ರಾಹುಲ್​ ಮಹಿಳಾ ಸಬಲೀಕರಣ ಹೇಳಿಕೆ: ರೇಟ್​ ಎಷ್ಟೆಂದು ಕೇಳಿದ ಪಕ್ಷ ನಿಮ್ಮದು; ಕಾಂಗ್ರೆಸ್​ ನಾಯಕನಿಗೆ ಬಾಸುರಿ ಸ್ವರಾಜ್​ ಕೌಂಟರ್​! Bansuri Swaraj on Rahul Gandhi

ಮಹಿಳೆಯರ ರೇಟ್ ಎಷ್ಟು ಎಂದು ಕೇಳಿದ ಪಕ್ಷ ನಿಮ್ಮದು ಎಂದು ವಾಗ್ದಾಳಿ
ಮಹಿಳೆಯರ ರೇಟ್ ಎಷ್ಟು ಎಂದು ಕೇಳಿದ ಪಕ್ಷ ನಿಮ್ಮದು ಎಂದು ವಾಗ್ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ರಾಹುಲ್ ಗಾಂಧಿ ಮಹಿಳಾ ಸಬಲೀಕರಣ ಹೇಳಿಕೆ
  • ಮಹಿಳೆಯರ ರೇಟ್ ಎಷ್ಟು ಎಂದು ಕೇಳಿದ ಪಕ್ಷ ನಿಮ್ಮದು ಎಂದು ವಾಗ್ದಾಳಿ
  • ಬಿಜೆಪಿ ನಾಯಕಿ ಬಾಸುರಿ ಸ್ವರಾಜ್ ತೀಕ್ಷ್ಣ ತಿರುಗೇಟು
ನವದೆಹಲಿ: ಕೆಲ ದಿನಗಳ ಹಿಂದೆ ಪುಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಛಾತ್ರೋಂಕೆ ಗೂಂಜ್​ ಎಂಬ ಕಾರ್ಯಕ್ರಮದಲ್ಲಿ, ದೇಶಲ್ಲಿ ಪುರುಷ ಪ್ರಧಾನತೆಯಿಂದ ತೊಂದರೆಯಾಗುತ್ತಿದೆ. ಇದರಿಂದ ಮಹಿಳೆಯರು ಕಟ್ಟುಪಾಡಿನಿಂದ ಬಾಳುವಂತಾಗಿದೆ ಎಂದು ಹೇಳಿದ್ದರು.
ಈಗ, ರಾಹುಲ್ ಗಾಂಧಿ ಹೇಳಿಕೆಗೆ, ಬಿಜೆಪಿ ಸಂಸದೆ ಬಾಸುರಿ ಸ್ವರಾಜ್ (Bansuri Swaraj on Rahul Gandhi)​ ತಿರುಗೇಟು ನೀಡುತ್ತಾ, ರಾಹುಲ್​ ಗಾಂಧಿಯಲ್ಲಿ ಸ್ಪಷ್ಟ ವಿಚಾರಧಾರೆಯೇ ಇಲ್ಲ ಎಂದಿದ್ದಾರೆ.

ರೇಟ್​ ಎಷ್ಟು ಎಂದು ಕೇಳಿದ್ದ ಪಕ್ಷ ನಿಮ್ಮದು!

ರಾಹುಲ್​ ಗಾಂಧಿ ಪುರುಷ ಪ್ರಧಾನ ವಿರೋಧಿ ಹಾಗೂ ಸ್ತ್ರೀ ಪರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಬಾಸುರಿ ಸ್ವರಾಜ್​, ಇತ್ತೀಚೆಗೆ ರಾಹುಲ್​ ಗಾಂಧಿ ಅವರ ಬಾಯಿಂದ ಮಹಿಳಾ ಸಬಲೀಕರಣ ಬಗ್ಗೆ ಕೇಳಿ ಖುಷಿಯಾಯಿತು, ಆದರೆ ಈ ಸ್ತ್ರೀ ವಿರೋಧಿ ನೀತಿಗೆ ವಿರೋಧ ಕೇವಲ ಪುಣೆಗೆ ಮಾತ್ರ ಸೀಮಿತವೇ? ಎಂದು ಪ್ರಶ್ನಿಸಿದ್ದಾರೆ.
2024 ರ ಚುನಾವಣೆ ಸಂದರ್ಭದಲ್ಲಿ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ರಣಾವತ್​ ಚುನಾವಣೆಗೆ ನಿಂತಾಗ ನಿಮ್ಮ ಪಕ್ಷದ ಸುಪ್ರೀಯಾ ಶ್ರೀನೇಟ್​ 'ರೇಟ್​ ಎಷ್ಟು'? ಎಂದು ಕೇಳಿದಾಗ ರಾಹುಲ್​ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಸಂದರ್ಭದಲ್ಲಿ ನಾನು ಪ್ರಕರಣ ದಾಖಲಿಸಿದ್ದೆ.

ಕಾಂಗ್ರೆಸ್​ ಪಕ್ಷದ ರಣದೀಪ್ ಸುರ್ಜೇವಾಲಾ ಮುಥುರಾ ಸಂಸದೆ ಹೇಮಾ ಮಾಲೀನಿ ಬಗ್ಗೆ ಮಾನಹಾನಿಕರ ಪದ ಪ್ರಯೋಗ ಮಾಡಿದ್ದಾಗ, ರಾಹುಲ್​ ಯಾವುದೇ ವಿರೋಧ ವ್ಯಕ್ತ ಪಡಿಸಿರಲಿಲ್ಲ. ನಿಮ್ಮ ಪಕ್ಷದ ಅಧೀರ್​ ರಂಜನ್​ ಚೌಧರಿ, ಬುಡಕಟ್ಟು ಮಹಿಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂಬ ಅತ್ಯಂತ ಕೀಳು ಮಟ್ಟದ ಮಾತನ್ನು ಆಡಿದ್ದಾಗ ರಾಹುಲ್​ ತುಟಿಕ್​-ಪಿಟಿಕ್​ ಎಂದಿಲ್ಲ.


ಈಗ, ಕಾರ್ಯಕ್ರಮದಲ್ಲಿ ನಾವು ಪುರುಷ ಪ್ರಧಾನ ಸಮಾಜವನ್ನು ಕೊನೆಗೊಳಿಸಬೇಕೆಂದು ಭಾಷಣ ಮಾಡುತ್ತಾರೆ. ಸ್ವಂತ ಪಕ್ಷದಲ್ಲಿಯೇ ಎಷ್ಟು ಸ್ತ್ರೀ ಸ್ವಾತಂತ್ರ್ಯವಿದೆ ಎಂದು ಮೊದಲು ಅಧ್ಯಯನ ನಡೆಸಲಿ ಆಮೇಲೆ ದೇಶದ ಬಗ್ಗೆ ಮಾತನಾಡಲಿ ಎಂದು ಬಾಸುರಿ ಕಿಡಿ ಕಾರಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net