ಅಜಿತ್ ಆಸೆಯಂತೆ ಎರಡು ಬಣ ಒಂದಾಗಲಿ..ಸುನೇತ್ರಾ ಪ್ರಮಾಣ ವಚನದ ಬಗ್ಗೆ ಕೊನೆಗೂ ಮೌನ ಮುರಿದ ಶರದ್ ಪವಾರ್! | Sharad Pawar

Sharad Pawar | ಎನ್​​ಸಿಪಿ ಹಿರಿಯ ನಾಯಕ ಶರದ್ ಪವಾರ್
Sharad Pawar | ಎನ್​​ಸಿಪಿ ಹಿರಿಯ ನಾಯಕ ಶರದ್ ಪವಾರ್
Published on
ಮುಂಬೈ: ಬುಧವಾರ ವಿಮಾನ ದುರಂತದಲ್ಲಿ ಕೊನೆಯುಸಿರೆಳೆದ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಶನಿವಾರ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರಾ ಎಂಬ ಚರ್ಚೆಯ ಕುರಿತು ಅಜಿತ್​ ದಾದಾ ಚಿಕ್ಕಪ್ಪ, ಹಿರಿಯ ನಾಯಕ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಪವಾರ್​, ನನಗೆ ಆ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಇದನ್ನು ಅವರ ಪಕ್ಷದವರೇ ನಿರ್ಧರಿಸಿರಬೇಕು. ಪತ್ರಿಕೆಯ ಮೂಲಕ ಈ ಸುದ್ದಿಯನ್ನು ತಿಳಿದುಕೊಂಡಿದ್ದು, ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟಾಕರೆ ಸೇರಿದಂತೆ ಇನ್ನೂ ಕೆಲ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದರ ಬಗ್ಗೆ ನನ್ನೊಂದಿಗೆ ಯಾರು ಚರ್ಚೆ ನಡೆಸಿಲ್ಲ ಎಂದು ಹೇಳಿದರು.

ಬಣಗಳ ಪುನರ್ಮಿಲನ

ಕಳೆದ ನಾಲ್ಕು ತಿಂಗಳುಗಳಿಂದ ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ನೇತೃತ್ವದಲ್ಲಿ ಎರಡು ಎನ್‌ಸಿಪಿ ಬಣಗಳ ವಿಲೀನದ ಮಾತುಕತೆ ನಡೆಯುತ್ತಿತ್ತು, ಅಜಿತ್​ರ ನಿಧನದ ಬಳಿಕ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಇನ್ನಾದರು ಅಜಿತ್​ ಆಸೆ ಈಡೇರಬೇಕೆಂಬುದು ನನ್ನ ಬಯಕೆಯಾಗಿದ್ದು, ಅಜಿತ್ ಪವಾರ್, ಶಶಿಕಾಂತ್ ಶಿಂಧೆ ಮತ್ತು ಜಯಂತ್ ಪಾಟೀಲ್ ಎರಡೂ ಬಣಗಳ ವಿಲೀನದ ಬಗ್ಗೆ ಮಾತುಕತೆ ಆರಂಭಿಸಿದ್ದರು. ಫೆಬ್ರವರಿ 12 ರಂದು ದಿನಾಂಕವನ್ನು ಸಹ ನಿಗದಿಪಡಿಸಲಾಗಿತ್ತು, ದುರದೃಷ್ಟವಶಾತ್, ಅಜಿತ್ ಅದಕ್ಕೂ ಮೊದಲೇ ನಮ್ಮನ್ನು ತೊರೆದರು ಎಂದು ಭಾವುಕರಾದರು.
ಅಜಿತ್ ಪವಾರ್ ಪಕ್ಷದ 54 ಶಾಸಕರಲ್ಲಿ ಸುಮಾರು 40 ಶಾಸಕರು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಂತೆ ಎನ್​ಸಿಪಿ ವಿಭಜನೆಯಾಯಿತು. ಇದಾದ ಬಳಿಕ ಶರದ್ ಪವಾರ್ ತಮ್ಮ ಬಣವನ್ನು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ - ಶರದ್ಚಂದ್ರ ಪವಾರ್ ಎಂದು ಹೆಸರಿಸಿದರು.
ಎನ್‌ಸಿಪಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದು, ಅಜಿತ್ ದಾದಾ ಕುಟುಂಬ ಮತ್ತು ಎನ್​​ಸಿಪಿಗೆ ಬಿಜೆಪಿ ಪಕ್ಷ ಮತ್ತು ಮಹಾಯುತಿ ಸರ್ಕಾರ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಸಿಎಂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net