ಪ್ರಧಾನಿ ಮೋದಿ ಭೇಟಿಯಾದ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ; ಎನ್​ಡಿಎಗೆ ಬೆಂಬಲ ನೀಡುವ ವದಂತಿ ನಡುವೆ ಕುತೂಹಲ ಕೆರಳಿಸಿದ ಭೇಟಿ | Sharad Pawar

ಶರದ್ ಪವಾರ್ ಮತ್ತು ಪ್ರಧಾನಿ ಮೋದಿ ಭೇಟಿ
ಶರದ್ ಪವಾರ್ ಮತ್ತು ಪ್ರಧಾನಿ ಮೋದಿ ಭೇಟಿ
Published on
ನವದೆಹಲಿ: ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಬುಧವಾರ(ಜು. 22) ಸಂಸತ್ ಹೊರೆಗೆ ತೀವ್ರ ಪ್ರತಿಭಟನೆ ನಡೆಸುತ್ತಿರುವ ನಡುವೆ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷವಾದ ಎನ್​ಸಿಪಿ(ಎಸ್​ಪಿ) ಮುಖ್ಯಸ್ಥ ಶರದ್ ಪವಾರ್(Sharad Pawar), ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.
ಎನ್​ಡಿಎಗೆ ಬೆಂಬಲ ನೀಡುವ ವದಂತಿ ನಡುವೆಯೂ ಪ್ರಧಾನಿ ಕಚೇರಿಯಲ್ಲಿ ನಡೆದ ಶರದ್ ಪವಾರ್, ಸುಪ್ರಿಯಾ ಸುಳೆ ಹಾಗೂ ಪ್ರಧಾನಿ ಮೋದಿಯವರ ಭೇಟಿಯೂ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. ಎನ್‌ಸಿಪಿ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುತ್ತದೆ ಎಂಬ ಊಹಾಪೋಹಗಳನ್ನು ಹೆಚ್ಚಿಸಿದೆ. ಸಭೆಯ ಫೋಟೋಗಳನ್ನು ಪಿಎಂಒ ಬಿಡುಗಡೆ ಮಾಡಿದೆ.
ಸಭೆಯಲ್ಲಿ ಶರದ್ ಪವಾರ್ ಅವರು ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ನೀರಾವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪಟ್ಟಿಯನ್ನು ಪ್ರಧಾನ ಮಂತ್ರಿಯವರಿಗೆ ಸಲ್ಲಿಸಿದರು ಎನ್ನಲಾಗಿದೆ.

ಡಿಲಿಮಿಟೇಷನ್​ಗೆ ಬೆಂಬಲ ಸಾಧ್ಯತೆ

ಕೇಂದ್ರ ಸರ್ಕಾರವು ನಡೆಯುತ್ತಿರುವ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಮತ್ತೆ ತರಲು ಯೋಜಿಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬೆಂಬಲವನ್ನು ಸಂಗ್ರಹಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಈ ನಡುವೆ ಶರದ್ ಪವಾರ್-ಮೋದಿ ಭೇಟಿ ನಡೆದಿದೆ.
ಸರ್ಕಾರವು ಶೇ. 50ರಷ್ಟು ಸೀಟು ಹೆಚ್ಚಳದ ಬಗ್ಗೆ ಲಿಖಿತ ಭರವಸೆ ನೀಡಿದರೆ, ಮಸೂದೆಯನ್ನು ಬೆಂಬಲಿಸಬಹುದು ಎಂದು ಎನ್‌ಸಿಪಿ ಈ ಹಿಂದೆ ಹೇಳಿತ್ತು. ಈ ಕುರಿತು ಮಾತನಾಡಿದ್ದ ಸುಪ್ರಿಯಾ ಸುಳೆ, ಶೇಕಡಾ 50 ರಷ್ಟು ಸೀಟುಗಳ ಹೆಚ್ಚಳದ ಷರತ್ತುಗಳನ್ನು ಲಿಖಿರವಾಗಿ ಭರವಸೆ ನೀಡಿದ್ರೆ ಬೆಂಬಲದ ಬಗ್ಗೆ ಪರಿಶೀಲಿಸುತ್ತೇವೆ ಎಂದಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net