ನಂಬಿಕೆಯೇ ಮುಳುವಾಯ್ತು! ಬಾಬಾ ಎಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | assam crime

ತನ್ನ ತಾಯಿಯ ಕೈಹಿಡಿಯಲಿದ್ದ ವ್ಯಕ್ತಿಯನ್ನೇ ಆ ಪುಟ್ಟ ಬಾಲಕಿ ತನ್ನ ಸ್ವಂತ ತಂದೆಯ ಸ್ಥಾನದಲ್ಲಿ ಕಂಡಿದ್ದಳು. ಪ್ರೀತಿಯಿಂದ ಆತನನ್ನು ಬಾಬಾ (ಅಪ್ಪಾ) ಎಂದೇ ಕರೆಯುತ್ತಿದ್ದಳು. ಆದರೆ, ಆ ಮುಗ್ಧ ಕಂದಮ್ಮನ ನಂಬಿಕೆಯನ್ನೇ ದುರುಪಯೋಗಪಡಿಸಿಕೊಂಡ ಪಾಪಿ, ಬಾಲಕಿಯ ಮೇಲೆ ಹಲವು ಬಾರಿ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಅಸ್ಸಾಂನ ಸಿಲ್ಚಾರ್‌ನಲ್ಲಿ ನಡೆದಿರುವ ಈ ಹೇಯ ಘಟನೆ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿದೆ.assam crime
ಬಾಬಾ ಎಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಕಾಮುಕ ಅರೆಸ್ಟ
ಬಾಬಾ ಎಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಕಾಮುಕ ಅರೆಸ್ಟWEB
Published on: 

ಸಿಲ್ಚಾರ್: ತನ್ನ ತಾಯಿಯ ಕೈಹಿಡಿಯಲಿದ್ದ ವ್ಯಕ್ತಿಯನ್ನೇ ಆ ಪುಟ್ಟ ಬಾಲಕಿ ತನ್ನ ಸ್ವಂತ ತಂದೆಯ ಸ್ಥಾನದಲ್ಲಿ ಕಂಡಿದ್ದಳು. ಪ್ರೀತಿಯಿಂದ ಆತನನ್ನು ಬಾಬಾ (ಅಪ್ಪಾ) ಎಂದೇ ಕರೆಯುತ್ತಿದ್ದಳು. ಆದರೆ, ಆ ಮುಗ್ಧ ಕಂದಮ್ಮನ ನಂಬಿಕೆಯನ್ನೇ ದುರುಪಯೋಗಪಡಿಸಿಕೊಂಡ ಪಾಪಿ, ಬಾಲಕಿಯ ಮೇಲೆ ಹಲವು ಬಾರಿ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಅಸ್ಸಾಂನ ಸಿಲ್ಚಾರ್‌ನಲ್ಲಿ ನಡೆದಿರುವ ಈ ಹೇಯ ಘಟನೆ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಸದ್ಯ ಪ್ರಕರಣದ ಕಾಮುಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರಂಭದಲ್ಲಿ ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸ್ ಸಿಬ್ಬಂದಿಗೂ ಅಮಾನತು ಶಿಕ್ಷೆ ವಿಧಿಸಲಾಗಿದೆ.

ತಂದೆಯ ಸ್ಥಾನದಲ್ಲಿದ್ದ ವ್ಯಕ್ತಿಯ ವಿರುದ್ಧವೇ ಗಂಭೀರ ಆರೋಪ

ಬಂಧಿತ ಆರೋಪಿಯನ್ನು 32 ವರ್ಷದ ರಾಹುಲ್ ರಾಯ್ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ. ಈತ ಬಾಲಕಿಯ ವಿಚ್ಛೇದಿತ ತಾಯಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಬ್ಬರೂ ವಿವಾಹವಾಗಲು ಕೂಡ ಯೋಜನೆ ರೂಪಿಸಿದ್ದರು. ರಾಹುಲ್ ಕೂಡ ವಿಚ್ಛೇದಿತನಾಗಿದ್ದು, ಬಾಲಕಿಯನ್ನು ನೋಡಿಕೊಳ್ಳುತ್ತಿದ್ದ. ಹೀಗಾಗಿ ಬಾಲಕಿ ಆತನನ್ನು ತಂದೆಯಂತೆ ಭಾವಿಸಿ ಬಾಬಾ ಎಂದು ಕರೆಯುತ್ತಿದ್ದಳು ಎಂದು ಕುಟುಂಬ ತಿಳಿಸಿದೆ. ನವೆಂಬರ್ 11ರಂದು ಬಾಲಕಿಗೆ ಅನಾರೋಗ್ಯ ಕಾಣಿಸಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ತಾಯಿ ವಿಚಾರಿಸಿದಾಗ, ರಾಹುಲ್ ತನ್ನ ಮಗಳ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಮಾಡಿದ್ದಾರೆ.

ದೂರು ನೀಡಲು ಹೋದರೂ ದಾಖಲಿಸಿಕೊಳ್ಳಲಿಲ್ಲವೇ?

