ರೀಲ್ಸ್ ಮಾಡೋಕೆ ಬಂದಳು, ಅಪ್ಪನ ಮನಸ್ಸು ಕದ್ದಳು! ಮಗಳ ಗೆಳತಿಯನ್ನೇ ವರಿಸಲು ಸಿದ್ಧನಾದ 75 ರ ವೃದ್ಧ! Viral Love Story

ಮಗಳ ಜೊತೆ ರೀಲ್ಸ್ ಮಾಡಲು ಬಂದ ಯುವತಿ ಮೇಲೆ 75 ರ ವೃದ್ಧನಿಗೆ ಪ್ರೇಮಾಂಕುರ! ಮಗಳ ಗೆಳತಿಯನ್ನೇ ವರಿಸಲು ಸಿದ್ಧನಾದ ಅಜ್ಜನ ಅಚ್ಚರಿಯ ಲವ್ ಸ್ಟೋರಿ ಇಲ್ಲಿದೆ.
75-year-old man, who came to make Reels, ends up seeking to marry his daughter's friend
ರೀಲ್ಸ್ ಮಾಡಲು ಬಂದು ಮಗಳ ಗೆಳೆಯತಿಯನ್ನೇ ವರಿಸಲು ಮುಂದಾದ 75 ವರ್ಷದ ವೃದ್ಧ
Published on: 

ಉತ್ತರ ಪ್ರದೇಶ: ಪ್ರೀತಿಗೆ ಜಾತಿ, ಮತ, ವಯಸ್ಸು ಯಾವುದೂ ಮುಖ್ಯವಲ್ಲ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಆದರೆ, ಉತ್ತರ ಪ್ರದೇಶದ ಈ ವಿಚಿತ್ರ ಪ್ರೇಮಕಥೆಯನ್ನು ನೋಡಿದಾಗ, ಈ ಮಾರು ನೂರಕ್ಕೆ ನೂರು ನಿಜ ಅನ್ನಿಸುತ್ತದೆ. ಎಪ್ಪತ್ತೈದು ವರ್ಷದ ವೃದ್ಧನೊಬ್ಬ ಮೂವತ್ತು ವರ್ಷದ ಯುವತಿಯ ಪ್ರೇಮಪಾಶದಲ್ಲಿ ಸಿಲುಕಿ, ಈಗ ಆಕೆಯನ್ನೇ ಮದುವೆಯಾಗಲು ಸಿದ್ಧನಾಗಿರುವ ಸುದ್ದಿ ಈಗ ಎಲ್ಲಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಮಗಳ ಮನೆಗೆ ಬಂದವಳು ಅಪ್ಪನ ಮನಸ್ಸು ಕದ್ದಳು!

ಉತ್ತರ ಪ್ರದೇಶದ ಔರಯ್ಯ ಜಿಲ್ಲೆಯಲ್ಲಿ ನಡೆದಿರುವ ಈ ರೋಚಕ ಪ್ರೇಮಕಥೆಯ ನಾಯಕ 75 ವರ್ಷದ ರಾಮ್‌ಸುಗರ್ ಹಾಗೂ ನಾಯಕಿ 30 ವರ್ಷದ ರಾಣಿ ರಜಪೂತ್. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ರೀಲ್ಸ್ ಮಾಡುತ್ತಿದ್ದ ರಾಣಿ, ರಾಮ್‌ಸುಗರ್ ಅವರ ಮಗಳ ಸ್ನೇಹಿತೆಯಾಗಿದ್ದಳು. ಮಗಳನ್ನು ಭೇಟಿಯಾಗಲು ಆಗಾಗ ಮನೆಗೆ ಬಂದು ಹೋಗುತ್ತಿದ್ದಳು. ಹೀಗೆ ಮನೆಗೆ ಬರ್ತಾ ಬರ್ತಾ ಅಪ್ಪ ರಾಮ್‌ಸುಗರ್ ಪರಿಚಯವಾಗಿದೆ. ದಿನಗಳು ಕಳೆದಂತೆ ಇಬ್ಬರ ನಡುವೆ ಮಾತುಕತೆ, ಸ್ನೇಹ ಬೆಳೆದು ಅದು ನೋಡನೋಡುತ್ತಿದ್ದಂತೆ ಗಾಢ ಪ್ರೇಮವಾಗಿ ಮಾರ್ಪಟ್ಟಿದೆ.

ಉಂಗುರ ಬದಲಾಯಿಸಿಕೊಂಡ ಜೋಡಿ: ನವರಾತ್ರಿ ಮುಗೀತಿದ್ದಂತೆ ದಿಬ್ಬಣ!

ಸುಮಾರು ಒಂದು ವರ್ಷದಿಂದ ಗುಟ್ಟಾಗಿ ಸಾಗುತ್ತಿದ್ದ ಇವರ ಪ್ರೇಮಾಯಣ ಈಗ ಮದುವೆಯ ಹೊಸ್ತಿಲು ತಲುಪಿದೆ. ಇಬ್ಬರೂ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲೇ ಉಂಗುರ ಬದಲಾಯಿಸಿಕೊಂಡು ಭರ್ಜರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ನವರಾತ್ರಿ ಹಬ್ಬ ನಡೆಯುತ್ತಿದ್ದು, ಹಬ್ಬ ಮುಗಿದ ತಕ್ಷಣವೇ ಶಾಸ್ತ್ರೋಕ್ತವಾಗಿ ಇವರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ನಿಶ್ಚಿತಾರ್ಥದ ಸಮಾರಂಭದಲ್ಲಿ ಈ ಜೋಡಿ ಪರಸ್ಪರ ನಗುನಗುತ್ತಾ ಖುಷಿಯಿಂದ ಪೋಸ್ ಕೊಟ್ಟಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

Also Read
ಒಂದೇ ಬದಿಯ ಮೂಗು ಕಟ್ಟಿದೆ ಎಂದು ನಿರ್ಲಕ್ಷಿಸಬೇಡಿ!: ಜೀವಕ್ಕೆ ಕಂಟಕವಾಗಬಹುದು ಎಚ್ಚರ..! Nasal Cancer
75-year-old man, who came to make Reels, ends up seeking to marry his daughter's friend

ಸಿಂಗಲ್ಸ್​ ಏನು ಮಾಡಬೇಕು?

ಇವರಿಬ್ಬರ ನಡುವೆ ಬರೋಬ್ಬರಿ 45 ವರ್ಷಗಳ ವಯಸ್ಸಿನ ಅಂತರವಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರೀತಿ ನಿಜವಾಗಿಯೂ ಕುರುಡು ಅಂತ ಸುಮ್ಮನೆ ಹೇಳಿಲ್ಲ, ಇವತ್ತೇ ಅದನ್ನ ಕಣ್ಣಾರೆ ನೋಡಿದೆವು ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಯುವಕ, "75 ವರ್ಷದ ಅಜ್ಜನಿಗೇ ಲವ್ ಸಿಗುತ್ತೆ ಅಂದ್ರೆ, ನಮ್ಮಂತಹ ಸಿಂಗಲ್ ಯುವಕರ ಗತಿ ಏನು?" ಎಂದು ತಮಾಷೆಯಾಗಿ ಗೋಳಾಡಿದ್ದಾನೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net