ಸ್ಟಾಪ್ ಇಟ್, ಗೆಟ್ ಲಾಸ್ಟ್!...ನೇಹಾ ಬೋರಾ ಮಾತನಾಡುತ್ತಿದ್ದಂತೆ ಆಕ್ರೋಶ ಹೊರಹಾಕಿದ ಸಭಿಕರು! | Neha Bora

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಗುರುವಾರ ಆಯೋಜಿಸಲಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಜಂಟಿ ಸುದ್ದಿಗೋಷ್ಠಿಯಲ್ಲಿ ಗಲಾಟೆ ಉಂಟಾಗಿದ್ದು, ಅಲ್ಲಿದ್ದ ಕೆಲವರು ಇದನ್ನು ನಿಲ್ಲಿಸಿ, ಹೊರಟುಹೋಗಿ ಎಂದು ಕೂಗಾಡಿದ ಘಟನೆ ವರದಿಯಾಗಿದೆ.
ನೇಹಾ ಬೋರಾ ಮಾತನಾಡುತ್ತಿದ್ದಂತೆ ಆಕ್ರೋಶ ಹೊರಹಾಕಿದ ಸಭಿಕರು!
ನೇಹಾ ಬೋರಾ ಮಾತನಾಡುತ್ತಿದ್ದಂತೆ ಆಕ್ರೋಶ ಹೊರಹಾಕಿದ ಸಭಿಕರು!
Published on: 

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಗುರುವಾರ ಆಯೋಜಿಸಲಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಜಂಟಿ ಸುದ್ದಿಗೋಷ್ಠಿಯಲ್ಲಿ ಗಲಾಟೆ ಉಂಟಾಗಿದ್ದು, ಅಲ್ಲಿದ್ದ ಕೆಲವರು ಇದನ್ನು ನಿಲ್ಲಿಸಿ, ಹೊರಟುಹೋಗಿ ಎಂದು ಕೂಗಾಡಿದ ಘಟನೆ ವರದಿಯಾಗಿದೆ.

ಈ ಹೋರಾಟದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ನೇಹಾ ಬೋರಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘೋಷಣೆಗಳನ್ನು ಕೂಗಲಾಯಿತು. ತಕ್ಷಣವೇ ಎಚ್ಚೆತ್ತ ನೇಹಾ ಬೋರಾ ಅವರು ಪ್ರತಿಭಟನಾಕಾರರನ್ನು ಹೊರಹಾಕುವಂತೆ ಆಯೋಜಕರಿಗೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೇಹಾ ಬೋರಾ ಅವರು, ಪ್ರತಿಭಟನೆಗಳ ವರದಿ ಮಾಡಿದ ಕಾರಣಕ್ಕೆ ಬಂಧನಕ್ಕೀಡಾದ ಪತ್ರಕರ್ತರ ಪರವಾಗಿ ನಿಂತು ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು. ಪತ್ರಕರ್ತರನ್ನು ವಶಕ್ಕೆ ಪಡೆದಿರುವುದು, ಅವರ ಕ್ಯಾಮೆರಾಗಳನ್ನು ಕಿತ್ತುಕೊಂಡಿರುವುದು ಹಾಗೂ ಪ್ರತಿಭಟನೆಗಳ ಬಗ್ಗೆ ಯಾವುದೇ ಸುದ್ದಿ ಮಾಡದಂತೆ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪಗಳ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ:ಯುಪಿ ಚುನಾವಣಾ ಕಣಕ್ಕೆ ಪ್ರಧಾನಿ ಮೋದಿ ಎಂಟ್ರಿ: ಅಕ್ಟೋಬರ್ ಅಂತ್ಯದಿಂದ ರಾಜ್ಯಾದ್ಯಂತ ಸರಣಿ ರ‍್ಯಾಲಿಗಳಿಗೆ ಬಿಜೆಪಿ ಮಾಸ್ಟರ್ ಪ್ಲಾನ್! | UP Assembly Elections

ಬೋರಾ ಆರೋಪಗಳೇನು..?

