ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಕಿರಣ್ ರಿಜಿಜು, ಸಾಮಾನ್ಯವಾಗಿ ನಾನು ಭಾರತೀಯರಲ್ಲದವರು ನೀಡುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಇಲ್ಲಿ ಎಲಾನ್ ಮಸ್ಟ್ ಅವರ ಮಾತನ್ನು ಉಲ್ಲೇಖಿಸುತ್ತಿರುವುದು ಕೇವಲ ರಾಹುಲ್ ಗಾಂಧಿ ಜೀ ಅವರಿಗೆ ಮನವರಿಕೆ ಮಾಡಿಕೊಡಲು ಮಾತ್ರ. ಸರ್ಕಾರವನ್ನು ಟೀಕಿಸುವುದು ಪ್ರಜಾಪ್ರಭುತ್ವದ ಹಕ್ಕು ನಿಜ, ಆದರೆ ಭಾರತವನ್ನು ಹೀಯಾಳಿಸಬೇಡಿ. ಭಾರತದ ಸಾಧನೆಗಳನ್ನು ಎಂದಿಗೂ ಕೀಳಾಗಿ ಕಾಣಬೇಡಿ. ಒಬ್ಬ ಹೆಮ್ಮೆಯ ಭಾರತೀಯನಾಗಿರಿ ಎಂದಿದ್ದಾರೆ.