ಮಗಳ ಮೇಲಿನ ದೌರ್ಜನ್ಯದ ವಿಷಯ ತಿಳಿದ ಕೂಡಲೇ ಕುಟುಂಬದವರು ರಂಗಿರ್‌ಖಾರಿ ಪೊಲೀಸ್ ಹೊರಠಾಣೆಗೆ ತೆರಳಿ ದೂರು ನೀಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ ಅಂದು ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಪದೇಪದೆ ಮನವಿ ಮಾಡಿದರೂ ಬಾಲಕಿಯ ವೈದ್ಯಕೀಯ ಪರೀಕ್ಷೆಗೂ ವ್ಯವಸ್ಥೆ ಮಾಡಿರಲಿಲ್ಲ ಎಂಬುದು ತಾಯಿಯ ಮತ್ತೊಂದು ಆರೋಪ.

ಬಳಿಕ ಕುಟುಂಬದವರು ಕಚಾರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಅಪರಾಧ) ಪಿ.ಪಿ. ಸೈಕಿಯಾ ಅವರನ್ನು ಸಂಪರ್ಕಿಸಿ ಹೊಸದಾಗಿ ದೂರು ನೀಡಿದ್ದಾರೆ. ನಂತರ ಪೋಕ್ಸೊ ಕಾಯ್ದೆಯ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Also Read
ಧರ್ಮೇಂದ್ರ ಮೊದಲ ಪುಣ್ಯತಿಥಿ ! ಅವರಿಲ್ಲದೆ ಜೀವನವೇ ಶೂನ್ಯ ಎಂದ ಹೇಮಾ ಮಾಲಿನಿ | Dream girl
ಬಾಬಾ ಎಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಕಾಮುಕ ಅರೆಸ್ಟ

ಊರು ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧನ

ಪೊಲೀಸರ ಮಾಹಿತಿ ಪ್ರಕಾರ, ಸಿಲ್ಚಾರ್‌ನ ಹೊರವಲಯದಲ್ಲಿ ಆರೋಪಿಯ ಚಲನವಲನ ಪತ್ತೆಯಾಗಿತ್ತು. ರಂಗ್‌ಪುರ ಸಮೀಪ ಆತನನ್ನು ಪತ್ತೆಹಚ್ಚಿದ ಪೊಲೀಸರು, ಪ್ರದೇಶದಿಂದ ಪರಾರಿಯಾಗುವ ಪ್ರಯತ್ನದಲ್ಲಿದ್ದಾಗ ಬಂಧಿಸಿದ್ದಾರೆ. ಸದ್ಯ ಆತನನ್ನು ವಿಚಾರಣೆ ನಡೆಸಲಾಗುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯಲಿದೆ. ತನ್ನ ಮಗಳೊಂದಿಗೆ ಆರೋಪಿಯನ್ನು ನಂಬಿಕೆಯಿಂದ ಇರಿಸಿದ್ದೆ. ಆತನನ್ನೇ ಮದುವೆಯಾಗುವ ಯೋಜನೆಯಲ್ಲಿದ್ದೆ ಎಂದು ಬಾಲಕಿಯ ತಾಯಿ ಮಾಧ್ಯಮಗಳ ಮುಂದೆ ನೋವು ವ್ಯಕ್ತಪಡಿಸಿದ್ದಾರೆ. ಆರೋಪಿಯ ಬೆದರಿಕೆಯಿಂದಾಗಿ ಬಾಲಕಿ ಈ ಹಿಂದೆ ನಡೆದ ದೌರ್ಜನ್ಯದ ಬಗ್ಗೆ ಬಾಯಿ ಬಿಟ್ಟಿರಲಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರಿಗೆ ಅಮಾನತು

ಇನ್ನೊಂದೆಡೆ, ಕುಟುಂಬದ ಮೊದಲ ದೂರಿನ ಸಂದರ್ಭದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಉಪನಿರೀಕ್ಷಕ ಅನಂತ ಸಿನ್ಹಾ ಮತ್ತು ಕಾನ್‌ಸ್ಟೆಬಲ್ ಹರಿಪಾದ ರಾಯ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕಚಾರ್ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕ ಪಾರ್ಥ ಪ್ರತಿಮ್ ದಾಸ್ ತಿಳಿಸಿದ್ದಾರೆ. ಇಬ್ಬರು ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಕುರಿತು ಆಂತರಿಕ ತನಿಖೆಗೂ ಆದೇಶಿಸಲಾಗಿದೆ. ತನಿಖೆಯ ಬಳಿಕ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Also Read
ಲೋಕಲ್ ರೈಲಿನಲ್ಲಿ ಹೈಡ್ರಾಮಾ ! ನಿದ್ದೆ ಭಂಗಗೊಳಿಸಿದ್ದಕ್ಕೆ ತನಗೆ ತಾನೇ ಬ್ಲೇಡ್‌ನಿಂದ ಕುಯ್ದುಕೊಂಡ ವ್ಯಕ್ತಿ | viral video
ಬಾಬಾ ಎಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಕಾಮುಕ ಅರೆಸ್ಟ

ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಮಗುವಿನ ಸುರಕ್ಷತೆ ಮತ್ತು ನ್ಯಾಯದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ನಡೆಯಬಾರದು ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.