ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ವ್ಯಾಪ್ತಿ ಅಲ್ಲ ಅಂದ್ರೆ ರಾಜೀನಾಮೆ ಕೊಡಿ; ಸಿಜೆಐ ವಿರುದ್ಧ ಪೋಸ್ಟ್ ಹಾಕಿ ಡಿಲಿಟ್ ಮಾಡಿದ ಕೇರಳ ಕಾಂಗ್ರೆಸ್ | Kerala Congress

ದೆಹಲಿಯಲ್ಲಿನ ಪ್ರತಿಭಟನೆಗಳು ಮತ್ತು ಬಂಧನಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವಾಗ ಕಾನೂನು ಸುವ್ಯವಸ್ಥೆ ನಮ್ಮ ವ್ಯಾಪ್ತಿಯಲ್ಲಿಲ್ಲ ಎಂಬ ಮಾತಿಗೆ ಕೇರಳ ಕಾಂಗ್ರೆಸ್, ಎಕ್ಸ್​ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ವಿರುದ್ಧ ಪೋಸ್ಟ್ ಹಾಕಿದ್ದು, ವಿವಾದದ ಬಳಿಕ ಡಿಲಿಟ್ ಮಾಡಿದೆ.
ಸಿಜೆಐ ಸೂರ್ಯಕಾಂತ್
ಸಿಜೆಐ ಸೂರ್ಯಕಾಂತ್
Published on: 

ನವದೆಹಲಿ: ದೆಹಲಿಯಲ್ಲಿನ ಪ್ರತಿಭಟನೆಗಳು ಮತ್ತು ಬಂಧನಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವಾಗ ಕಾನೂನು ಸುವ್ಯವಸ್ಥೆ ನಮ್ಮ ವ್ಯಾಪ್ತಿಯಲ್ಲಿಲ್ಲ ಎಂಬ ಮಾತಿಗೆ ಕೇರಳ ಕಾಂಗ್ರೆಸ್, ಎಕ್ಸ್​ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ವಿರುದ್ಧ ಪೋಸ್ಟ್ ಹಾಕಿದ್ದು, ವಿವಾದದ ಬಳಿಕ ಡಿಲಿಟ್ ಮಾಡಿದೆ.

ಸೋಮವಾರ(ಅ. 12) ಬೆಳಗ್ಗೆ ಸಿಜೆಐ ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ಕೇರಳ ಕಾಂಗ್ರೆಸ್, ಆತ್ಮೀಯ ಸೂರ್ಯಕಾಂತ್, ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರದಿದ್ದರೆ, ಈಗಲೇ ರಾಜೀನಾಮೆ ನೀಡಿ. ಅದನ್ನು ನಿಭಾಯಿಸಬಲ್ಲ ನಿಮ್ಮ ಬದಲಿಯನ್ನು ನಾವು ಹುಡುಕುತ್ತೇವೆ ಎಂದು ಬರೆದಿತ್ತು.

Also Read
ಎಸ್ಐಆರ್ ವಿರುದ್ಧ ರಾಹುಲ್ ಗಾಂಧಿ ಸೇರಿ ವಿಪಕ್ಷ ನಾಯಕರು ಸಲ್ಲಿಸಿದ ಅರ್ಜಿಯಲ್ಲಿ 14 ದೋಷಗಳು: ಎತ್ತಿ ತೋರಿಸಿದ ಸುಪ್ರೀಂ ರಿಜಿಸ್ಟ್ರಿ | Supreme Court
ಸಿಜೆಐ ಸೂರ್ಯಕಾಂತ್

ಪೋಸ್ಟ್ ಬಗ್ಗೆ ಆಡಳಿತರೂಢ ಬಿಜೆಪಿ ಸೇರಿ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೇರಳ ಕಾಂಗ್ರೆಸ್ ಟ್ವೀಟ್ ಅನ್ನು ಡಿಲಿಟ್ ಮಾಡಿದೆ. ಮತ್ತು ಕಾಂಗ್ರೆಸ್ ಪೋಸ್ಟ್ ಹಾಕಿದ ಕಾರ್ಯಕರ್ತನನ್ನು ಪಕ್ಷದಿಂದ ತೆಗೆದು ಹಾಕಿದೆ. ಪ್ರಸ್ತುತ ಪೋಸ್ಟ್​ನ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ

ಸಿಜೆಐ ವಿರುದ್ಧದ ಪೋಸ್ಟ್​ಗೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವು ಸಾಂವಿಧಾನಿಕ ಸಂಸ್ಥೆಗಳನ್ನು ನಾಶಮಾಡಲು ಹೊರಟಿದೆ ಎಂಬ ನಮ್ಮ ಆರೋಪವನ್ನು ಇದು ದೃಢಪಡಿಸುತ್ತದೆ ಎಂದು ಹೇಳಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಶೇರ್ ಮಾಡಿ ಕಿಡಿಕಾರಿರುವ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು, ದೇಶದ ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶಮಾಡಲು ಬಯಸುತ್ತಿರುವ ಕಾಂಗ್ರೆಸ್‌ನ ಮುಂದಿನ ಗುರಿ ನ್ಯಾಯಾಂಗವಾಗಿದೆ. ಎಲ್ಲಾ ಭಾರತ ವಿರೋಧಿ ಗುಂಪುಗಳು ಕೈಜೋಡಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮತ್ತು ದೇಶಭಕ್ತ ಭಾರತೀಯರೆಲ್ಲರೂ ಕೂಡ ಒಗ್ಗೂಡಲಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net