ಮಾಧ್ಯಮ ಸಂಸ್ಥೆಗಳ ವರದಿಗಳನ್ನು ಉಲ್ಲೇಖಿಸಿ ಮಾತನಾಡಿದ ನೇಹಾ ಬೋರಾ ಅವರು, ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ಅಧಿಕೃತ ಪ್ರೆಸ್ ಕಾರ್ಡ್‌ಗಳನ್ನು ಹೊಂದಿದ್ದ ಕೆಲವು ಪತ್ರಕರ್ತರ ಮೇಲೂ ಹಲ್ಲೆ ನಡೆಸಲಾಗಿದ್ದು, ಅವರನ್ನು ಗಂಟೆಗಟ್ಟಲೆ ಅಕ್ರಮ ಬಂಧನದಲ್ಲಿಡಲಾಗಿದೆ ಎಂದು ಅವರು ಆರೋಪಿಸಿದರು. ಪ್ರತಿಭಟನೆಗಳ ನೇರ ವರದಿ ಪ್ರಸಾರ ಮಾಡದಂತೆ ಪತ್ರಕರ್ತರಿಗೆ ತಡೆಯೊಡ್ಡಲಾಗಿದೆ, ಅವರ ಕ್ಯಾಮೆರಾ ಹಾಗೂ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಇಂತಹ ಕೃತ್ಯಗಳನ್ನು ಕಳವಳಕಾರಿ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ನೇಹಾ ಬೋರಾ ಅವರು ಮಹಿಳಾ ಪತ್ರಕರ್ತೆಯರು ಎದುರಿಸಬೇಕಾಗಿ ಬಂದ ಲೈಂಗಿಕ ಕಿರುಕುಳದ ಗಂಭೀರ ಸಮಸ್ಯೆಯನ್ನು ಪ್ರಸ್ತಾಪಿಸಿದರು. ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುವ ಮಾಧ್ಯಮ ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಮತ್ತು ಪೊಲೀಸರು ನಡೆದುಕೊಳ್ಳುತ್ತಿರುವ ರೀತಿಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನ್ಯಾಯಕ್ಕಾಗಿ ಆಗ್ರಹಿಸಿ ಮುಂದೆ ಬರುವವರನ್ನು ಹಾಗೂ ನಾಗರಿಕರನ್ನು ಗುರಿಯಾಗಿಸಿ ದಮನ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಈ ಹೋರಾಟವು ಸಾಮಾನ್ಯ ಮತ್ತು ಬಡ ಕುಟುಂಬಗಳಲ್ಲಿ ಜೀವಂತವಾಗಿದೆ ಎಂದಿರುವ ಬೋರಾ, ಸ್ವಾತಂತ್ರ್ಯ ಉದ್ಯಾನವನ, ದೆಹಲಿಯ ಜಂತರ್ ಮಂತರ್ ಮತ್ತು ಮುಂಬೈನ ಶಿವಾಜಿ ಪಾರ್ಕ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈ ಹೋರಾಟ ಮುಂದುವರಿಯಲಿದೆ ಎಂದರು. ಪತ್ರಕರ್ತರ ಮೇಲಿನ ದೌರ್ಜನ್ಯ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿದ್ದರೂ ಸಹ, ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಮುಂದುವರಿಸುವ ಮಾತುಗಳು ಅವರಿಂದ ಕೇಳಿಬಂದವು.

ಬಾಂಗ್ಲಾದವರಿಗೆ ಬೋರಾ ಧನ್ಯವಾದ

ಇದೇ ಸಮಯದಲ್ಲಿ ಬಾಂಗ್ಲಾದೇಶದ ಹೇಳಿಕೆಗಳ ಕುರಿತಾಗಿ ನೇಹಾ ಬೋರಾ ಅವರು ಟೀಕೆಗಳನ್ನು ಎದುರಿಸಬೇಕಾಯಿತು. ಬಾಂಗ್ಲಾದೇಶದ ವಿದ್ಯಾರ್ಥಿ ಚಳುವಳಿ ಮತ್ತು ಭಾರತದಲ್ಲಿ ನಡೆಯುತ್ತಿರುವ ಜೆನ್-ಜೀ (Gen-Z) ಚಳುವಳಿಯ ನಡುವೆ ಸಾಮ್ಯತೆಗಳನ್ನು ಎಳೆದು ಬೋರಾ ಹೇಳಿಕೆಯೊಂದನ್ನು ನೀಡಿದ್ದರು. ಈ ಆಂದೋಲನದಲ್ಲಿ ಭಾಗಿಯಾದವರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ ಅವರು, ನಾವು ನಿಮಗೆ ನಮ್ಮ ಲಾಲ್ ಸಲಾಂ ಸಲ್ಲಿಸುತ್ತೇವೆ. ಎಂದರು.

ಮುಂದುವರೆದು ಮಾತನಾಡಿದ ಬೋರಾ ಇಂದು ದೇಶಾದ್ಯಂತ ನಾವು ಕಾಣುತ್ತಿರುವ ಜೆನ್-ಜೀ ಚಳುವಳಿಯು ಮೊದಲು ಪ್ರಾರಂಭವಾಗಿದ್ದೇ ಬಾಂಗ್ಲಾದೇಶದಲ್ಲಿ ಎಂಬುದು ನಮಗೆ ತಿಳಿದಿದೆ. ನಮಗೆ ದಾರಿ ತೋರಿಸಿದ್ದಕ್ಕಾಗಿ ಮತ್ತು ನಮ್ಮೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಕ್ಕಾಗಿ ಅಭಿನಂದನೆಗಳು ಎಂದು ಹೇಳಿದರು. ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಬಾಂಗ್ಲಾದೇಶದ ವಿದ್ಯಾರ್ಥಿ ಚಳುವಳಿಗೆ ಹೋಲಿಸಿದ್ದಕ್ಕಾಗಿ ದೊಡ್ಡ ಪ್ರಮಾಣದ ಟೀಕೆ ವ್ಯಕ್ತವಾಗಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net