ರಾಹುಲ್ ಗಾಂಧಿ ಹತಾಶೆಗೊಂಡ ಬೆಕ್ಕಿನಂತೆ ವರ್ತಿಸುತ್ತಿದ್ದಾರೆ: ಸಂಸದೆ ಕಂಗನಾ ರಣಾವತ್ ವಾಗ್ದಾಳಿ | Kangana Ranaut

ಭಾರತದ ಆರ್ಥಿಕತೆ ದುಸ್ಥಿತಿಯಲ್ಲಿ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಹತಾಶಗೊಂಡ ಬೆಕ್ಕಿನಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಹತಾಶೆಗೊಂಡ ಬೆಕ್ಕಿನಂತೆ ವರ್ತಿಸುತ್ತಿದ್ದಾರೆ: ಸಂಸದೆ ಕಂಗನಾ ರಣಾವತ್ ವಾಗ್ದಾಳಿ | Kangana Ranaut
Published on: 

ನವದೆಹಲಿ: ಭಾರತದ ಆರ್ಥಿಕತೆ ದುಸ್ಥಿತಿಯಲ್ಲಿ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಹತಾಶಗೊಂಡ ಬೆಕ್ಕಿನಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾನುವಾರ(ನ. 22) ತಾಜ್​ ಮಹಲ್​ಗೆ ಭೇಟಿ ನೀಡಿದ ವೇಳೆ ಮಾತನಾಡಿರುವ ಅವರು, ರಾಹುಲ್ ಗಾಂಧಿಯವರು ಭಾರತದ ಆರ್ಥಿಕತೆಯ ಬಗ್ಗೆ ಮಾಡಿರುವ ಟೀಕೆಗಳನ್ನು ಟೀಕಿಸಿದರು. ಭಾರತ ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

Also Read
ಏಷ್ಯಾ ಪವರ್ ಇಂಡೆಕ್ಸ್ 2026 ವರದಿ: ಏಷ್ಯಾದ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಭಾರತದ ಸ್ಥಾನ ಮತ್ತಷ್ಟು ಭದ್ರ! | powerful nation
ರಾಹುಲ್ ಗಾಂಧಿ ಹತಾಶೆಗೊಂಡ ಬೆಕ್ಕಿನಂತೆ ವರ್ತಿಸುತ್ತಿದ್ದಾರೆ: ಸಂಸದೆ ಕಂಗನಾ ರಣಾವತ್ ವಾಗ್ದಾಳಿ | Kangana Ranaut

ಇದೇ ವೇಳೆ ಆರ್​ಎಸ್​ಎಸ್​ ಮತ್ತು ಬಿಜೆಪಿಯವರು ಅನಾಗರಿಕರು, ದುರಾಸೆಯ, ಜಾತಿವಾದಿ ಮತ್ತು ಪಿತೃಪ್ರಧಾನ ಮನಸ್ಥಿತಿ ಹೊಂದಿದವರು ಎಂಬ ರಾಹುಲ್ ಗಾಂಧಿಯವರ ಮತ್ತೊಂದು ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಿತೃಪ್ರಧಾನವಾಗಿದ್ದರೆ, ಅದು ಮಹಿಳಾ ಮೀಸಲಾತಿ ಮಸೂದೆಗಾಗಿ ಯಾಕೆ ಹೋರಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.

ವಾಸ್ತವವಾಗಿ, ಈ ಮಸೂದೆಯನ್ನು ವಿರೋಧಿಸುತ್ತಿರುವುದು ಮತ್ತು ಅದರ ಅನುಷ್ಠಾನವನ್ನು ತಡೆಯುತ್ತಿರುವುದು ಕಾಂಗ್ರೆಸ್. ಮಹಿಳೆಯರ ಬಗ್ಗೆ ನಕಾರಾತ್ಮಕ ಮನಸ್ಥಿತಿ ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ತಿರುಗೇಟು ನೀಡಿದ್ದಾರೆ (ಏಜೆನ್ಸೀಸ್).