

ಚೆನ್ನೈ: ಟಿವಿಕೆ ಶಾಸಕ ಸಿ. ಅರುಳ್ ವಿಘ್ನೇಶ್ ಕಲ್ಲಕುರಿಚಿ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸದಂತೆ ತನಿಖೆ ನಡೆಸಲು ತಮಿಳುನಾಡು ಸರ್ಕಾರ ಮಂಗಳವಾರ(ನ. 27) ಆಂತರಿಕ ಸಮಿತಿ ರಚನೆ ಮಾಡಿದೆ ಎಂದು ವರದಿಯಾಗಿದೆ.
ಮಂಗಳವಾರ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶ ನೀಡಿರುವ ಹಿನ್ನೆಲೆ ಶಾಸಕ ವಿಘ್ನೇಶ್ ವಿರುದ್ಧ ದಾಖಲಾಗಿರುವ ದೂರಿನ ತನಿಖೆಗಾಗಿ ಸರ್ಕಾರ ನಾಲ್ಕು ಸದಸ್ಯರ ಆಂತರಿಕ ದೂರು ಸಮಿತಿ (ಐಸಿಸಿ) ರಚಿಸಲಾಗಿದೆ.
ತಮಿಳುನಾಡು ಪರಿಸರ ಕಾರ್ಯದರ್ಶಿ ಮತ್ತು ಹಿರಿಯ ಐಎಎಸ್ ಅಧಿಕಾರಿ ಕಾಕರ್ಲಾ ಉಷಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಅಂಗವಿಕಲರ ಕಲ್ಯಾಣ ಕಾರ್ಯದರ್ಶಿ ಮತ್ತು ಐಎಎಸ್ ಅಧಿಕಾರಿ ಮಧುಮತಿ, ಸರ್ಕಾರಿ ಅಧಿಕಾರಿ ಸುಮತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸುನಿತಾ ಜೋ ಅವರನ್ನು ಇತರ ಸದಸ್ಯರನ್ನಾಗಿ ನೇಮಿಸಲಾಗಿದೆ.
ಈ ತಿಂಗಳ 27ರೊಳಗೆ ಈ ವಿಷಯದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಸಮಿತಿಯನ್ನು ರಚಿಸಲಾಗಿದೆ.
ಏತನ್ಮಧ್ಯೆ, ಶಾಸಕರ ವಿರುದ್ಧ ದೂರು ದಾಖಲಿಸಿದ ಮಹಿಳಾ ಅಧಿಕಾರಿ ಸ್ವತಃ ಜಿಲ್ಲಾಧಿಕಾರಿಯಾಗಿದ್ದಾರೆ. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ದೂರುಗಳನ್ನು ನಿರ್ವಹಿಸುವ ಜಿಲ್ಲಾ ಮಟ್ಟದ ಸಮಿತಿಯ ಮುಖ್ಯಸ್ಥೆ ಅವರು. ಆದಾಗ್ಯೂ, ಅದೇ ಸಮಿತಿಯ ಅಡಿಯಲ್ಲಿರುವ ಅಧಿಕಾರಿಯೊಬ್ಬರು ಶಾಸಕರ ವಿರುದ್ಧ ದೂರು ದಾಖಲಿಸಬೇಕಾದಾಗ ವಿಶೇಷ ಪರಿಸ್ಥಿತಿ ಉದ್ಭವಿಸಿದೆ ಎಂದು ಅವಲೋಕನ ಮಾಡಿತ್ತು.
ಈ ವೇಳೆ ದೂರಿನ ತನಿಖೆಗಾಗಿ ಅವರ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿಯ ಬದಲಿಗೆ ರಾಜ್ಯ ಮಟ್ಟದಲ್ಲಿ ವಿಶೇಷ ಆಂತರಿಕ ದೂರು ಸಮಿತಿಯನ್ನು ರಚಿಸಲು ಆದೇಶ ನೀಡಿತ್ತು (ಏಜೆನ್ಸೀಸ್).