ರಾಹುಲ್​ ಗಾಂಧಿಗೆ ಮುತ್ತಿಟ್ಟ ವಿದ್ಯಾರ್ಥಿನಿ: ಕಾರ್ಯಕ್ರಮದ ವೇದಿಕೆಯಲ್ಲಿ ನಡೆದಿದ್ದೇನು; ವಿಡಿಯೋ ವೈರಲ್​! Student kisses Rahul Gandhi

ಸೆಲ್ಫಿ ಕ್ಲಿಕ್ಕಿಸಿಕೊಂಡು, ರಾಹುಲ್​ ಗಾಂಧಿಗೆ ಮುತ್ತಿಟ್ಟ ವಿದ್ಯಾರ್ಥಿನಿ
ಸೆಲ್ಫಿ ಕ್ಲಿಕ್ಕಿಸಿಕೊಂಡು, ರಾಹುಲ್​ ಗಾಂಧಿಗೆ ಮುತ್ತಿಟ್ಟ ವಿದ್ಯಾರ್ಥಿನಿ
Published on

ಪ್ರಮುಖ ಮುಖ್ಯಾಂಶಗಳು

  • ಪುಣೆಯಲ್ಲಿ ನಡೆದಿದ್ದ ಛಾತ್ರೋಂಕೆ ಗೂಂಜ್​ ಕಾರ್ಯಕ್ರಮ
  • ಸಭೆ ಬಳಿಕ ಸೆಲ್ಫಿ, ಆಟೋಗ್ರಾಫ್​ ಪಡೆಯಲು ಬಂದ ವಿದ್ಯಾರ್ಥಿಗಳು
  • ಸೆಲ್ಫಿ ಕ್ಲಿಕ್ಕಿಸಿಕೊಂಡು, ರಾಹುಲ್​ ಗಾಂಧಿಗೆ ಮುತ್ತಿಟ್ಟ ವಿದ್ಯಾರ್ಥಿನಿ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಪುಣೆ: ವಿಪಕ್ಷ ನಾಯಕ ರಾಹುಲ್​ ಗಾಂಧಿ, ಮಹಿಳೆಯರನ್ನು, ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಗುರಯಾಸಿಕೊಂಡು, ಪುಣೆಯಲ್ಲಿ ಛಾತ್ರೋಂಕೆ ಗೂಂಚ್​ (ವಿದ್ಯಾರ್ಥಿಗಳ ಕೂಗು) ಎಂಬ ಕಾರ್ಯಕ್ರಮವನ್ನು ಆಯೋಜಸಿದ್ದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ಧ, ಮನುಸ್ಮೃತಿ ವಿರುದ್ಧ ಹಾಗೂ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ ತಮ್ಮ ನಿಲುವುಗಳನ್ನು ನೆರೆದಿದ್ದ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು.

ಆದರೆ, ಈಗ ಈ ಕಾರ್ಯಕ್ರಮ ಮುಗಿದ ನಂತರ ರಾಹುಲ್​ ಗಾಂಧಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದ ವಿದ್ಯಾರ್ಥಿನಿ, (Student kisses Rahul Gandhi) ಕಾಂಗ್ರೆಸ್​ ನಾಯಕನಿಗೆ ಮುತ್ತಿಟ್ಟಿರುವ ವಿಡಿಯೋ ಈಗ ಎಲ್ಲಡೆ ವೈರಲ್​ ಆಗಿದೆ.

ವಿಡಿಯೋನಲ್ಲೇನಿದೆ?

ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಪುಣೆಯಲ್ಲಿ ನಡೆದಿದ್ದ ಛಾತ್ರೋಂಕೆ ಗೂಂಜ್​​ ಕಾರ್ಯಕ್ರಮ ಸಮಾಪ್ತಿಯಾದ ನಂತರ, ರಾಹುಲ್​ ಗಾಂಧಿ ಪ್ರೀತಿಪಾತ್ರರೊಂದಿಗೆ ಫೋಟೊ ಮತ್ತು ಆಟೋಗ್ರಾಫ್​ ನೀಡಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಮೊದಲು ರಾಹುಲ್​ ಗಾಂಧಿ ಜೊತೆ ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ನಂತರ ರಾಹುಲ್​ ಗಾಂಧಿ ಕೆನ್ನೆಗೊಂದು ಮುತ್ತಿಟ್ಟಿದ್ದಾಳೆ.

ರಾಹುಲ್​ ಗಾಂಧಿ ಕೂಡ ಇದನ್ನು ಬಹಳ ಸಕಾರಾತ್ಮಕವಾಗಿ ಸ್ವೀಕರಿಸಿ, ಆ ವಿದ್ಯಾರ್ಥಿ ಜೊತೆ ಹ್ಯಾಂಡ್​ಶೆಕ್​ ಮಾಡಿ ವೇದಿಕೆಯಿಂದ ಕೆಳಗಿಳಿದಿದ್ದಾರೆ.


ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಯಾ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಲಕ್ಷಾಂತರ ವೀಕ್ಷಣೆ ದೊರೆಯುತ್ತಿದೆ. ರಾಜಕೀಯ ನಾಯಕ ಎಂದರೆ ಹೀಗೆ ಜನರ ಜೊತೆ ಬೆರೆಯಬೇಕೆಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.
ಆ ಹುಡುಗಿ ಮಾಡಿದ್ದು ಮಹಾ ತಪ್ಪೇನು ಅಲ್ಲ. ಆದರೆ ತಾನು ಯಾವ ವೇದಿಕೆ ಮೇಲಿದ್ದೇನೆ? ತಾನು ಮಾಡುವ ಕೆಲಸದಿಂದ ಆ ವ್ಯಕ್ತಿಗೆ ಮುಜುಗರ ಉಂಟಾಗುತ್ತಾ? ಎಂದು ಯೋಚಿಸಬೇಕಿತ್ತೆಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.

ರಾಹುಲ್​ ಗಾಂಧಿಗೆ ಈ ವಿದ್ಯಾರ್ಥಿನಿ ಮುತ್ತಿನ ಪರಿಣಾಮದಿಂದಲಾದರೂ ಅಧಿಕಾರ ರಾಜಕಾರಣದಲ್ಲಿ ಉನ್ನತಿ ಕಾಣಲಿ ಎಂದು ಮತ್ತೊಬ್ಬರು ಕಿಚಾಯಿಸಿದ್ದಾರೆ, (ಏಜನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net