ಕ್ಷೇತ್ರ ಪುನರ್ವಿಂಗಡೆ ಮಸೂದೆ ಅಂಗೀಕಾರದ ಮತದಾನ ವೇಳೆ ಗೈರಾಗದಂತೆ ಟಿಎಂಸಿ ಸಂಸದರಿಗೆ ರಾಹುಲ್ ಗಾಂಧಿ ಒತ್ತಾಯ | Rahul Gandhi

ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ
ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ
Published on
ನವದೆಹಲಿ: ವಿಶೇಷ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕರಾದ ಮತದಾನದ ವೇಳೆ ಗೈರಾಗದಂತೆ ಟಿಎಂಸಿ ಸಂಸದರಿಗೆ ರಾಹುಲ್ ಗಾಂಧಿ(Rahul Gandhi) ಒತ್ತಾಯಿಸಿದ್ದಾರೆ ಎಂದು ಗುರುವಾರ(ಏ. 16) ವರದಿಯಾಗಿದೆ.
ಕೇಂದ್ರ ಸರ್ಕಾವು ಇಂದು ಸಂವಿಧಾನದ 131ನೇ ತಿದ್ದುಪಡಿ ಮಸೂದೆ, ಗಡಿ ನಿರ್ಣಯ ಮಸೂದೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು ತಿದ್ದುಪಡಿ ಮಸೂದೆ - 2026 ಅನ್ನು ಮಂಡಿಸಿದೆ. ಈ ಮೂಲಕ ಲೋಕಸಭೆ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸುವ ಮೂಲಕ 2029ರ ಚುನಾವಣೆಗೂ ಮುನ್ನವೇ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಶೇ.33 ಮೀಸಲಾತಿ ನೀಡಲು ಮುಂದಾಗಿದೆ.
ಆದರೆ ಕ್ಷೇತ್ರ ಪುನರ್ವಿಂಗಡೆಯಿಂದ ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕುಸಿಯುವ ಆತಂಕವನ್ನು ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಈ ಮಸೂದೆಗಳನ್ನು ವಿರೋಧಿಸಿವೆ. ಈ ಕುರಿತು ಇಂದು ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿದ್ದರು.
ಈ ವೇಳೆ ರಾಜ್ಯಸಭೆಯ ಟಿಎಂಸಿ ಉಪ ನಾಯಕಿ ಸಾಗರಿಕಾ ಘೋಷ್, ಬಂಗಾಳದಲ್ಲಿನ ಚುನಾವಣೆಯನ್ನು ಉಲ್ಲೇಖಿಸಿ ತಮ್ಮ ಎಲ್ಲಾ ಸಂಸದರು ಸಂಸತ್ತಿನಲ್ಲಿ ಹಾಜರಾಗುವುದು ಕಷ್ಟಕರ ಎಂದು ಹೇಳಿದರು ಎನ್ನಲಾಗಿದೆ.

ಸಾಗಾರಿಕ ಘೋಷ್ ಮಾತಿಗೆ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದು, ಅಂತಹ ನಿಲುವು ಸ್ವೀಕಾರಾರ್ಹವಲ್ಲ ಮತ್ತು ವಿರೋಧ ಪಕ್ಷದ ಸಂಸದರು ಮತದಾನದಿಂದ ದೂರವಿದ್ದರೆ ಅದು ಸರ್ಕಾರವನ್ನು ಬೆಂಬಲಿಸಿದಂತೆ ಎಂದು ಎಚ್ಚರಿಸಿದ್ದಾರೆ. ಮಸೂದೆಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಹಾಜರಿದ್ದು ಮತ ಚಲಾಯಿಸಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರಿಗೆ ಮಮತಾ ಬ್ಯಾನರ್ಜಿ ಅವರ ಜೊತೆ ಮಾತನಾಡಿ ನಾಳೆಯ ಮತದಾನ ವೇಳೆ ಟಿಎಂಸಿ ಎಲ್ಲಾ ಸಂಸದರು ಹಾಜರಾಗುವಂತೆ ಮನವೊಲಿಸುವ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net