ದೇಶಕ್ಕೆ ಕೀರ್ತಿ ತಂದಿದ್ದಾರೆ; ವಿನೇಶ್ ಫೋಗಟ್ಗೆ 2026ರ ಏಷ್ಯನ್ ಗೇಮ್ಸ್ ಟ್ರಯಲ್ಸ್ಗೆ ಅವಕಾಶ ನೀಡಿದ ಸುಪ್ರೀಂಕೊರ್ಟ್ | Vinesh Phogat
ವಿನೇಶ್ ಫೋಗಟ್
Published on:
Copied
Follow Us
ನವದೆಹಲಿ: 2026ರ ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಒಲಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ಗೆ(Vinesh Phogat) ಅವಕಾಶ ಕಲ್ಪಿಸಿ ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೊರ್ಟ್, ಶುಕ್ರವಾರ(ಮೇ 29) ಟ್ರಯಲ್ಸ್‌ನಲ್ಲಿ ಭಾಗವಹಿಸಲು ಪೋಗಟ್ಗೆ ಅವಕಾಶ ನೀಡಿದೆ.
ಫೋಗಟ್ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಒಕ್ಕೂಟ ಸುಪ್ರೀಂ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು, ಹೈಕೋರ್ಟ್ ಈ ವಿಷಯವನ್ನು ಪರಿಶೀಲಿಸಿದ ರೀತಿಯ ಬಗ್ಗೆ ಎಸ್‌ಸಿ ಕಳವಳ ವ್ಯಕ್ತಪಡಿಸಿತು. ಮತ್ತು ಕೊನೆಯ ಕ್ಷಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಮುಂದುವರೆದು ಕುಸ್ತಿಯಲ್ಲಿನ ತನ್ನ ಸಾಧನೆಗಳ ಮೂಲಕ ಅವರು ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂಬುದನ್ನು ಗಮನಿಸಿದ ಸುಪ್ರೀಂ, ಬೇರೆ ಯಾರಾದರೂ ಆಗಿದ್ದರೆ, ಅದು ಬೇರೆಯದೇ ರೀತಿಯಲ್ಲಿರುತ್ತಿತ್ತು. ಅವರು ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿ, ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ.
ಅದ್ಯಾಗೂ ವಿಚಾರಣೆಯ ಉದ್ದಕ್ಕೂ, ದೆಹಲಿ ಹೈಕೋರ್ಟ್ ಈ ವಿಷಯವನ್ನು ನಿಭಾಯಿಸಿದ ವಿಧಾನದ ಬಗ್ಗೆ ಪೀಠವು ಆಕ್ಷೇಪ ವ್ಯಕ್ತಪಡಿಸಿತು. ಅರ್ಹತಾ ಮಾನದಂಡಗಳು ಎಲ್ಲಾ ಕುಸ್ತಿಪಟುಗಳಿಗೆ ಸಮಾನ ಎಂದು ಅನ್ವಯಿಸಿದಾಗ WFIನ ನೀತಿಯನ್ನು ಹೊರಗಿಡುವಿಕೆ ಎಂದು ಹೇಗೆ ಕರೆಯಬಹುದು ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ತಾಯ್ತನ ಮತ್ತು ಲಿಂಗ ತಾರತಮ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಾಡಿದ ಕೆಲವು ಅವಲೋಕನಗಳಿಗೆ ಪೀಠ ಆಕ್ಷೇಪಣೆಯನ್ನು ವ್ಯಕ್ತಪಡಿಸಿತು, ಅಂತಹ ಸಮಸ್ಯೆಗಳು ಕ್ರೀಡಾ ಆಡಳಿತದಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಏಕೈಕ ಆಧಾರವಾಗುವುದಿಲ್ಲ. ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಎಲ್ಲಾ ಅರ್ಹತೆ ಮತ್ತು ಅನುಸರಣೆ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಹೇಳಿತು.
ದೆಹಲಿ ಹೈಕೋರ್ಟ್ ತೀರ್ಪು
ತಾಯ್ತನದ ಕಾರಣ ನೀಡಿ ಏಷ್ಯನ್ ಗೇಮ್ಸ್ನ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ಗೆ ಭಾಗವಹಿಸಲು WFI ಅವಕಾಶ ನಿರಾಕರಿಸಿತ್ತು. ಅದನ್ನ ಪ್ರಶ್ನಿಸಿ ಫೋಗಟ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಾಯ್ತನವನ್ನು ಅಂಗವೈಕಲ್ಯ ಅಥವಾ ವೃತ್ತಿಪರ ಅವಕಾಶಗಳಿಂದ ಹೊರಗಿಡುವ ಆಧಾರವಾಗಿ ಪರಿಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿ, ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ನಿರ್ದೇಶನ ನೀಡಿತ್ತು (ಏಜೆನ್ಸೀಸ್).