ್, ವೆಲ್ಕಮ್ ಮತ್ತು ನಟ ಸಾಮ್ರಾಟ್ ಸೇರಿದಂತೆ ಹಲವು ಚಿತ್ರಗಳಲ್ಲಿನ ತಮ್ಮ ಅಭಿನಯಕ್ಕಾಗಿ ಅವರು ಹೆಸರುವಾಸಿಯಾಗಿದ್ದರು(ಏಜೆನ್ಸೀಸ್).